ತಮಗಿಂತ ಹಿರಿಯ ಮಹಿಳೆಯರನ್ನು ಕೆಲ ಗಂಡಸರು ಇಷ್ಟ ಪಡುತ್ತಾರೆ. ಅನುಭವ, ಹೊಂದಾಣಿಕೆ, ಅರ್ಥ ಮಾಡಿಕೊಂಡು ಹೋಗುವಂತಹ ಸಂಗಾತಿಯನ್ನು ಹುಡುಕುವ ಪುರುಷರಿಗೆ ತಮಗಿಂತ ಹಿರಿಯ ಮಹಿಳೆಯರೇ ಹೆಚ್ಚು ಗಮನ ಸೆಳೆಯುತ್ತಾರೆ. ಅವರ ಮಾತು, ವರ್ತನೆ, ಕಾಳಜಿ ಪುರುಷರಿಗೆ ಹಿತ ಎನಿಸುತ್ತದೆ. ಪ್ರತಿಯೊಬ್ಬ ವ್ಯಕ್ತಿ ತಮ್ಮನ್ನು ಅರ್ಥ ಮಾಡಿಕೊಂಡು ಖುಷಿಯಾಗಿ ಜೀವನದಲ್ಲಿ ಹೆಜ್ಜೆ ಹಾಕುವವರಿಗೆ ನಡೆಸುವ ಹುಡುಕಾಟದಲ್ಲಿ ಪುರುಷರಿಗೆ ಈ ರೀತಿ ಹಿರಿಯ ಮಹಿಳೆಯರು ಸಿಗುವುದು ಸಾಮಾನ್ಯ
ದಿಢೀರ್ ಕಿವಿ ನೋವು ಕಾಣಿಸಿಕೊಂಡ್ರೆ ಚಿಂತೆ ಬಿಡಿ.. ಈ ಟಿಪ್ಸ್ ಫಾಲೋ ಮಾಡಿ..!
ಚಿಕ್ಕ ವಯಸ್ಸಿನ ಪುರುಷರು ಆತ್ಮವಿಶ್ವಾಸ ಇರುವ ಸ್ತ್ರೀಯರನ್ನು ಇಷ್ಟ ಪಡುತ್ತಾರೆ. ಏಕೆಂದರೆ ಆತ್ಮವಿಶ್ವಾಸ ಇರುವ ಹೆಣ್ಣುಮಕ್ಕಳು ಎಲ್ಲದರಲ್ಲೂ ಸರಿಯಾದ ನಿರ್ಧಾರ ತೆಗೆದುಕೊಳ್ಳುತ್ತಾರೆ ಹಾಗೂ ಬೇರೊಬ್ಬರಿಗಾಗಿ ತಮ್ಮನ್ನು ತಾವು ಬದಲಿಸಿಕೊಳ್ಳುವ ಬಗ್ಗೆ ಅರಿತುಕೊಳ್ಳುತ್ತಾರೆ.
ಪ್ರಬುದ್ಧತೆ ಅಂದರೆ ಮ್ಯೂಚಿರಿಟಿ. ಪ್ರತಿಯೊಬ್ಬರಿಗೂ ಪ್ರಬುದ್ಧತೆ ಎಂಬುದು ಇದ್ದರೆ ಎಂತಹ ಸಮಸ್ಯೆಗಳು ಆದರೂ ಸಹ ಸುಲಭವಾಗಿ ಪರಿಹರಿಸಿಕೊಳ್ಳುತ್ತಾರೆ. ಸಾಮಾನ್ಯವಾಗಿ ಸಂದರ್ಭಗಳನ್ನು ನಿಭಾಯಿಸಬಲ್ಲ ಮಹಿಳೆಯರನ್ನು ಪುರುಷರು ಮೆಚ್ಚುತ್ತಾರೆ.
3. ಸ್ವತಂತ್ರರು: ವಯಸ್ಸಿಗೆ ತಕ್ಕಂತೆ ಅನುಭವಗಳನ್ನು ಹೊಂದಿರುವ ಮಹಿಳೆಯರು ಹೆಚ್ಚಾಗಿ ಸ್ವತಂತ್ರರಾಗಿರುತ್ತಾರೆ. ಎಲ್ಲ ಕೆಲಸಗಳು ತಮ್ಮ ಪಾಡಿಗೆ ತಾವು ಮಾಡಿಕೊಳ್ಳುವ ಮೂಲಕ ಬೇರೊಬ್ಬರ ಮೇಲೆ ಭಾರವಾಗದೆ ಸ್ವತಂತ್ರರಾಗಿರುತ್ತಾರೆ.
4.ಅಭಿವ್ಯಕ್ತಿಶೀಲ ಸ್ವಭಾವ: ಮಹಿಳೆಯರಿಗೆ ವಯಸ್ಸಾದಂತೆ ಸ್ವಭಾವ ಸಹ ಇತರರಿಗೆ ಇಷ್ಟವಾಗುವ ರೀತಿ ಇರುತ್ತದೆ. ಬೇರೆಯವರಿಂದ ಕಲಿಯಲು ಉತ್ಸಾಹ ತೋರಿಸುವ ಇಂತಹ ಮಹಿಳೆಯರು ವಿಭಿನ್ನ ದೃಷ್ಟಿಕೋನಗಳಿಂದ ಜೀವನವನ್ನು ಅನುಭವಿಸುತ್ತಾರೆ.
5. ಭಾವನಾತ್ಮಕ ಬುದ್ಧಿವಂತಿಕೆ: ಸಂಬಂಧಗಳಲ್ಲಿನ ಸಂಕೀರ್ಣತೆಗಳೊಂದಿಗೆ ವ್ಯವಹರಿಸಲು ಭಾವನಾತ್ಮಕ ಬುದ್ಧಿವಂತಿಕೆಯ ಅಗತ್ಯವಿರುತ್ತದೆ, ಅದು ಎಲ್ಲರಿಗೂ ಇರುವುದಿಲ್ಲ. ವಯಸ್ಸಾದ, ಹೆಚ್ಚು ಅನುಭವಿ ಮಹಿಳೆಯೊಂದಿಗೆ ಇರುವುದು ಪುರುಷರಿಗೆ ಭಾವನೆಗಳನ್ನು ಚೆನ್ನಾಗಿ ಅರ್ಥಮಾಡಿಕೊಳ್ಳಲು ಮತ್ತು ಸೂಕ್ಷ್ಮತೆಯಿಂದ ವಿವಿಧ ಸಂದರ್ಭಗಳನ್ನು ಎದುರಿಸುವಲ್ಲಿ ಸಕ್ರಿಯರಾಗಿರುತ್ತಾರೆ. ವಯಸ್ಸಾದ ಮಹಿಳೆಯರು ಪರಿಸ್ಥಿತಿಗಳನ್ನು ವಿಮರ್ಶೆ ಮಾಡದೆ ಅದನ್ನು ನಿಭಾಯಿಸುವ ಕಡೆಗೆ ಗಮನ ಹರಿಸುತ್ತಾರೆ.