ಬಾಗಲಕೋಟೆ:– ಸಿಲಿಂಡರ್ ಸ್ಫೋಟದಿಂದ ಬಡಂಗ್ ಫ್ಯಾಕ್ಟರಿ ಧ್ವಂಸವಾಗಿರುವ ಘಟನೆ ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ರಬಕವಿ ನಗರದ ಕಂಟಿ ಬಸವೇಶ್ವರ ಹತ್ತಿರ ಜರುಗಿದೆ.
Pension Rules: ಗಂಡನ ಸಾವಿನ ನಂತರ ಪತ್ನಿಗೆ ಪಿಂಚಣಿಯ ಹಕ್ಕು ಇದೆಯೇ? EPFO ನಿಯಮದಲ್ಲಿ ಏನಿದೆ..?
ಘಟನೆಯಿಂದ ಮಧ್ಯರಾತ್ರಿ 1 ಗಂಟೆಗೆ ಸಿಲಿಂಡರ್ ಸ್ಫೋಟ ಗೋಕಾಕ್ ಬಡಂಗ ಫ್ಯಾಕ್ಟರಿ ಸಂಪೂರ್ಣ ಸುಟ್ಟು ಕರಕಲಾಗಿದೆ. ಬೆಂಕಿ ಆರಿಸಲು ಅಗ್ನಿಶಾಮಕ ದಳದ ಸಿಬ್ಬಂದಿ ಹರಸಾಹಸ ಪಟ್ಟರು. ಗೋಕಾಕ್ ಬಡಂಗ್ ಫ್ಯಾಕ್ಟರಿ ಮಹಮ್ಮದ್ ಹುಸೇನ್ ಸಾಬ್ ಗೋಕಾಕ್ ರವರಿಗೆ ಸೇರಿದ್ದು ಎನ್ನಲಾಗಿದೆ.
ಸಿಲಿಂಡರ್ ಸ್ಫೋಟದ ಅಗ್ನಿ ಅವಘಡಕ್ಕೆ ಸುಮಾರು 50 ಲಕ್ಷ ಬೆಲೆಬಾಳುವ ವಸ್ತುಗಳು ಹಾನಿ ಗಿಡಾಗಿವೆ. ಗೋಕಾಕ್ ಬಡಂಗ ಫ್ಯಾಕ್ಟರಿಯಲ್ಲಿ ಕಾರ್ಮಿಕರಿಗೆ ಯಾವುದೇ ಪ್ರಾಣಾಯ ಸಂಭವಿಸಿಲ್ಲ. ಸಿಲಿಂಡರ್ ಸ್ಫೋಟ ಅಗ್ನಿ ಅವಘಡ ಕುರಿತು ತೇರದಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ. ಈ ಅಗ್ನಿ ದುರಂತಕ್ಕೆ ಮತ್ತೇನು ಕಾರಣ ಎಂಬುದರ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.
ಪ್ರಕಾಶ ಕುಂಬಾರ
ಬಾಗಲಕೋಟೆ