ಬೆಂಗಳೂರು: ವಿಡಿಯೋ ಮೂಲಕ ಮೇ ,31ರಂದು ಎಸ್ ಐಟಿ ಮುಂದೆ ಬರ್ತಿನಿ ಎಂದಿದ್ದ ಪ್ರಜ್ವಲ್ ರೇವಣ್ಣ ನಾಳೆ ಅಂದ್ರೆ 31ರಂದು ಮಧ್ಯಾಹ್ನ 12:05ಕ್ಕೆ ಮುನಿಚ್ ನಿಂದ್ ಬೆಂಗಳೂರಿಗೆ ವಿಮಾನ ಟಿಕೆಟ್ ನ ಪ್ರಜ್ವಲ್ ಬುಕ್ ಮಾಡಿದ್ದಾರೆ. ಇನ್ನೂ ಇದಕ್ಕೆ ಸಂಸದ ಪ್ರಜ್ವಲ್ ರೇವಣ್ಣ ವಿಮಾನ ನಿಲ್ದಾಣಕ್ಕೆ ಬರುತ್ತಿದ್ದಂತೆ ಎಸ್ಐಟಿ ಅಧಿಕಾರಿಗಳು ಬಂಧಿಸುತ್ತಾರೆ ಎಂದು ಗೃಹ ಸಚಿವ ಡಾ. ಜಿ.ಪರಮೇಶ್ವರ್ ತಿಳಿಸಿದರು.
ಪ್ರಜ್ವಲ್ ವಾಪಸ್ ಆಗುವ ಕುರಿತು ಮಾತನಾಡಿದ ಅವರು, ವಾರೆಂಟ್ ಇರುವುದರಿಂದ ಪ್ರಜ್ವಲ್ ರೇವಣ್ಣ ಅವರು ಬರುತ್ತಿದ್ದಂತೆ ಅರೆಸ್ಟ್ ಮಾಡಲೇಬೇಕಲ್ಲವೇ? ಎಸ್ಐಟಿಯವರು ಅದನ್ನ ಗಮನಿಸ್ತಾರೆ. ಅವರ ವಿರುದ್ಧ ವಾರೆಂಟ್ ಇರುವುದರಿಂದ ಅರೆಸ್ಟ್ ಮಾಡಬೇಕಲ್ಲ, ಅದನ್ನ ಮಾಡ್ತಾರೆ ಎಂದು ಹೇಳಿದರು. ಎಲ್ಲಾ ರೀತಿಯಲ್ಲೂ ಕ್ರಮ ತೆಗೆದುಕೊಳ್ಳಬೇಕು. ವಾರೆಂಟ್ ಜಾರಿಯಾಗಿರುವುದರಿಂದ ಅರೆಸ್ಟ್ ಮಾಡಬೇಕು, ಅರೆಸ್ಟ್ ಮಾಡ್ತಾರೆ.
Pension Rules: ಗಂಡನ ಸಾವಿನ ನಂತರ ಪತ್ನಿಗೆ ಪಿಂಚಣಿಯ ಹಕ್ಕು ಇದೆಯೇ? EPFO ನಿಯಮದಲ್ಲಿ ಏನಿದೆ..?
ಎಸ್ಐಟಿ ಅವರು ಕಾಯ್ತ ಇದ್ದಾರೆ. ಏರ್ಪೋರ್ಟ್ಗೆ ಬಂದ ಮೇಲೆ ಅರೆಸ್ಟ್ ಮಾಡ್ತಾರೆ. ನಂತರ ಅವರ ಹೇಳಿಕೆಗಳು ಮತ್ತೊಂದು ಪ್ರಕ್ರಿಯೆ ಶುರು ಆಗುತ್ತೆ ಎಂದರು. ಪೆನ್ಡ್ರೈವ್ ಕೇಸಲ್ಲಿ ಹಾಸನದ ಇಬ್ಬರು ಕಾಂಗ್ರೆಸ್ ಕಾರ್ಯಕರ್ತರ ಬಂಧನದಲ್ಲಿ ಬಿಜೆಪಿ, ಕಾಂಗ್ರೆಸ್, ದಳ ಅಂತಾ ಪ್ರಶ್ನೆ ಇಲ್ಲ. ಯಾರು ಈ ಪ್ರಕರಣದಲ್ಲಿ ಭಾಗಿಯಾಗಿರುತ್ತಾರೋ ಅಂಥವರನ್ನ ಅರೆಸ್ಟ್ ಮಾಡ್ತಾರೆ. ಇದೀಗ 11 ಜನರನ್ನ ಅರೆಸ್ಟ್ ಮಾಡಿದ್ದಾರೆ. ಯಾರು ಯಾರು ಇದರಲ್ಲಿ ಭಾಗಿಯಾಗಿದ್ದಾರೆ ಎನ್ನುವ ಅನುಮಾನ ಬರುತ್ತೋ, ಅವರನ್ನ ಬಂಧಿಸುತ್ತಾರೆ ಎಂದು ಸ್ಪಷ್ಟಪಡಿಸಿದರು.