ಬೆಂಗಳೂರು:- ತರಕಾರಿ ಬೆಲೆ ಏರಿಕೆಯ ನಾಗಾಲೋಟ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಮುಂದುವರಿದಿದೆ.
ಬಾಯಿಯ ಎಲ್ಲ ಸಮಸ್ಯೆಗಳಿಗೂ ಮೌತ್ವಾಷ್ ಪರಿಹಾರವೆ?.. ಇಲ್ಲಿದೆ ಮಾಹಿತಿ
ತರಕಾರಿಗಳ ಬೆಲೆ ದಿನದಿಂದ ಏರಿಕೆಯಾಗುತ್ತಿದೆ. ಕೆಜಿಗೆ 20 ರೂ. ಇದ್ದ ತರಕಾರಿಗಳ ಬೆಕೆ ಈಗ ಬರೋಬ್ಬರಿ 80 ರೂ. ಗಡಿ ದಾಟಿವೆ. ಬಿಸಿಲಿನ ಪ್ರಮಾಣ ಹೆಚ್ಚಾಗಿರುವ ಕಾರಣ ಹೆಚ್ಚಿನ ಪ್ರಮಾಣದಲ್ಲಿ ತರಕಾರಿಗಳು ಮಾರುಕಟ್ಟೆಗೆ ಬರುತ್ತಿಲ್ಲ. ಅಲ್ಲದೇ ತರಕಾರಿಗಳಿಗೆ ಬೇಡಿಕೆ ಹೆಚ್ಚಾಗಿರುವ ಕಾರಣ ಈ ವಾರ ಕೂಡ ಬೆಲೆ ಗಗನಕ್ಕೇರಿದೆ.
ಈ ಬಾರಿ ಬಿಸಿಲಿನ ಪ್ರಮಾಣ ಹೆಚ್ಚಾಗಿದ್ದರಿಂದ ಮತ್ತು ಮಳೆ ಕೊರತೆಯಿಂದ ಹೆಚ್ಚಿನ ಪ್ರಮಾಣದಲ್ಲಿ ಫಸಲು ಬಂದಿಲ್ಲ. ಈ ಮಧ್ಯೆ, ಕಳೆದ ಒಂದು ವಾರದಿಂದ ಅಕಾಲಿಕವಾಗಿ ಮಳೆಯೂ ಬರುತ್ತಿದ್ದು, ಬೆಳೆ ಹಾಳಾಗುತ್ತಿದೆ. ಹೀಗಾಗಿ ಬರುವ ಅಲ್ಪ ತರಕಾರಿಗಳಿಗೆ ಹೆಚ್ಚಿನ ಬೆಲೆ ನಿಗದಿ ಮಾಡಿ ಮಾರಾಟ ಮಾಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ಸರಿಯಾಗಿ ಮಳೆಯಾಗದಿದ್ದರೆ ತರಕಾರಿಗಳ ಬೆಲೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ. ಮಾರುಕಟ್ಟೆಗಳಲ್ಲಿ ಸ್ವಲ್ಪ ಪರವಾಗಿಲ್ಲವೆಂಬ ಬೆಲೆ ಇದ್ದರೂ ಬಡವಾಣೆಗಳ, ಮನೆಗಳ ಬಳಿಯ ತರಕಾರಿ ಅಂಗಡಿಗಳು, ತಳ್ಳುವ ಗಾಡಿ ವ್ಯಾಪಾರಸ್ಥರು, ಹಾಪ್ ಕಾಮ್ಸ್ಗಗಳಲ್ಲಿ ಬೆಲೆ ವಿಪರೀತ ಹೆಚ್ಚಾಗಿದೆ ಎಂದು ವ್ಯಾಪಾರಸ್ಥರು ಹೇಳುತ್ತಿದ್ದಾರೆ.
ಕ್ಯಾರೇಟ್ – 80 – 82
ಬೀನ್ಸ್ – 220 – 220
ನವಿಲುಕೋಸು – 60 – 102
ಬದನೆಕಾಯಿ – 60 – 70
ದಪ್ಪ ಮೆಣಸಿನಕಾಯಿ – 40 – 65
ಬಟಾಣಿ – 140 – 180
ಬೆಂಡೆಕಾಯಿ – 60 – 66
ಟೊಮಾಟೋ – 30 – 60
ಆಲೂಗೆಡ್ಡೆ -30 – 56
ಹಾಗಲಕಾಯಿ – 60 – 82
ಸೋರೆಕಾಯಿ – 40 – 50
ಬೆಳ್ಳುಳ್ಳಿ – 300 – 338
ಶುಂಠಿ – 180 – 195
ಪಡುವಲಕಾಯಿ – 30 – 60
ಗೋರಿಕಾಯಿ – 50 – 89
ಹಸಿ ಮೆಣಸಿಕಾಯಿ – 80 – 106