ಹಲವರಿಗೆ ಕೆಟ್ಟ ಕನಸುಗಳು ಬೀಳುವುದು, ನಿದ್ರೆ ಬರದೇ ಇರುವುದು, ಆಗಾಗ ಎಚ್ಚರವಾಗುವುದು ಕಾಮನ್ ಆಗಿ ಬಿಟ್ಟಿದೆ.
ಇಂದು ರೆಬೆಲ್ ಸ್ಟಾರ್ ಅಂಬಿ ಜನ್ಮದಿನ.. ಬೆಳಿಗ್ಗೆಯೇ ಸಮಾಧಿಗೆ ಪೂಜೆ ಸಲ್ಲಿಸಿದ ಪತ್ನಿ ಸುಮಲತಾ!
ಮಲಗುವ ಮೊದಲು ಸಂಬಂಧಿತ ನಿದ್ರೆಯ ಮಂತ್ರಗಳನ್ನು ಪಠಿಸುವುದು ನಕಾರಾತ್ಮಕ ಶಕ್ತಿಗಳ ದಾಳಿಯಿಂದ ನಮಗೆ ಅಪಾರ ರಕ್ಷಣೆ ನೀಡುತ್ತದೆ ಎನ್ನಲಾಗುತ್ತದೆ. ಹಾಗಾದ್ರೆ ಆ ಶ್ಲೋಕಗಳೇನು ಎಂಬುದು ಇಲ್ಲಿದೆ.
ಬೆಳಗ್ಗೆಯಿಂದ ರಾತ್ರಿವರೆಗೆ ದುಡಿದು ಸುಸ್ತಾದಾಗ ಮಲಗಿದ ನಿದ್ರೆ ಬರಬೇಕು. ಆದರೆ ಕೆಲವೊಮ್ಮೆ ನಮ್ಮ ನಿದ್ರೆ ಭಂಗವಾಗುತ್ತದೆ. ಅದಕ್ಕೆ ಕಾರಣ ಕನಸು. ಕೆಲ ಕನಸುಗಳು ನಮ್ಮನ್ನ ಬೆಚ್ಚಿ ಬೀಳಿಸುತ್ತವೆ. ಕೆಟ್ಟ ಕನಸಿನಿಂದ ಒಮ್ಮೆ ಎಚ್ಚರವಾದರೆ ಮತ್ತೆ ನಿದ್ರೆ ಬರುವುದಿಲ್ಲ. ಈ ರೀತಿ ಒಂದು ದಿನ ಆದರೆ ಚೆಂದ. ಆದರೆ ಪದೇ ಪದೇ ಕೆಟ್ಟ ಕನಸುಗಳು ಬೀಳುತ್ತಿದ್ದರೆ ಅದು ನಿಮ್ಮ ನಿದ್ರೆಯ ಗುಣಮಟ್ಟ ಹಾಗೂ ಆರೋಗ್ಯದ ಮೇಲೆ ಸಹ ಪರಿಣಾಮ ಬೀರುತ್ತದೆ. ಅದರಲ್ಲೂ ಮಕ್ಕಳಿಗೆ ಈ ರೀತಿಯ ಕನಸು ಹೆಚ್ಚು ಬೀಳುತ್ತದೆ. ಈ ಕನಸುಗಳಿಂದ ಅವರ ನಿದ್ರೆ ಹಾಳಾಗುತ್ತದೆ. ಅದಕ್ಕೆ ಈ ಶ್ಲೋಕಗಳು ಪರಿಹಾರ ನೀಡುತ್ತದೆ.
ಸೂರ್ಯ ದೇವತೆಗೆ ಸಂಬಂಧಿಸಿದಂತೆ ’ ಸೌರಸೂಕ್ತ ಅತ್ಯಂತ ಪವಿತ್ರವಾದ ಹಿಂದೂ ಧರ್ಮಗ್ರಂಥಗಳ ಭಾಗವಾಗಿದೆ. ಈ ಸೌರ ಸೂಕ್ತದಲ್ಲಿ ರಾತ್ರಿಸೂಕ್ತ ’ ಕೂಡ ಇದೆ. ದೇವಿಯ ವಿವಿಧ ರೂಪಗಳಲ್ಲಿ ನಿದ್ರೆ ಕೂಡ ಒಂದು ರೂಪವಾಗಿದೆ. ನೀವು ಹಾಸಿಗೆಯ ಮೇಲೆ ಮಲಗಿರುವಾಗ ರಾತ್ರಿಸೂಕ್ತವನ್ನು ಎರಡು ಮೂರು ಬಾರಿ ಪಠಿಸಿದರೆ ಉತ್ತಮ ನಿದ್ರೆ ನಿಮ್ಮದಾಗುತ್ತದೆ.
ಯಾದೇವಿ ಸರ್ವಭೂತೇಷು ನಿದ್ರಾರೂಪೇಣ ಸಂಸ್ಥಿತಾ ।
ನಮಸ್ತಸ್ಯ ನಮಸ್ತಸ್ಯ ನಮಸ್ತಸ್ಯ ನಮೋನಮಃ ।।
ಅರ್ಥ : ಎಲ್ಲಾ ಜೀವಿಗಳಲ್ಲಿ ನಿದ್ರಾ ರೂಪದಲ್ಲಿ ಇರುವ ದೇವಿಗೆ ನಾನು ಮೂರು ಬಾರಿ ನಮನ ಸಲ್ಲಿಸುತ್ತೇನೆ .
ರಾಮಂ ಸ್ಕಂದಂ ಹನೂಮನ್ತಂ ವೈನತೇಯಂ ವೃಕೋದರಮ್ ।
ಶಯನೇ ಯಃ ಸ್ಮರೇನ್ನಿತ್ಯಂ ದುಃಸ್ವಪ್ನಸ್ತಸ್ಯ ನಶ್ಯತಿ ।।