ಬೆಂಗಳೂರು:- ಉತ್ತರ ತಾಲೂಕಿನ ಮಾಚೋಹಳ್ಳಿ ಯಲ್ಲಿ ದಂಪತಿ ನಡುವೆ ಗಲಾಟೆಯಾಗಿ ಮನನೊಂದ ಪತ್ನಿ ಮನೆ ಮೇಲಿಂದ ಹಾರಿ ಸೂಸೈಡ್ ಮಾಡಿಕೊಂಡ ಘಟನೆ ಜರುಗಿದೆ.
31 ವರ್ಷದ ಪೂಜಾ ಆತ್ಮಹತ್ಯೆಗೆ ಶರಣಾದ ಮಹಿಳೆ ಎನ್ನಲಾಗಿದೆ. ಪೊಲೀಸರು ಪತಿ ಅನಿಲ್ ಕುಮಾರ್(35)ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಎರಡು ವರ್ಷಗಳ ಹಿಂದೆ ದಂಪತಿ ಕೆಲಸಕ್ಕಾಗಿ ಬೆಂಗಳೂರಿಗೆ ಬಂದಿದ್ದರು.
ಊಟಕ್ಕೆ ಕುಳಿತಿದ್ದಾಗ ಮೊಟ್ಟೆ ತಿನ್ನುವ ವಿಚಾರಕ್ಕೆ ದಂಪತಿ ನಡುವೆ ಜಗಳ ಶುರುವಾಗಿದೆ. ‘ನಾನು ಮನೆ ಯಜಮಾನ, ನನಗೆ 1 ಮೊಟ್ಟೆ ಹೆಚ್ಚು ಬೇಕೆಂದು ನಡೆದ ಗಲಾಟೆಯಲ್ಲಿ, ಪತ್ನಿ ಪೂಜಾ ಮೇಲೆ ಅನಿಲ್ ಹಲ್ಲೆ ಮಾಡಿದ್ದಾನೆ. ಪತಿ ತಾರತಮ್ಯ ಭಾವನೆಗೆ ಬೇಸತ್ತು ಪೂಜಾ ಆತ್ಮಹತ್ಯೆಗೆ ಶರಣಾಗಿದ್ದಾಳೆ. ಸಧ್ಯ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಯುತ್ತಿದೆ