ಬೆಂಗಳೂರು: ಆ ರಸ್ತೆ ದಾಟಲು ಸ್ಕೈವಾಕ್ ಇಲ್ಲದೆ ನಿತ್ಯ ಸಾವಿರಾರು ವಿದ್ಯಾರ್ಥಿಗಳು ಪರದಾಡ್ತಿದ್ರು. ಬಿಬಿಎಂಪಿ ಎರಡು ವರ್ಷದ ಹಿಂದೆ ಸ್ಕೈವಾಕ್ ಕಾಮಗಾರಿಯನ್ನೂ ಆರಂಭಿಸ್ತು. ಇನ್ನೇನು ಸ್ಕೈವಾಕ್ ಉದ್ಘಾಟನೆ ಆಯ್ತು ಅನ್ನೊ ವೇಳೆಗೆ ಕೆಲಸ ನಿಂತು ಹೋಗಿದೆ. ಸ್ಕೈವಾಕ್ ಹತ್ತಲು-ಇಳಿಯಲು ಮೆಟ್ಟಿಲು ಹಾಕಲು ಜಾಗವಿಲ್ಲದೆ ನಿತ್ಯ ಕಾಮಗಾರಿ ಸ್ಥಗಿತವಾಗಿದೆ. ಕಾಮಗಾರಿ ಆರಂಭಿಸುವಾಗ ಸರಿಯಾದ ಯೋಜನೆ ರೂಪಿಸದ ಪಾಲಿಕೆ ವಿರುದ್ಧ ವಿದ್ಯಾರ್ಥಿಗಳು ಸಿಡಿದೆದ್ರು.
ಅವಾಂತರಕ್ಕೆ ಕಾರಣ ಇಲ್ಲಿರುವ ಸ್ಕೈವಾಕ್..ರೇಸ್ ಕೋರ್ಸ್ ರಸ್ತೆ ಭಾರತೀಯ ವಿದ್ಯಾಭವನ ಬಳಿ ಬಿಬಿಎಂಪಿ ಯಡವಟ್ಟಿನಿಂದ ಸ್ಕೈವಾಕ್ ಕಾಮಗಾರಿ ಸ್ಥಗಿತವಾಗಿದೆ. ಕಾಮಗಾರಿ ಬಹುತೇಕ ಮುಗಿದು ಮೆಟ್ಟಲಿ ಅಳವಡಿಕೆಗೆ ಜಾಗವಿಲ್ಲದೇ ಈ ಕೆಲಸ ಸ್ಥಗಿತಗೊಂಡಿದ್ದು, ಬಿಬಿಎಂಪಿ ಮಾಡಿದ ಈ ಅವಾಂತರಕ್ಕೆ ವಿದ್ಯಾರ್ಥಿಗಳು ಆಕ್ರೋಶ ವ್ಯಕ್ತಪಡಿಸ್ತಿದ್ದಾರೆ. ಸ್ಕೈವಾಕ್ ಕೆಲಸ ಆರಂಭಿಸೋ ಮೊದಲೇ ಪ್ಲಾನ್ ಮಾಡಬೇಕಿತ್ತಲ್ವಾ ಅಂತ ವಿದ್ಯಾರ್ಥಿಗಳ ಪ್ರಶ್ನಿಸ್ತಿದ್ದಾರೆ.
ಮತ್ತೊಂದು ಬಿಗ್ ಅಪ್ಡೇಟ್.! LPG ಸಿಲಿಂಡರ್ ಸಬ್ಸಿಡಿ ಹಣ ಪಡೆಯಲು ಜೂನ್ 1 ರೊಳಗೆ ಈ ಕೆಲಸ ಕಡ್ಡಾಯ!
ರೇಸ್ ಕೋರ್ಸ್ ರಸ್ತೆ ಅಕ್ಕಪಕ್ಕದಲ್ಲಿ ಭಾರತೀಯ ವಿದ್ಯಾ ಭವನ ಹಾಗೂ ಸರ್ಕಾರಿ ಆರ್.ಸಿ. ಕಾಲೇಜಿದೆ. ಬಸ್ ಗಾಗಿ ರಸ್ತೆಯ ಒಂದು ಬದಿಯಿಂದ ಇನ್ನೊಂದು ಬದಿ ಹೋಗಲು ವಿದ್ಯಾರ್ಥಿಗಳ ನಿತ್ಯ ಪರದಾಡ್ತಿದ್ದು ವೇಗವಾಗಿ ಬರುವ ವಾಹನಗಳಿಂದ ತಪ್ಪಿಸಿಕೊಳ್ಳಲು ವಿದ್ಯಾರ್ಥಿಗಳ ಹರಸಾಹಸ ಪಡುವಂತಾಗಿದೆ. ಖಾಸಗಿ ಕಂಪನಿ ಹಾಗೂ ಬಿಬಿಎಂಪಿ ಸಹಭಾಗಿತ್ವದಲ್ಲಿ ಕಾಮಗಾರಿ 2022ರಲ್ಲಿ ಕಾಮಗಾರಿ ಆರಂಭ ಮಾಡಿ,
ಪಾಲಿಕೆ ಹತ್ತು ತಿಂಗಳ ಗಡುವು ನೀಡಿತ್ತು. ಮಂದಗತಿಯಲ್ಲಿ ಕಾಮಗಾರಿ ಮಾಡ್ತಿದ್ರು. ಈಗ ಹೇಗೋ ಕೊನೆಯ ಹಂತಕ್ಕೆ ಬಂದಿತ್ತು. ಆದರೆ ಕಾಮಗಾರಿ ಮುಕ್ತಾಯ ಹಂತಕ್ಕೆ ಬರ್ತಿದ್ದಂತೆ ಮೆಟ್ಟಿಲು ಹಾಕಲು ಜಾಗದ ಸಿಕ್ಕಿಲ್ಲ. ಭಾರತೀಯ ವಿದ್ಯಾ ಭವನ ಆವರಣದೊಳಗೆ ಮೆಟ್ಟಿಲು ಹಾಕಲು ಕಾಲೇಜಿನ ವಿರೋಧ ಮಾಡ್ತಿದೆಯಂತೆ. ಹೀಗಾಗಿ ಕೆಲಸ ನಿಲ್ಲಿಸಿ ಖಾಸಗಿ ಸಂಸ್ಥೆ ನಾಪತ್ತೆಯಾಗಿದೆ. ಶೀಘ್ರ ಕಾಮಗಾರಿ ಮುಗಿಸಿ ಈ ಹೆಣಗಾಟದಿಂದ ಮುಕ್ತಿ ನೀಡಿ ಅನ್ನೋದು ವಿದ್ಯಾರ್ಥಿಗಳ ಆಗ್ರಹಿಸಿದ್ದಾರೆ.