ಗಂಭೀರ್ ಕೋಚ್ ಆದರೆ ಕೊಹ್ಲಿಗೆ ಸಮಸ್ಯೆ ಆಗಲಿದೆ ಎಂಬ ಚರ್ಚೆ ಶುರುವಾಗಲಿದೆ. ಬಿಸಿಸಿಐ ಸದ್ಯ ದ್ರಾವಿಡ್ ಉತ್ತರಾಧಿಕಾರಿಗಾಗಿ ಹುಡುಕಾಟ ನಡೆಸುತ್ತಿದೆ. ಆದರೆ, ಕೆಕೆಆರ್ ತಂಡದ ಮೆಂಟರ್ ಹಾಗೂ ಭಾರತದ ಮಾಜಿ ಆರಂಭಿಕ ಆಟಗಾರ ಗೌತಮ್ ಗಂಭೀರ್ ಅವರಿಗೆ ಮುಖ್ಯ ಕೋಚ್ ಜವಾಬ್ದಾರಿ ನೀಡುವ ಸಾಧ್ಯತೆ ಇದೆ ಎಂದು ವರದಿಯಾಗಿದೆ. ಮಾತುಕತೆಗಳು ಬಹುತೇಕ ಮುಗಿದಿದೆ ಎಂಬ ವರದಿಗಳೂ ಇವೆ.
ಟಿ20 ವಿಶ್ವಕಪ್ ಆರಂಭಕ್ಕೂ ಮುನ್ನ ಅಧಿಕೃತ ಘೋಷಣೆಯಾಗುವ ಸಾಧ್ಯತೆ ಇದೆ ಎಂಬ ವರದಿಗಳೂ ಇವೆ. ಗಂಭೀರ್ ಕೋಚ್ ಆದರೆ ಕೊಹ್ಲಿಗೆ ಸಮಸ್ಯೆ ಆಗಲಿದೆ ಎಂಬ ವಾದವೂ ಶುರುವಾಗಿದೆ.
ಜಾನ್ ರೈಟ್ ಭಾರತದ ಕೋಚ್ ಹುದ್ದೆಯಿಂದ ಕೆಳಗಿಳಿದ ನಂತರ ಆಸ್ಟ್ರೇಲಿಯಾದ ಮಾಜಿ ಆಟಗಾರ ಗ್ರೆಗ್ ಚಾಪೆಲ್ ಭಾರತದ ಕೋಚ್ ಆದರು. ತಂಡ ಸೇರಿದಾಗ ನಾಯಕರಾಗಿದ್ದ ಗಂಗೂಲಿ ಕೋಚ್ ಕೆಂಗಣ್ಣಿಗೆ ಗುರಿಯಾದರು. ತಂಡದಲ್ಲಿ ಸ್ಥಾನ ಕಳೆದುಕೊಂಡರು.
ಇದೀಗ ಗಂಭೀರ್ ಕೋಚ್ ಆಗಿದ್ದರೆ, ಗಂಗೂಲಿ ಅನುಭವಿಸಿದ ಪಾಡು ಕೊಹ್ಲಿಗೂ ಆಗಲಿದೆ ಎಂದು ಅಭಿಮಾನಿಗಳು ಅನುಮಾನ ವ್ಯಕ್ತಪಡಿಸುತ್ತಿದ್ದಾರೆ. ಗೌತಮ್ ಗಂಭೀರ್ ಮುಖ್ಯ ಕೋಚ್ ಆದರೆ ಟಿ20ಯಿಂದ ಕೊಹ್ಲಿಯನ್ನು ಹೊರಗಿಡುವ ಸಾಧ್ಯತೆ ಇದೆ ಎಂಬ ವರದಿಗಳಿವೆ.