ಬೆಂಗಳೂರು: ವಿದೇಶದಲ್ಲಿ ತಲೆಮರೆಸಿಕೊಂಡಿರುವ ಅತ್ಯಾಚಾರಗಳ ಆರೋಪಿ ಪ್ರಜ್ವಲ್ ರೇವಣ್ಣ ಬರೋಬ್ಬರಿ ಒಂದು ತಿಂಗಳ ಬಳಿಕ ಕೊನೇಗೂ ಪ್ರತ್ಯಕ್ಷವಾಗಿದ್ದಾರೆ. ವಿದೇಶದಿಂದಲೇ ವಿಡಿಯೋ ಮೂಲಕ ಹೇಳಿಕೆ ಕೊಟ್ಟಿರುವ ಪ್ರಜ್ವಲ್ ನಾನೇ ಭಾರತಕ್ಕೆ ಬರುತ್ತೇನೆ ಎಂದಿದ್ದಾರೆ..ಹಾಗಾದ್ರೆ ಪ್ರಜ್ವಲ್ ರೇವಣ್ಣ ಏನೇನು ಮಾತಾಡಿದ್ದಾರೆ ಅನ್ನೋದರ ಜತೆಗೆ ಪ್ರಕರಣದ ಕಂಪ್ಲೀಟ್ ಡಿಟೇಲ್ಸ್ ತೋರಿಸ್ತೀವಿ ನೋಡಿ. ಕಡೆಗೂ ಪ್ರಜ್ವಲ್ ರೇವಣ್ಣ ರಿಯಾಕ್ಟ್ ಮಾಡಿದ್ದಾರೆ.. ಬರೋಬ್ಬರಿ ಒಂದು ತಿಂಗಳ ಬಳಿಕ ವಿಡೀಯೋ ಮೂಲಕ ಹೇಳಿಕೆ ಕೊಟ್ಟಿದ್ದಾರೆ. ಏಪ್ರಿಲ್ 26 ರಂದು ಚುನಾಣೆಯಾದ ಬಳಿಕ ವಿದೇಶಕ್ಕೆ ಹಾರಿದ್ದ ಪ್ರಜ್ವಲ್ ಒಂದು ಬಾರಿ ಮಾತ್ರ ಎಕ್ಸ್ ಖಾತೆಯಲ್ಲಿ ಸಮಯಾವಕಾಶ ಕೇಳಿ ಬರೆದುಕೊಂಡಿದ್ರು..
ಆದರೆ ನಂತರ ತನ್ನ ಮೇಲೆ ಒಂದರ ಹಿಂದೆ ಒಂದರಂತೆ ಅತ್ಯಾಚಾರ ಕೇಸ್ ಗಳು ದಾಖಲಾಗುತ್ತಿದ್ದಂತೆ ಯಾರ ಸಂಪರ್ಕಕ್ಕೂ ಸಿಗದೆ ಪ್ರಜ್ವಲ್ ಎಲ್ಲಿದ್ದೀಯಪ್ಪಾ ಎಂದು ಕೇಳುವಂತಾಗಿತ್ತು.5- 6 ದಿನಗಳ ಹಿಂದೆ ಎಚ್ ಡಿ ಕುಮಾರಸ್ವಾಮಿ ಪ್ರಜ್ವಲ್ ಎಲ್ಲಿದ್ದರೂ 48 ಗಂಟೆಯೊಳಗೆ ಬಂದು ವಿಚಾರಣೆ ಎದುರಿಸು. ತಾತ ದೇವೇಗೌಡರ ಮೇಲೆ ನನ್ನ ಮೇಲೆ ಗೌರವ ಇದ್ದರೆ ನಿನ್ನ ಮೇಲೆ ಬಂದಿರುವ ಆರೋಪಗಳ ಬಗ್ಗೆ ಎಸೈಟಿ ಮುಂದೆ ಹಾಜರಾಗು ಎಂದು ಮನವಿ ಮಾಡಿಕೊಂಡಿದ್ದರೂ ಪ್ರಜ್ವಲ್ ಪ್ರತಿಕ್ರಿಯಿಸಿರಲಿಲ್ಲ.
ಎರಡುದಿನಗಳ ಹಿಂದೆ ದೇವೇಗೌಡರೇ ಖುದ್ದು ಬಹಿರಂಗ ಪತ್ರ ಬರೆದು ಈ ನೆಲದ ಕಾನೂನಿಗೆ ಗೌರವ ಕೊಟ್ಟು ಎಲ್ಲಿದ್ದರು ಬಂದು ಎಸೈಟಿ ಮುಂದೆ ಬಂದು ತನಿಖೆ ಎದುರಿಸು ಇಲ್ಲದಿದ್ದರೆ ಇಡೀ ಕುಟುಂಬದ ಕೋಪಕ್ಕೆ ಗುರಿಯಾಗಿ ಒಂಟಿಯಾಗಬೇಕಾಗುತ್ತೆ ಎಂದು ಖಡಕ್ ವಾರ್ನಿಂಗ್ ನೀಡಿದ್ರು. ತನ್ನ ತಾತ ದೊಡ್ಡ ಗೌಡ್ರು ವಾರ್ನಿಂಗ್ ಕೊಡ್ತಾಯಿದ್ದಂತೆ ವಿಡೀಯೋ ಮೂಲಕ ಪ್ರತ್ಯಕ್ಷವಾಗಿರೋ ಪ್ರಜ್ವಲ್ ರೇವಣ್ಣ ತಾತ- ತಂದೆ- ತಾಯಿ ಚಿಕ್ಕಪ್ಪ ಹಾಗು ಜೆಡಿಎಸ್ ಕಾರ್ಯಕರ್ತರ ಕ್ಷಮೆ ಕೇಳಿದ್ದಾರೆ.
ವಾಟ್ಸಾಪ್ ಮೂಲಕ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಹಾಕೋದು ಹೇಗೆ..? ಇಲ್ಲಿದೆ ಸಂಪೂರ್ಣ ಮಾಹಿತಿ
ಏಪ್ರಿಲ್ 26 ಕ್ಕೆ ಎರಡನೇ ಹಂತದ ಮತದಾನಕ್ಕೋ 3-4 ದಿನ ಮುನ್ನವೇ ಪ್ರಜ್ವಲ್ ರೇವಣ್ಣರದ್ದು ಎನ್ನಲಾದ ಅಶ್ಲೀಲ ವಿಡಿಯೋ ಹಾಗು ಫೋಟೋಗಳಿದ್ದ ಪೆನ್ಡ್ರೈವ್ ಹಾಸನದಾದ್ಯಂತ ಹರಿದಾಡುತ್ತಿತ್ತು. ಎರಡನೇ ಹಂತದ ಚುನಾವಣೆ ಮುಗಿಯುತ್ತಿದಂತೆ ಪ್ರಜ್ವಲ್ ರೇವಣ್ಣ ವಿದೇಶಕ್ಕೆ ಹಾರಿಬಿಟ್ಟಿದ್ರು.ಅತ್ತ ಪ್ರಜ್ವಲ್ ವಿದೇಶಕ್ಕೆ ಹೋಗುತ್ತಿದ್ದಂತೆ ಇತ್ತ ಅಶ್ಲೀಲ ವಿಡಿಯೋಗಳ ಬಗ್ಗೆ ತನಿಖೆಗೆ ಒತ್ತಾಯಿಸಿ ಮಹಿಳಾಆಯೋಗ ರಾಜ್ಯ ಸರ್ಕಾರಕ್ಕೆ ಪತ್ರ ಬರೆದಿತ್ತು.
ಮಹಿಳಾ ಆಯೋಗದ ಪತ್ರದ ಆಧಾರದ ಮೇಲೆ ರಾಜ್ಯ ಸರ್ಕಾರ ಅಶ್ಲೀಲ ವಿಡೀಯೋಗಳಿಗೆ ಸಂಬಂಧಿಸಿ ತನಿಖೆ ನೆಡೆಸಲು ಎಸೈಟಿ ರಚನೆ ಮಾಡಿತ್ತು. ಇದರ ಬೆನ್ನಲ್ಲೇ ಹೊಳೆನರಸೀಪುರದಲ್ಲಿ ರೇವಣ್ಣ ಹಾಗು ಪ್ರಜ್ವಲ್ ರೇವಣ್ಣ ನನ್ನ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ್ದಾರೆ ಎಂದು ಸಂತ್ರಸ್ತೆ ಮಹಿಳೆಯೊಬ್ಬರು ದೂರುದಾಖಲು ಮಾಡಿದ್ರು. ಈ ಪ್ರಕರಣದಲ್ಲಿ ಎ 1 ಆರೋಪಿಯಾಗಿದ್ದ ಎಚ್ ಡಿ ರೇವಣ್ಣ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಲ್ಲಿ ನಿರೀಕ್ಷಣಾ ಜಾಮೀನು ಅರ್ಜಿ ಹಾಕಿಕೊಂಡಿದ್ರು. ಆ ನಂತರ ಈ ಪ್ರಕರಣ ಎಲ್ಲವೂ ಬೇಲೆಬಲ್ ಸೆಕ್ಷನ್ ಗಳಾಗಿದ್ರಿಂದ ಅರ್ಜಿ ವಾಪಸ್ಸ್ ಪಡೆದುಕೊಂಡಿದ್ರು
ಇನ್ನು ರೇವಣ್ಣ ಬೇಲ್ ಅರ್ಜಿ ವಾಪಸ್ ತೆಗೆದಕೊಳ್ಳುತ್ತಿದ್ದಂತೆ ಸಂತ್ರಸ್ತ ಮಹಿಳೆಯೊಬ್ಬರನ್ನು ಕಿಡ್ನಾಪ್ ಮಾಡಿರೋದಾಗಿ ಮಹಿಳೆಯ ಮಗ ಮೈಸೂರಿನ ಕೆ ಆರ್ ನಗರದಲ್ಲಿ ದೂರು ದಾಖಲಿಸಿದ್ರು. ಪ್ರಕರಣಕ್ಕೆ ಸಂಬಂಧಿಸಿ ರೇವಣ್ಣಗೆ ನ್ಯಾಯಾಲಯ ಜಾಮೀನು ನಿರಾಕರಿಸಿದ್ರಿಂದ ರೇವಣ್ಣನ್ನು ಎಸೈಟಿ ಅಧಿಕಾರಿ ದೇವೇಗೌಡರ ಮನೆಯಿಂದಲೇ ಅರೆಸ್ಟ್ ಮಾಡಿಕೊಂಡು ಬಂದು ನ್ಯಾಧೀಶರ ಮುಂದೆ ಹಾಜರು ಪಡಿಸಿ ನಾಲ್ಕು ದಿನಗಳ ಕಸ್ಟಡಿಗೆ ಪಡೆದುಕೊಂಡು ವಿಚಾರಣೆ ನೆಡೆಸಿ ನಂತರ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ರು. ನಂತರ ಎಚ್ ಡಿ ರೇವಣ್ಣ ಜಾಮೀನು ಪಡೆದುಕೊಂಡು ಹೊರಗೆ ಬಂದಿದ್ದಾರೆ.
ಇನ್ನು ಪ್ರಜ್ವಲ್ ರೇವಣ್ಣನ ವಿರುದ್ದ ಮೂರು ಅತ್ಯಾಚಾರ ಪ್ರಕರಣಗಳು ದಾಖಲಾಗುತ್ತಿದ್ದಂತೆ ಆರೋಪಿಯನ್ನು ವಿದೇಶದಿಂದ ತಕ್ಷಣ ಕರತರುವಂತೆ ಕೇಂದ್ರಕ್ಕೆ ರಾಜ್ಯಸರ್ಕಾರ ಪ್ರತ್ರ ಬರೆದಿತ್ತು ಆದರೆ ಕೇಂದ್ರದಿಂದ ಯಾವುದೇ ಸ್ಪಂದನೆ ಸಿಗದಿದ್ದಾಗ ಬಿಜೆಪಿ ವಿರುದ್ದ ವಿರೋಧ ಪಕ್ಷಗಳು ಉಗಿಬಿದ್ದು ವಾಗ್ದಾಳಿ ನೆಡೆಸಿದ್ವು. ಸಿ ಎಂ ಸಿದ್ದರಾಮಯ್ಯ ಮತ್ತೆ ಎರಡನೇ ಪತ್ರ ಬರೆದು ಪಾಸ್ ಪೋರ್ಟ್ ರದ್ದು ಮಾಡುವಂತೆ ಮನವಿ ಮಾಡಿಕೊಂಡಿದ್ರು.ಇದರಿಂದ ಚ್ಚೆತ್ತುಕೊಂಡ ವಿದೇಶಾಂಗ ಇಲಾಖೆ 10 ದಿನಗಳ ಒಳಗೆ ಉತ್ತರ ನೀಡುವಂತೆ ಪ್ರಜ್ವಲ್ ರೇವಣ್ಣ ಗೆ ಶೋಕಾಷ್ ನೋಟೀಸ್ ಜಾರಿ ಮಾಡಿತ್ತು. ಇದರ ಬೆನ್ನಲ್ಲೇ ಇದೀಗ ಪ್ರಜ್ವಲ್ ರೇವಣ್ಣ ದು ತಿಂಗಳ ನಂತರ ವಿಡಿಯೋ ಮೂಲಕ ಎಸೈಟಿ ಮುಂದೆ ಶುಕ್ರವಾರ 10 ಗಂಟೆಗೆ ಹಾಜರಾಗುತ್ತೇನೆ ಎಂದು ಹೇಳಿಕೊಂಡಿದ್ದಾರೆ…
ಇನ್ನು 2 ನಿಮಿಷ 57 ಸೆಕೆಂಡ್ ವಿಡಿಯೋದಲ್ಲಿ ಪ್ರಜ್ವಲ್ ಹೇಳಿರೋದೇನು ಅಂತ ನೋಡೋದಾದ್ರೆ , ನಾನು ವಿದೇಶಿ ಪ್ರವಾಸ ಹೋಗೋದು ಮೊದಲೇ ನಿರ್ಧಾರವಾಗಿತ್ತು . ನಾನು ವಿದೇಶಕ್ಕೆ ಹೋಗೋವಾಗ ನನ್ನ ಮೇಲೆ ಯಾವುದೇ ಪ್ರಕರಣಗಳಿರಲಿಲ್ಲ. ನನ್ನ ಮೇಲೆ ಆರೋಪಗಳು ಬಂದಿರುವುದು ಯೂಟ್ಯೂಬ್ ಮೂಲಕ ತಿಳಿದುಕೊಂಡೆ. ಈ ಸುದ್ದಿಗಳ ಆಘಾತದಿಂದ ನಾನು ಡಿಪ್ರಷ್ನ್ ಒಳಗಾಗಿ ಐಸೀಲೇಷನ್ ಆಗಿಬಿಟ್ಟಿದ್ದೆ . ನನ್ನ ಮೇಲೆ ಬಂದಿರುವ ಆರೋಪಗಳೇಲ್ಲಾ ಸುಳ್ಳು ನನ್ನ ರಾಜಕೀಯ ಬೆಳವಣಿಗೆ ಸಹಿಸದ ಹಾಸನದ ಲ್ಲಾ ವಿರೋಧಿಗಳು ಷಡ್ಯಂತ್ರ ಮಾಡಿದ್ದಾರೆ.ನಾನು ಕಾನೂನಿ ಮೂಲಕವೇ ಹೋರಟ ಮಾಡುತ್ತೇನೆ. 31 ನೇ ತಾರೀಖು ಎಸೈಟಿ ಮುಂದೆ ಹಾಜರಾಗಿ ವಿಚಾರಣೆ ಎದುರಿಸುತ್ತೇನೆ ಎಂದಿದ್ದಾರೆ..
31 ಕ್ಕೆ ಎಸ್ಐಟಿ ಎದುರು ವಿಚಾರಣೆಗೆ ಹಾಜರಾಗೋದಾಗಿ ಹೇಳಿಕೆ ನೀಡಿರೋ ಪ್ರಜ್ವಲ್ 31 ರವರೆಗೆ ಸೇಫಾ ಅನ್ನೋ ಅನುಮಾನ ಶುರುವಾಗಿದೆ. 31ಕ್ಕೂ ಮುಂಚಿತವಾಗಿಯೇ ಪ್ರಜ್ವಲ್ ವಶಕ್ಕೆ ಪಡೆಯೋಕ್ಕೆ ಎಸ್ಐಟಿ ತಯಾರಿ ನೆಡೆಸಿಕೊಳ್ತಿದೆ ಎನ್ನಲಾಗಿದೆ. ಪ್ರಜ್ವಲ್ ರೇವಣ್ಣ ಕಾಂಟ್ಯಾಕ್ಟ್ ಗೆ ಎಸೈಟಿ ಅಧಿಕಾರು ಮುಂದಾಗಿದ್ದಾರೆ.. ವಿಡಿಯೋ ಬಿಟ್ಟಿದ್ದು ಯಾವ ದೇಶದಿಂದ ಎಲ್ಲಿಂದ ಬಿಟ್ಟಿರುವುದು , ಯಾರಿಗೆ ಕಳಿಸಿದ್ದಾರೆ ಈಗಾಗಲೇ ಪ್ರಜ್ವಲ್ ವಿರುದ್ಧ ಲುಕ್ ಔಟ್ ನೋಟಿಸ್ ಜಾರಿ ಮಾಡಲಾಗಿದೆ. ಆತನ ವಿರುದ್ಧ ಅರೆಸ್ಟ್ ವಾರಂಟ್ ಕೂಡ ಇದೆ.ಈಗಾಗಲೆ ಒಂದು ತಿಂಗಳಿಂದ ಏರ್ಪೋರ್ಟ್ ನಲ್ಲೇ ಠಿಕಾಣಿ ಹೂಡಿರುವ ಎಸ್ಐಟಿ ಅಧಿಕಾರಿಗಳು ಯಾವ ಫ್ಲೈಟ್ ನಲ್ಲಿ ಬರ್ತಾನೆ ಎಂದು ಹದ್ದಿನಕಣ್ಣಿಟ್ಟು ಕಾಯ್ತಿದ್ದಾರೆ.
ಮೊದಲಿಗೆ ಪ್ರಜ್ವಲ್ ರೇವಣ್ಣನನ್ನು ವಶಕ್ಕೆ ಪಡೆದುಕೊಳ್ಳಲಿರೋ ಇಮಿಗ್ರೇಷನ್ ಅಧಿಕಾರಿಗಳು ನಂತರ ಎಸ್ಐಟಿಗೆ ಒಪ್ಪಿಸುತ್ತಾರೆ. ಅದಾದ ಬಳಿಕ ಎಸ್ಐಟಿ ಯಿಂದ ಪ್ರಜ್ವಲ್ ರೇವಣ್ಣ ಮೆಡಿಕಲ್ ಚೆಕಪ್ ಮಾಡಿಸಿ ಕೋರ್ಟ್ ಗೆ ಹಾಜರು ಪಡಿಸಿ ವಶಕ್ಕೆ ಪಡೆದುಕೊಳ್ತಾರೆ. ನಂತರ ಅತ್ಯಾಚಾರ ಆರೋಪಗಳ ತನಿಖೆ ಶುರುವಾಗುತ್ತೆ. ಒಟ್ಟಿನಲ್ಲಿ ಒಂದು ತಿಂಗಳಿಂದ ತಲೆಮರೆಸಿಕೊಂಡು ಕಾಡಿಸಿದ್ದ ಪ್ರಜ್ವಲ್ ರೇವಣ್ಣ ಕೊನೇಗೂ ಸ್ವದೇಶಕ್ಕೆ ಬಂದು ತನಿಖೆ ಎದುರಿಸುತ್ತೇನೆ ಎಂದು ಹೇಳಿದ್ದಾರೆ. ನ್ನು ಶುಕ್ರವಾರದ ನಂತರ ಯಾವೆಲ್ಲಾ ಬೆಳವಣಿಗೆಗಳಾಗುತ್ತೋ ಎಂದು ಕಾದುನೋಡಬೇಕಿದೆ.