ಬೆಂಗಳೂರು: ಅರಬ್ಬಿ ಸಮುದ್ರದಲ್ಲಿ ಪ್ರಬಲ ಮಾರುತಗಳ ಪರಿಣಾಮ ರಾಜ್ಯಾದ್ಯಂತ ಮೇ 31 ರಿಂದ ಜೂನ್ 5 ವರೆಗೂ ಹಗುರ ಸಾಧಾರಣ ಮಳೆಯಾಗಲಿದೆ. ಅದರಲ್ಲೂ ಮೇ 31 ರಿಂದ ಜೂನ್ 3 ವರೆಗೂ ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಭಾರೀ ಗಾಳಿ ಅಬ್ಬರದ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ದೇಶದ ದಕ್ಷಿಣ ಪ್ರರ್ಯಾಯ ಪ್ರಸ್ಥಭೂಮಿ ಭಾಗವಾದ ಅಕ್ಷಾಂಶ 8° ಉತ್ತರಕ್ಕೆ ವಿರುದ್ಧ ದಿಕ್ಕಿನಿಂದ ಪ್ರಬಲವಾದ ಗಾಳಿಯು ಬೀಸುತ್ತಿದೆ. ಜತೆ ದಕ್ಷಿಣ ಕೇರಳದ ಆಗ್ನೇಯ ಆರೇಬಿಯನ್ ಸಮುದ್ರದ ಉಷ್ಣವಲಯದಲ್ಲಿ ಚಂಡಮಾರುತ ಪರಿಚಲನೆಯು ಗೋಚರವಾಗಿದೆ.
Mixer Grinder: ಅಪ್ಪಿತಪ್ಪಿಯೂ ಮಿಕ್ಸಿಯಲ್ಲಿ ಈ ವಸ್ತುಗಳನ್ನು ಗ್ರೈಂಡ್ ಮಾಡಲೇಬಾರದು..!
ಕೇರಳದ ಪಶ್ಚಿಮಕ್ಕೆ ಕರಾವಳಿಯುದ್ದಕ್ಕ ಬೀಸುತ್ತಿರುವ ಪ್ರಬಲ ಮಾರುತಗಳ ಪರಿಣಾಮ ಮುಂದಿನ 7 ದಿನಗಳಲ್ಲಿ ರಾಜ್ಯದಾದ್ಯಂತ ಅಲ್ಲಲ್ಲಿ ಮತ್ತು ಕೆಲವೆಡೆ ವ್ಯಾಪಕವಾಗಿ ಬಿರುಗಾಳಿ ಸಹಿತ ಗುಡುಗು-ಸಿಡಿಲಿನಿಂದ ಕೂಡಿದ ಹಗುರದಿಂದ ಸಾಧಾರಣ ಮಳೆಯಾಗಲಿದೆ ಎಂದು ಕರ್ನಾಟಕ ವಿಪತ್ತು ನಿರ್ವಹಣಾ ಪ್ರಾಧಿಕಾರ ಮಾಹಿತಿ ಹಂಚಿಕೊಂಡಿದೆ.
ದಕ್ಷಿಣ ಒಳನಾಡಿನಲ್ಲಿ ಜೋರು ಮಳೆ
ಜೂನ್ 1 ರಿಂದ 3ರವರೆಗೆ ದಕ್ಷಿಣ ಒಳನಾಡು ಜಿಲ್ಲೆಗಳಲ್ಲಿ ಅಲ್ಲಲ್ಲಿ ಭಾರಿ ಮಳೆಯಾಗುವ ಸಾಧ್ಯತೆಗಳಿದೆ. ಹಾಗೂ ಮೇ 31 ರಿಂದ ಜೂನ್ 3 ರವರೆಗೆ ರಾಜ್ಯದಾದ್ಯಂತ ಪ್ರಬಲ ಗಾಳಿಯೊಂದಿಗೆ ಮಳೆಯಾಗುವ ಸಾಧ್ಯತೆಗಳಿದೆ ಎಂದು ತಿಳಿಸಲಾಗಿದೆ.
ಕರಾವಳಿಯ ಕೆಲವೆಡೆ ಮತ್ತು ಒಳನಾಡಿನ ಒಂದೆರಡು ಕಡೆಗಳಲ್ಲಿ ಮಳೆಯಾಗಿದೆ. ಪ್ರಮುಖವಾಗಿ ದಕ್ಷಿಣ ಕನ್ನಡ ಜಿಲ್ಲೆ ಮಂಗಳೂರು ವಿಮಾನ ನಿಲ್ದಾಣ, ಬೆಳ್ತಂಗಡಿ ಮತ್ತು ಚಿಕ್ಕಮಗಳೂರು ಜಿಲ್ಲೆಯ ಕೊಟ್ಟಿಗೆಹಾರದಲ್ಲಿ ತಲಾ 3 ಸೆಂ.ಮೀ. ಮಳೆಯಾಗಿದೆ.
2-3 ದಿನದಲ್ಲಿ ಮುಂಗಾರು ಎಂಟ್ರಿ
ನೈರುತ್ಯ ಮುಂಗಾರು ಮೇ 30 2024 ರಂದು ಕೇರಳದ ರಾಜ್ಯವನ್ನು ಪ್ರವೇಶಿಸಿದ್ದು. ಮುಂದಿನ 2-3 ದಿನಗಳಲ್ಲಿ ನೈಋತ್ಯ ಮುಂಗಾರು ಕರ್ನಾಟಕದ ಕೆಲವು ಭಾಗಗಳಿಗೆ ವ್ಯಾಪಿಸಲಿದೆ ಎಂದು ಕರ್ನಾಟಕ ವಿಪತ್ತು ನಿರ್ವಹಣಾ ಪ್ರಾಧಿಕಾರ ಮಾಹಿತಿ ನೀಡಿದೆ.