ಬೆಂಗಳೂರು:- ಪ್ರಜ್ವಲ್ ರೇವಣ್ಣ ಅವದು ಮೇ 31ರಂದು ಎಸ್ಐಟಿ ಮುಂದೆ ವಿಚಾರಣೆಗೆ ಹಾಜರಾಗುವುದಾಗಿ ಹೇಳಿದ್ದಾರೆ. ವಿದೇಶದಲ್ಲಿದ್ದುಕೊಂಡೇ ವಿಡಿಯೋ ಹೇಳಿಕೆ ಬಿಡುಗಡೆ ಮಾಡಿದ್ದಾರೆ. ಇದರ ಬೆನಲ್ಲೇ ಇತ್ತ ಎಸ್ಐಟಿ ಅಧಿಕಾರಿಗಳು ಅಲರ್ಟ್ ಆಗಿದ್ದು, ಪ್ರಜ್ವಲ್ ಆಗಮಿಸುತ್ತಿದ್ದಂತೆಯೇ ಏನೆಲ್ಲಾ ಮಾಡಬೇಕು ಎನ್ನುವ ಬಗ್ಗೆ ಕಾನೂನು ಪ್ರಕ್ರಿಯೆಗಳ ಬಗ್ಗೆ ಚರ್ಚೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ
ಪ್ರಜ್ವಲ್ ರೇವಣ್ಣನ ಟಿಕೆಟ್ ಬುಕ್ಕಿಂಗ್ ಮೇಲೆ ಎಸ್ಐ ಅಧಿಕಾರಿಗಳ ಕಣ್ಣಿಟ್ಟಿದ್ದು, ಯಾವ ವಿಮಾನದಲ್ಲಿ ಬರುತ್ತಾರೆ? ಯಾವ ನಿಲ್ದಾಣಕ್ಕೆ ಬಂದಿಳಿಯುತ್ತಾರೆ? ಎನ್ನುವ ಬಗ್ಗೆ ಹದ್ದಿನ ಕಣ್ಣಿಟ್ಟಿದ್ದಾರೆ. ಈಗಾಗಲೇ ಲುಪ್ತಾನ್ಸಾ ಏರ್ಲೈನ್ಸ್ ನಲ್ಲಿ ಟಿಕೆಟ್ ಬುಕ್ ಮಾಡಿ ಕೊನೆ ಕ್ಷಣದಲ್ಲಿ ಕ್ಯಾನ್ಸಲ್ ಮಾಡಿದ್ದರು. ಅದರ ಹಣ ಹಾಗೆ ಉಳಿದಿದ್ದು, ಅದೇ ಹಣದಲ್ಲಿ ಅದೇ ಲುಪ್ತಾನ್ಸಾ ಏರ್ಲೈನ್ಸ್ ಟಿಕೆಟ್ ಬುಕ್ ಮಾಡಿಕೊಂಡು ಮೇ 30ರ ರಾತ್ರಿ ಬೆಂಗಳೂರಿಗೆ ಬರುವ ವಿಮಾನದಲ್ಲಿ ಆಗಮಿಸುವ ಸಾಧ್ಯತೆಗಳಿವೆ. ಹೀಗಾಗಿ ಎಸ್ಐಟಿ ಅಧಿಕಾರಿಗಳು ಮತ್ತು ಗುಪ್ತಚರ ಇಲಾಖೆ ಅಧಿಕಾರಿಗಳು, ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಿಗಾ ವಹಿಸಿದ್ದು, ವಿದೇಶದಿಂದ ಬರುವ ವಿಮಾನ ಹಾಗೂ ಪ್ರಯಾಣಿಕರ ಬಗ್ಗೆ ಮಾಹಿತಿ ಕಲೆಹಾಕಿತ್ತಿದ್ದಾರೆ.
ಎಸ್ಐಟಿ ನೋಟಿಸ್ ಜಾರಿ ಮಾಡಿದ್ದಾಗ ಪ್ರಜ್ವಲ್ ರೇವಣ್ಣ ಕಳೆದ ಬಾರಿ ಕೂಡ ಇದೇ ವಕೀಲರ ಮೂಲಕ ಕಾಲವಕಾಶ ಕೋರಿದ್ದರು. ಆದ್ರೆ ಕಳೆದ ಬಾರಿ ಹೇಳಿದಂತೆ ವಿಚಾರಣೆಗೆ ಹಾಜರಾಗದೆ ದೂರ ಉಳಿದ್ದರು. ಈ ಬಾರಿಯೂ ಮತ್ತೆ ಹಾಗೆ ಮಾಡುವ ಸಾಧ್ಯತೆ ಕೂಡ ಇರುತ್ತೆ. ಹೀಗಾಗಿ ಎಸ್ಐಟಿ ಅಧಿಕಾರಿಗಳು ಈಗಲೇ ಪ್ರಜ್ವಲ್ ರೇವಣ್ಣ ಕಾಂಟ್ಯಾಕ್ಸ್ಗೆ ಮುಂದಾಗಿದೆ. ಕೇಂದ್ರ ತನಿಖಾ ಸಂಸ್ಥೆಗಳಿಗೂ ಈ ಬಗ್ಗೆ ಮಾಹಿತಿ ನೀಡಿದ್ದು, ಇಂಟರ್ಪೋಲ್ನಿಂದಲೂ ಮಾಹಿತಿ ತಿಳಿದುಕೊಳ್ಳಲಿದ್ದಾರೆ