ಬೆಂಗಳೂರು:– ಹೊಸ ಹೊಸ ತಂತ್ರಜ್ಞಾನದ ಬಳಕೆಗೆ ಮುಂದಾದ ನಮ್ಮ ಮೆಟ್ರೋ ಇದೀಗ ಮತ್ತೊಂದು ಪ್ರಯೋಗ ಮಾಡಿದೆ. ಈ ಮೂಲಕ ನಮ್ಮ ಮೆಟ್ರೋ ಇದೀಗ ಹೊಸ ಮೈಲಿಗಲ್ಲು ಸಾಧಿಸಿದೆ.
ಭಾರತ-ಪಾಕಿಸ್ತಾನ್ ಹೈವೋಲ್ಟೋಜ್ ಮ್ಯಾಚ್.. ಪಂದ್ಯಕ್ಕೆ ಉಗ್ರರಿಂದ ‘ಒಂಟಿ ತೋಳ’ ದಾಳಿ ಬೆದರಿಕೆ!
ಇಷ್ಟು ದಿನ ವೃತ್ತಾಕಾರದ ಮಾರ್ಗವಾಗಿ ಅಂಡರ್ ಗ್ರೌಂಡ್ ಕಾಮಗಾರಿ ಮಾಡಿ ಯಶಸ್ವಿಯಾಗಿದ್ದ ಬಿಎಂಆರ್ಸಿಎಲ್ ಇದೀಗ ಬಾಕ್ಸ್ ಆಕಾರದಲ್ಲಿ ಕಾಮಗಾರಿ ಮಾಡಿ ಸಕ್ಸಸ್ ಆಗಿದೆ.
ದೇಶದಲ್ಲಿ ಇದೇ ಮೊದಲ ಬಾರಿಗೆ ಬಾಕ್ಸ್ ಆಕಾರದಲ್ಲಿ ಮೆಟ್ರೋ ಸುರಂಗ ಮಾರ್ಗ ಕಾಮಗಾರಿ ಮಾಡಲಾಗಿದೆ. 77 ಮೀಟರ್ ಅಗಲದ ಬಾಕ್ಸ್ ಪುಶಿಂಗ್ ಟೆಕ್ನಾಲಜಿ ಬಳಕೆ ಮಾಡಿ ನಾಗವಾರದ ಔಟರ್ ರಿಂಗ್ ರೋಡ್ ಬಳಿ ಮೆಟ್ರೋ ಕಾಮಗಾರಿ ನಡೆಸಲಾಗುತ್ತಿದೆ. ನಾಗವಾರದ ORR ರೋಡ್ನ ಮೇಲ್ಸೇತುವೆ ಕೆಳಗೆ ಸುರಂಗ ಮಾರ್ಗದ ಕಾಮಗಾರಿ ನಡೆಯುತ್ತಿದೆ. ಸಧ್ಯ ಬಾಕ್ಸ್ ಪುಶಿಂಗ್ ಟೆಕ್ನಾಲಜಿ ಕಾಮಗಾರಿ ಯಶಸ್ವಿ ಬಗ್ಗೆ ಬಿಎಂಆರ್ಸಿಎಲ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಇನ್ನು ಕಾಳೇನ ಅಗ್ರಹಾರದಿಂದ ನಾಗವಾರದವರೆಗೆ 21.26 ಕಿ.ಮೀ. ಉದ್ದದ ಹೊಸ ಮಾರ್ಗವನ್ನು ಮಾರ್ಚ್ 2025ರ ಒಳಗೆ ಪೂರ್ಣಗೊಳಿಸಲು ಯೋಜಿಸಲಾಗಿದೆ. ಈ ಮಾರ್ಗ ಪೂರ್ಣಗೊಂಡರೆ ಕಾರ್ಯಾಚರಣೆ ಜಾಲವು 117 ಕಿ.ಮೀಗೆ ವಿಸ್ತರಣೆಗೊಳ್ಳಲಿದೆ.
ಸೆಂಟ್ರಲ್ ಸಿಲ್ಕ್ ಬೋರ್ಡ್ ಜಂಕ್ಷನ್ನಿಂದ ಹೆಬ್ಬಾಳ ಜಂಕ್ಷನ್ ಮೂಲಕ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ (58 ಕಿ.ಮೀ) ಹಂತ 2ಎ ಮತ್ತು 2ಬಿ ಯೋಜನೆಗೆ ₹ 14788 ಕೋಟಿ ವೆಚ್ಚವಾಗುತ್ತಿದೆ. ಈ ಕಾಮಗಾರಿಯನ್ನು 2026ರ ವೇಳೆಗೆ ಪೂರ್ಣಗೊಳಿಸಲು ಯೋಜಿಸಲಾಗಿದೆ. ಈ ಯೋಜನೆಗೆ ರಾಜ್ಯ ಸರ್ಕಾರವೇ ಇದುವರೆಗೆ ₹ 4775 ಕೋಟಿ ಬಿಡುಗಡೆ ಮಾಡಿದೆ.