ಬೆಂಗಳೂರು:– ಗುಜರಾತ್ನ ರಾಜ್ ಕೋಟ್ನಲ್ಲಿನ ಗೇಮ್ ಝೋನ್ ನಲ್ಲಿ ಸಂಭವಿಸಿದ ಅಗ್ನಿ ದುರಂತ ಬಳಿಕ ಪಾಲಿಕೆ ಅಲರ್ಟ್ ಆಗಿದೆ.
ಕೂದಲು ಬೆಳೆಯಲು ವಿಟಮಿನ್ ಡಿ ಮಾತ್ರೆ ತೆಗೆದುಕೊಳ್ಳಬೇಕೆ!?.. ಇಲ್ಲಿದೆ ಮಾಹಿತಿ!
ಇದೀಗ ಡಿಸಿಎಂ ಸೂಚನೆಯಂತೆ ಗೇಮ್ ಝೋನ್ ಗಳ ಸುರಕ್ಷತೆ ಪರಿಶೀಲನೆಗೆ ಟೀಂ ರಚಿಸಿದ್ದು, ಪರಿಶೀಲನೆ ಶುರುವಾಗಿದೆ.
ಇನ್ನು ಬರೀ ಗೇಮ್ ಝೋನ್ ಅಷ್ಟೇ ಅಲ್ಲದೇ ಚಿತ್ರಮಂದಿರ, ಪಬ್, ರೆಸ್ಟೋರೆಂಟ್, ಸ್ಟಾರ್ ಹೊಟೇಲ್ಗಳು, ಸೂಪರ್ ಮಾರ್ಕೆಟ್ ಸೇರಿದಂತೆ ಸಾರ್ವಜನಿಕ ಸ್ಥಳಗಳಲ್ಲಿ ಸುರಕ್ಷತೆ ಪರಿಶೀಲನೆಗೆ ಪಾಲಿಕೆ ಮುಂದಾಗಿದೆ. ಸದ್ಯ ಪರಿಶೀಲನೆ ವೇಳೆ ಸುರಕ್ಷತಾಕ್ರಮ ಕೈಗೊಳ್ಳದ ಮೂರು ಗೇಮ್ ಝೋನ್ ಗಳನ್ನ ತಾತ್ಕಾಲಿಕವಾಗಿ ಬಂದ್ ಮಾಡಿರೋ ಪಾಲಿಕೆ, ನಗರದ ಗೇಮ್ ಝೋನ್ ಸೇರಿ ಎಲ್ಲೆಲ್ಲಿ ಸುರಕ್ಷತಾ ನಿಯಮ ಬ್ರೇಕ್ ಆಗಿದೆ ರಿಪೋರ್ಟ್ ನೀಡಲು ಸೂಚಿಸಿದೆ.
ಸದ್ಯ ನಗರದಲ್ಲಿ ಒಟ್ಟು 29 ಗೇಮ್ ಝೋನ್ ಗಳಿದ್ದು, ಅಲ್ಲಿ ಯಾವ ರೀತಿಯ ಸುರಕ್ಷತಾಕ್ರಮಗಳನ್ನ ಅನುಸರಿಸಲಾಗ್ತಿದೆ ಅನ್ನೋ ಬಗ್ಗೆ ಪರಿಶೀಲಿಸಲು ಪಾಲಿಕೆ ಸಜ್ಜಾಗಿದೆ.
ಯಾವ್ಯಾವ ವಲಯದಲ್ಲಿ ಎಷ್ಟು ಗೇಮ್ ಝೋನ್?
ದಕ್ಷಿಣವಲಯ: 3
ಪಶ್ಚಿಮವಲಯ:5
ಪೂರ್ವವಲಯ:5
ಬೊಮ್ಮನಹಳ್ಳಿ ವಲಯ:3
ಮಹದೇವಪುರ:4
ಯಲಹಂಕ-6
ಆರ್.ಆರ್.ನಗರ:3
ಒಟ್ಟಿನಲ್ಲಿ ಗುಜರಾತ್ ದುರಂತದ ಬಳಿಕ ನಗರದಲ್ಲೂ ಅಲರ್ಟ್ ಆಗಿರೋ ಪಾಲಿಕೆ, ಸುರಕ್ಷತಾ ಕ್ರಮಗಳನ್ನ ಅನುಸರಿಸದವರಿಗೆ ಬಿಸಿ ಮುಟ್ಟಿಸೋಕೆ ಸಜ್ಜಾಗಿದೆ.