ಭಾರತ-ಪಾಕ್ ಪಂದ್ಯಕ್ಕೆ ಉಗ್ರರಿಂದ ‘ಒಂಟಿ ತೋಳ’ ದಾಳಿ ಬೆದರಿಕೆ ಹಾಕಲಾಗಿದೆ. ಇದರ ಬೆನ್ನಲ್ಲೇ ನ್ಯೂಯಾರ್ಕ್ ನಗರದಾದ್ಯಂತ ಪೊಲೀಸ್ ಭದ್ರತಾ ವ್ಯವಸ್ಥೆಯನ್ನು ಮತ್ತಷ್ಟು ಹೆಚ್ಚಿಸಲಾಗಿದೆ. ಐಸಿಸ್-ಕೆ ಹೆಸರಿನ ಭಯೋತ್ಪಾದಕ ಸಂಘಟನೆಯು “ಲೋನ್ ವುಲ್ಫ್” ದಾಳಿ ನಡೆಸುವುದಾಗಿ ಘೋಷಿಸಿದೆ.
ಈ ಬಾರಿಯ ಟಿ20 ವಿಶ್ವಕಪ್ ಅನ್ನು ಅಮೆರಿಕ ಮತ್ತು ವೆಸ್ಟ್ ಇಂಡೀಸ್ ಜಂಟಿಯಾಗಿ ಆಯೋಜಿಸುತ್ತಿದೆ. ಅದರಂತೆ ಅಮೆರಿಕದ ಮೂರು ನಗರಗಳಲ್ಲಿ ಟೂರ್ನಿ ನಡೆಯಲಿದೆ. ಅದರಲ್ಲೂ ಹೈವೋಲ್ಟೇಜ್ ಪಂದ್ಯವು ನ್ಯೂಯಾರ್ಕ್ನ ನಸ್ಸೌ ಕೌಂಟಿಯ ಐಸೆನ್ಹೋವರ್ ಸ್ಟೇಡಿಯನಲ್ಲಿ ಜರುಗಲಿದೆ. ಈ ಪಂದ್ಯದ ವೇಳೆ ದಾಳಿ ನಡೆಸುವುದಾಗಿ ಇದೀಗ ಐಸಿಸ್-ಕೆ ಉಗ್ರ ಸಂಘಟನೆ ಷೋಷಿಸಿದೆ.
ವರದಿಯ ಪ್ರಕಾರ , ISIS-K ಕೇವಲ ಭಾರತ-ಪಾಕಿಸ್ತಾನ ಪಂದ್ಯಕ್ಕೆ ಮಾತ್ರ ಬೆದರಿಕೆಯೊಡ್ಡಿದ್ದು, ಇಂಡೊ-ಪಾಕ್ ಪಂದ್ಯದ ವೇಳೆ ‘ಒಂಟಿ ತೋಳ’ ದಾಳಿಯನ್ನು (ಒಬ್ಬ ದಾಳಿಕೋರ) ನಡೆಸುವಂತೆ ತನ್ನ ಸದಸ್ಯರಲ್ಲಿ ಕೇಳಿಕೊಂಡಿದೆ. ಇದರ ಬೆನ್ನಲ್ಲೇ ಅಲರ್ಟ್ ಆಗಿರುವ ನ್ಯೂಯಾರ್ಕ್ ಪೊಲೀಸರು ನಗರದಾತ್ಯಂತ ಕಟ್ಟೆಚ್ಚರವಹಿಸಿದೆ. ಅಲ್ಲದೆ ಭಾರತ ಮತ್ತು ಪಾಕಿಸ್ತಾನ್ ನಡುವಣ ಪಂದ್ಯಕ್ಕೆ ಭಾರೀ ಭದ್ರತಾ ವ್ಯವಸ್ಥೆ ಒದಗಿಸಲಿದ್ದೇವೆ ನಸ್ಸೌ ಕೌಂಟಿಯ ಪೊಲೀಸ್ ಕಮಿಷನರ್ ಪ್ಯಾಟ್ರಿಕ್ ರೈಡರ್ ತಿಳಿಸಿದ್ದಾರೆ