ಬೆಂಗಳೂರು:- ಅತ್ಯಾಚಾರ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುನ ಪ್ರಜ್ವಲ್ ರೇವಣ್ಣ SIT ವಶದಲ್ಲಿದ್ದಾರೆ.
107/24 ಅಡಿಯಲ್ಲಿ ಹೊಳೆ ನರಸೀಪುರ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣ ಸಂಬಂಧ ಸೆಕ್ಷನ್ 502 ಅಡಿಯಲ್ಲಿ ಪ್ರಜ್ವಲ್ನನ್ನ ಬಂಧಿಸಲಾಗಿದೆ. ಸದ್ಯ ಆರೋಪಿ ಪ್ರಜ್ವಲ್ನನ್ನ ವಶಕ್ಕೆ ಪಡೆದಿರೋ SIT ಮೊದಲು ಆರೋಪಿ ಹೇಳಿಕೆ ಪಡೆಯಲಿದೆ. ಬಳಿಕ ಸ್ಥಳ ಮಹಜರು, ಆ ಬಳಿಕ ಸಂತ್ರಸ್ತೆಯಿಂದ ಗುರುತು ಪತ್ತೆ ಪ್ರಕ್ರಿಯೆ ನಡೆಯಲಿದೆ. ಆ ನಂತರ ಇಲ್ಲಿವರೆಗೆ ಸಿಕ್ಕಿರೋ ದಾಖಲೆ ಮುಂದಿಟ್ಟು ಪ್ರಜ್ವರನ್ನ ಎಸ್ಐಟಿ ಅಧಿಕಾರಿಗಳು ವಿಚಾರಣೆ ನಡೆಸಲಿದ್ದಾರೆ. ಒಂದುವಾರ ಫುಲ್ ಗ್ರಿಲ್ ಮಾಡಲಿದ್ದಾರೆ.
ಸಹಾಯ ಕೇಳಿ ಬಂದ ಮಹಿಳೆ ಮೇಲೆ ಅತ್ಯಾಚಾರ, ಗನ್ತೋರಿಸಿ ಮಹಿಳೆ ಮೇಲೆ ರೇಪ್..ಮನೆಗೆಲಸದಾಕೆ ಮೇಲೆ ಲೈಂಗಿಕ ದೌರ್ಜನ್ಯ ಹೀಗೆ ಸಾಲು ಸಾಲು ಆರೋಪ ಹೊತ್ತಿರುವ ಹಾಸನ ಸಂಸದ ಪ್ರಜ್ವಲ್ ರೇವಣ್ಣ ಬರೋಬ್ಬರಿ 34 ದಿನ ಅಜ್ಞಾತವಾಗಿದ್ದ. ವಿದೇಶದಲ್ಲೇ ತಲೆಮರೆಸಿಕೊಂಡಿದ್ದ. ಅದೇ ಆರೋಪಿ ನಿನ್ನೆ ಬೆಂಗಳೂರಿಗೆ ಕಾಲಿಡುತ್ತಿದ್ದಂತೆ ಎಸ್ಐಟಿ
ಅರೆಸ್ಟ್ ಮಾಡಿದೆ.
ವಿಚಾರಣೆ ವೇಳೆ..ಸಂತ್ರಸ್ಥ ಮಹಿಳೆಯರಿಗೂ ಪ್ರಜ್ವಲ್ ಗು ಯಾವಾಗಿನಿಂದ ಪರಿಚಯ..ಯಾವಾಗ ಇಬ್ಬರ ನಡುವೆ ಕ್ಲೋಸ್ ರಿಲೇಷನ್ ಶಿಪ್ ಆಯ್ತು? ವಿಡಿಯೋ ಚಿತ್ರೀಕರಣ ಮಾಡಿದ್ದರ ಹಿಂದೆ ಬ್ಲಾಕ್ ಮೇಲ್ ಮಾಡುವ ಉದ್ದೇಶವಿತ್ತಾ…?ಜೊತೆಗೆ ವಿಡಿಯೋ ಗಳು ಹೇಗೆ ವೈರಲ್ ಆಯ್ತು? ನಿಮಗೆ ಇದರ ಬಗ್ಗೆ ಮೊದಲೇ ಗೊತ್ತಿತ್ತಾ..ನೀವು ವಿದೇಶಕ್ಕೆ ಹೋಗಿದ್ದು ಯಾಕೆ..ಪ್ರಕರಣ ದಾಖಲಾಗುವ ಬಗ್ಗೆ ನಿಮಗೆ ಮಾಹಿತಿ ಇತ್ತಾ?..ನಿಮ್ಮನ್ನ ಏರ್ ಪೋರ್ಟ್ ಗೆ ಬಿಟ್ಟಿದ್ಯಾರು…ವಿದೇಶದಲ್ಲಿ ನಿಮಗೆ ಆಶ್ರಯ ಕೊಟ್ಟಿದ್ಯಾರು?..ಹಣದ ಸಹಾಯ ಮಾಡಿದವರ್ಯಾರು?..ಮಹಿಳೆಯರಿಗೆ ಯಾಕೆ ಪದೇ ಪದೇ ವಿಡಿಯೋ ಕರೆ ಮಾಡಿ ರೆಕಾರ್ಡ್ ಮಾಡಿದ್ರಿ?ವಿದೇಶದಿಂದ ಟಿಕೆಟ್ ಬುಕ್ ಮಾಡಿ ಕ್ಯಾನ್ಸಲ್ ಮಾಡಿದ್ಯಾಕೆ?ನೋಟಿಸ್ ಕೊಟ್ಟ ಬಳಿಕ ವಿಚಾರಣೆಗೆ ಆಗಮಿಸಿಲ್ಲ ಯಾಕೆ ?ವಿಡಿಯೋ ರೆಕಾರ್ಡ್ ಮಾಡಿದ್ದು ಯಾವ ಮೊಬೈಲ್ ನಲ್ಲಿ?ಆ ವಿಡಿಯೋ ರೆಕಾರ್ಡ್ ಆದ ಮೊಬೈಲ್ ಎಲ್ಲಿದೆ?ಬೇರೆ ಎಲ್ಲಾದ್ರು ವಿಡಿಯೋ ಸೇವ್ ಮಾಡಿ ಇಟ್ಟಿದ್ದೀರಾ?ಕಾರ್ತಿಕ್ ಗೆ ಈ ಅಷ್ಟು ವಿಡಿಯೋ ಲಭ್ಯವಾಗಿದ್ದು ಹೇಗೆ? ಈ ಎಲ್ಲಾ ಪ್ರಶ್ನೆಗಳನ್ನು ಪ್ರಜ್ವಲ್ ಮುಂದಿಟ್ಟಿದ್ದು ಪ್ರಜ್ವಲ್ ಎಲ್ಲಕ್ಕು ಅಸಮರ್ಪಕ ಉತ್ತರ ನೀಡ್ತಿದ್ದಾರೆ..ಮುಂದಿನ 6 ದಿನ ಕೂಡ ಪ್ರಜ್ವಲ್ ವಿಚಾರಣೆ ನಡೆಸಲಿರುವ ಎಸ್ಐಟಿ ಕೃತ್ಯ ನಡೆದ ಸ್ಥಳ ಮಹಜರು ಕೂಡ ನಡೆಸಲಿದ್ದಾರೆ.