ಬೆಂಗಳೂರು: ಪ್ರಜ್ವಲ್ ರೇವಣ್ಣ ಅವರು ಭಾರತದಿಂದ ಹೊರಗೆ ಹೋಗುವ ಕಾರ್ಯಕ್ರಮವನ್ನು ಪ್ರಾಯೋಜಿಸಿದ್ದು ಬಿಜೆಪಿ. ಪ್ರಧಾನಿ ಮೋದಿ, ಬಿಜೆಪಿ, ಅಮಿತ್ ಶಾ ಹಾಗೂ ಯಡಿಯೂರಪ್ಪ ಅವರೇ ಪ್ಲ್ಯಾನ್ ಮಾಡಿ ವಿದೇಶಕ್ಕೆ ಕಳುಹಿಸಿದ್ದರು ಎಂದು ಯುವ ಕಾಂಗ್ರೆಸ್ ಅಧ್ಯಕ್ಷ ಮೊಹಮ್ಮದ್ ಹಾರಿಸ್ ನಲಪಾಡ್ ಆರೋಪಿಸಿದ್ದಾರೆ.
ಪ್ರಜ್ವಲ್ ರೇವಣ್ಣ ಬೆಂಗಳೂರಿಗೆ ವಾಪಸ್ ಆದ ಬಗ್ಗೆ ಬೆಂಗಳೂರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮಾತನಾಡಿದ ನಲಪಾಡ್, ಪ್ರಜ್ವಲ್ ರೇವಣ್ಣ ಅವರು ಭಾರತದಿಂದ ಹೊರಗೆ ಹೋಗುವ ಕಾರ್ಯಕ್ರಮವನ್ನು ಪ್ರಾಯೋಜಿಸಿದ್ದು ಬಿಜೆಪಿ ಎಂದು ಆಕ್ರೋಶ ಹೊರಹಾಕಿದ್ದಾರೆ.
ಮತ್ತೊಂದು ಬಿಗ್ ಅಪ್ಡೇಟ್.! LPG ಸಿಲಿಂಡರ್ ಸಬ್ಸಿಡಿ ಹಣ ಪಡೆಯಲು ಜೂನ್ 1 ರೊಳಗೆ ಈ ಕೆಲಸ ಕಡ್ಡಾಯ!
ಏಪ್ರಿಲ್ 26ರಂದು ಕರ್ನಾಟದಲ್ಲಿ ಮೊದಲ ಹಂತದ ಚುನಾವಣೆ ಮುಗಿಯುತ್ತಿದ್ದಂತೆ ರಾಜತಾಂತ್ರಿಕ ಪಾಸ್ಪೋರ್ಟ್ನೊಂದಿಗೆ ಅವರನ್ನು ವಿದೇಶಕ್ಕೆ ಕಳುಹಿಸಲಾಗಿದೆ. ಇದು ಬಿಜೆಪಿಯ ಪ್ರಾಯೋಜಿತ ಕಾರ್ಯಕ್ರಮ. ಇದೀಗ 7ನೇ ಹಂತದ ಮತದಾನ ನಡೆಯಬೇಕಿರುವ ಸಂದರ್ಭದಲ್ಲಿ ವಿದೇಶದಿಂದ ಕರೆಸಿದ್ದಾರೆ. ಬಿಜೆಪಿ, ನರೇಂದ್ರ ಮೋದಿ ಜೀ , ಅಮಿತ್ ಶಾ ಮತ್ತು ನಮ್ಮ ಯಡಿಯೂರಪ್ಪ ಜಿ ಎಲ್ಲರೂ ಒಟ್ಟಾರೆ ಪ್ಲ್ಯಾನ್ ಮಾಡಿ ಹೊರಗೆ ಕಳುಹಿಸಿದ್ದರು.
ನೀವೇ ಯೋಚನೆ ಮಾಡಿ ಯಾರಾದರೂ ಕುಟುಂಬಸ್ಥರಿಗೂ ಹೇಳದೇ ಮನೆ ಬಿಟ್ಟು ಹೋಗ್ತಾರಾ ಎಂದು ಪ್ರಶ್ನೆ ಮಾಡಿದ್ದಾರೆ. ಇದೇ ವೇಳೆ ನಾನೂ ಈಗಷ್ಟೇ ದೆಹಲಿಯಿಂದ ಬರ್ತಿದ್ದೇನೆ ಅಂತಾ ಬೋರ್ಡಿಂಗ್ ಪಾಸ್ ತೋರಿಸಿದ ನಳಪಾಡ್, ನಾನು ದೆಹಲಿಯಿಂದ ಬರುತ್ತಿರುವಾಗಲೇ ಆಕಸ್ಮಿಕವಾಗಿ ಪ್ರಜ್ವಲ್ ಸಹ ಬರ್ತಿದ್ದಾನೆ ಅಂತ ಅಸಮಾಧಾನ ಹೊರಹಾಕಿದರು.