ಬಾಗಲಕೋಟೆ:– ಜಿಲ್ಲೆಯ ಇಳಕಲ್ ನಗರದಲ್ಲಿ ಐ ಲವ್ ಯೂ ಎಂದು ಮೆಸೇಜ್ ಹಾಕಿದ ಮುಸ್ಲಿಂ ಯುವಕನಿಗೆ ಮಹಿಳೆಯೊಬ್ಬರು ಚಪ್ಪಲಿ ಏಟು ಕೊಟ್ಟಿರುವ ಘಟನೆ ಜರುಗಿದೆ.
ನಿವೇದಿತಾ ಹಾಗೂ ಯಾಸಿನ್ ಇಬ್ಬರೂ ಸಹ ವಿವಾಹಿತರು. ಹೀಗಿದ್ದರೂ ಮದುವೆ ಆಗಿರುವ ಮಹಿಳೆಯ ಹಿಂದೆ ಬಿದ್ದ ಯಾಸಿನ್ ಪ್ರೀತಿಸುವಂತೆ ನಿವೇದಿತಾಳಿಗೆ ಮಸೇಜ್ ಮೂಲಕ ಹಿಂಸೆ ನೀಡುತ್ತಿದ್ದ. ಯಾಸಿನ್ ನಡೆಗೆ ರೋಸಿ ಹೋದ ನಿವೇದಿತಾ ಆತನ ಮನೆ ನುಗ್ಗಿ ಕುತ್ತಿಗೆ ಪಟ್ಟಿ ಹಿಡಿದು ಥಳಿಸಿ, ಚಪ್ಪಲಿ ಏಟು ನೀಡಿದ್ದಾರೆ
ಇನ್ನೂ ನಿವೇದಿತಾ ಹಾಗೂ ಯಾಸಿನ್ ಇಬ್ಬರೂ ಕಾಂಗ್ರೆಸ್ ಪಕ್ಷದಲ್ಲಿ ಕಾರ್ಯಕರ್ತರಾಗಿದ್ದು, ಪರಿಚಿತರೇ ಆಗಿದ್ದಾರೆ. ಇತ್ತೀಚೆಗೆ ಯಾಸಿನ್ ಪ್ರೀತಿ-ಪ್ರೇಮ ಎಂದು ಹಿಂದೆ ಬಿದ್ದು ಚಾಟಿಂಗ್ ಮಾಡುತ್ತಿದ್ದ. ಇದರಿಂದ ರೊಚ್ಚಿಗೆದ್ದ ನಿವೇದಿತಾ ಯಾಸೀನ್ ಮನೆಗೆ ನುಗ್ಗಿ ಚಪ್ಪಲಿ ಏಟು ನೀಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ