ಅಸ್ಸಾಂನ ಖಾಸಗಿ ಶಾಲೆಯೊಂದರಲ್ಲಿ ಪ್ರಪ್ರಥಮ ಬಾರಿಗೆ ಪರಿಚಯಿಸಲಾಗಿರುವ ಐರಿಸ್ ಎಂಬ ಕೃತಕ ಬುದ್ಧಿಮತ್ತೆಯ ಶಿಕ್ಷಕಿಯು ವಿದ್ಯಾರ್ಥಿಗಳನ್ನು ತನ್ನ ಉತ್ತರದ ಮೂಲಕ ಖುಷಿಗೊಳಿಸಿದ್ದಾಳೆ. ಆಕೆಯ ಉತ್ತರಕ್ಕಾಗಿ ವಿದ್ಯಾರ್ಥಿಗಳು ಮತ್ತೆ ಮತ್ತೆ ಕಾಯುವಂತೆ ಈ ಶಿಕ್ಷಕಿ ಮಾಡಿದ್ದಾಳೆ.
ಮನುಷ್ಯನ ದೇಹಾಕೃತಿ ಹೊಂದಿರುವ ಈ ಯಂತ್ರಚಾಲಿತ ಕೃತಕ ಬುದ್ಧಿಮತ್ತೆ ಶಿಕ್ಷಕಿಯು ಹಿಮೋಗ್ಲೋಬಿನ್ ಎಂದರೇನು ಎಂಬ ಪ್ರಶ್ನೆಗೆ ಎಲ್ಲ ಬಗೆಯ ವಿವರಗಳನ್ನು ವಿದ್ಯಾರ್ಥಿಗಳಿಗೆ ನೀಡಿದಳು ಎಂದು ಶಾಲಾ ಶಿಕ್ಷಕರೊಬ್ಬರು ತಿಳಿಸಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿರುವ ರಾಯಲ್ ಗ್ಲೋಬಲ್ ಶಾಲೆಯ ವಕ್ತಾರರು, “ಪ್ರಶ್ನೆಗಳು ಪಠ್ಯಕ್ರಮದ ಕುರಿತಾಗಿರಲಿ ಅಥವಾ ಇನ್ನಾವುದೇ ಪ್ರಶ್ನೆಯಾಗಿರಲಿ