ಬೆಂಗಳೂರು : ಲೋಕಸಭಾ ಚುನಾವಣಾ ಫಲಿತಾಂಶಕ್ಕೆ ಇನ್ನೊಂದು ವಾರ ಬಾಕಿಯಿದೆ ಮತ್ತು ಇದೇ ಮೊದಲ ಬಾರಿಗೆ ಇವಿಎಂ ಬಗ್ಗೆ ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಹೇಳಿಕೆಯನ್ನು ನೀಡಿದ್ದಾರೆ. ಇವಿಎಂನಲ್ಲಿ ಏನೂ ಲೋಪದೋಷವಿಲ್ಲದಿದ್ದರೆ, ನಮ್ಮ ಸಾಧನೆ ಉತ್ತಮವಿರುವ ನಿರೀಕ್ಷೆಯಿದೆ ಎಂದು ಹೇಳಿದ್ದಾರೆ.
” ಇಂಡಿಯಾ ಮೈತ್ರಿಕೂಟ, ಕರ್ನಾಟಕ ಅದರಲ್ಲೂ ಬೆಂಗಳೂರಿನಿಂದಲೇ ಅಸ್ತಿತ್ವಕ್ಕೆ ಬಂದಿರುವುದು. ನಮ್ಮ ರಾಷ್ಟ್ರ ಮಟ್ಟದ ನಾಯಕರು ಬೆಂಗಳೂರಿಗೆ ಬಂದು ಮೈತ್ರಿಕೂಟಕ್ಕೆ ತಳಪಾಯವನ್ನು ಹಾಕಿ ಹೋಗಿದ್ದಾರೆ, ಅದನ್ನು ನಾವು ಉಳಿಸಿಕೊಳ್ಳಬೇಕು ” ಎಂದು ಡಿಕೆಶಿ ಅಭಿಪ್ರಾಯ ಪಟ್ಟಿದ್ದಾರೆ.
ವಾಟ್ಸಾಪ್ ಮೂಲಕ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಹಾಕೋದು ಹೇಗೆ..? ಇಲ್ಲಿದೆ ಸಂಪೂರ್ಣ ಮಾಹಿತಿ
ದೇಶದೆಲ್ಲಡೆ ನಮಗೆ ಚುನಾವಣಾ ಫಲಿತಾಂಶದ ಬಗ್ಗೆ ಶುಭಸೂಚನೆ ಸಿಕ್ಕಿದೆ, ಇವಿಎಂನ ಬಗ್ಗೆ ಅಲ್ಲಲ್ಲಿ ಅಪಸ್ವರಗಳು ಕೇಳಿ ಬರುತ್ತಿವೆ. ಇವಿಎಂನಲ್ಲಿ ಏನೂ ಹೆಚ್ಚುಕಮ್ಮಿ ಆಗದಿದ್ದರೆ, ಜನ ಸಂಪೂರ್ಣವಾಗಿ ನಮಗೆ ಆಶೀರ್ವಾದ ಮಾಡಿರುತ್ತಾರೆ, ಮಾಡಿದ್ದಾರೆ ಎನ್ನುವ ನಂಬಿಕೆ ನನಗಿದೆ ಎಂದು ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.