ಹಾಸನ: ಕೆ.ಆರ್. ನಗರ ಸಂತ್ರಸ್ತ ಮಹಿಳೆ ಅಪಹರಣ ಪ್ರಕರಣದಲ್ಲಿ ಭವಾನಿ ರೇವಣ್ಣ ಅವರಿಗೆ ವಿಚಾರಣೆಗೆ ಹಾಜರಾಗುವಂತೆ ಎಸ್ಐಟಿ ಮತ್ತೊಂದು ನೋಟಿಸ್ ನೀಡಿದೆ. 15-05-24 ರಂದು ನೀಡಿದ ನೋಟಿಸ್ಗೆ ಹೊಳೆನರಸೀಪುರದ ಚೆನ್ನಾಂಬಿಕಾ ನಿವಾಸದಲ್ಲಿ ಸ್ಪಷ್ಟನೆ ನೀಡುವುದಾಗಿ ತಿಳಿಸಿದ್ದೀರಿ. ಆದರೆ ಈ ಹಿಂದೆ ನೀಡಿದ್ದ ನೋಟಿಸ್ಗೆ ನೀವು ಉತ್ತರಿಸಿಲ್ಲ. ಈ ಪ್ರಕರಣದಲ್ಲಿ ನೀವು ವಿಚಾರಣೆಗೆ ಒಳಪಡುವ ಅವಶ್ಯಕತೆ ಇದೆ. ಆದ್ದರಿಂದ ಜೂ.1 ರಂದು ಖುದ್ದು ಹಾಜರಾಗುವಂತೆ ನೋಟಿಸ್ ನೀಡಿದೆ
ಮಹಿಳಾ ಅಧಿಕಾರಿಗಳೊಂದಿಗೆ ಜೂನ್ 1 ರಂದು ಬೆಳಗ್ಗೆ 10 ರಿಂದ ಸಂಜೆ 5 ಗಂಟೆ ಒಳಗೆ ವಿಚಾರಣೆಗೆ ಆಗಮಿಸುತ್ತೇವೆ. ಆ ಸಂದರ್ಭ ಖುದ್ದು ಮನೆಯಲ್ಲಿ ಹಾಜರಿರಬೇಕೆಂದು ಎಸ್ಐಟಿ ಅಧಿಕಾರಿಗಳು ನೋಟಿಸ್ ನೀಡಿದ್ದಾರೆ. ಆದರೆ, ಕಳೆದ ಹದಿನೈದು ದಿನಗಳಿಂದ ಭವಾನಿ ರೇವಣ್ಣ ಅವರು ಯಾರ ಸಂಪರ್ಕಕ್ಕೂ ಸಿಕ್ಕಿಲ್ಲ.
ಮತ್ತೊಂದು ಬಿಗ್ ಅಪ್ಡೇಟ್.! LPG ಸಿಲಿಂಡರ್ ಸಬ್ಸಿಡಿ ಹಣ ಪಡೆಯಲು ಜೂನ್ 1 ರೊಳಗೆ ಈ ಕೆಲಸ ಕಡ್ಡಾಯ!
ಮೇ 4 ರಂದು ಸಂತ್ರಸ್ತೆಯರ ಸ್ಥಳ ಮಹಜರ್ ವೇಳೆ ಹೊಳೆನರಸೀಪುರ ಮನೆಯಲ್ಲಿ ಭವಾನಿ ರೇವಣ್ಣ ಹಾಜರಿದ್ದರು. ಮೇ 6 ರಂದು ಅವರನ್ನು ಜಿಲ್ಲೆಯ ಜೆಡಿಎಸ್ ಶಾಸಕರು ಹಾಗೂ ಮಾಜಿ ಶಾಸಕರು ಭೇಟಿಯಾಗಿದ್ದರು. ಭೇಟಿ ಬಳಿಕ ಮನೆಯಿಂದ ಹೋದವರು ಯಾರ ಸಂಪರ್ಕಕ್ಕೂ ಸಿಕ್ಕಿಲ್ಲ.
ಜೈಲುಪಾಲಾಗಿದ್ದ ಪತಿ ರೇವಣ್ಣ ಅವರನ್ನೂ ಭೇಟಿಯಾಗಿರಲಿಲ್ಲ. ರೇವಣ್ಣ ಜೈಲಿನಿಂದ ಬಿಡುಗಡೆ ಆದರೂ ಪತಿಯನ್ನ ಭೇಟಿಯಾಗಲು ಬಂದಿರಲಿಲ್ಲ. ಕಳೆದ ಹದಿನೈದು ದಿನಗಳಿಂದಲೂ ನಿಗೂಢ ಸ್ಥಳದಲ್ಲೇ ಇದ್ದಾರೆ ಎನ್ನಲಾಗಿದೆ. ಭವಾನಿ ರೇವಣ್ಣ ಎಲ್ಲಿದ್ದಾರೆಂಬ ಬಗ್ಗೆ ಎಸ್ಐಟಿ ಮಾಹಿತಿ ಕಲೆ ಹಾಕುತ್ತಿದೆ. ಇತ್ತ ನ್ಯಾಯಾಲಯದಲ್ಲಿ ಇಂದು ನಿರೀಕ್ಷಣಾ ಅರ್ಜಿ ವಜಾ ಆದರೆ ಭವಾನಿ ರೇವಣ್ಣ ಬಂಧನ ಸಾಧ್ಯತೆ ಇದೆ. ಈ ನಡುವೆ ಭವಾನಿಗೆ ಮೊದಲ ನೋಟಿಸ್ ನೀಡಿದ ಎಸ್ಐಟಿ ಜೂನ್ 1 ರಂದು ಖುದ್ದು ಮನೆಯಲ್ಲಿ ಹಾಜರಿರಬೇಕು ಎಂದು ಸೂಚಿಸಿದೆ.