ಬೆಂಗಳೂರು:- ರೇವ್ ಪಾರ್ಟಿ, ಇಡೀ ಭಾರತವೇ ರಾಜ್ಯದತ್ತ ತಿರುಗಿ ನೋಡುವಂತೆ ಮಾಡಿದ ಪ್ರಕರಣ.. ಸದ್ಯ ಸಿಸಿಬಿ ತನಿಖೆ ವೇಳೆ ಪಾರ್ಟಿಯಲ್ಲಿ ನಡೆದ ಒಂದೊಂದೆ ಅಂಶಗಳು ಬೆಳಕಿಗೆ ಬರುತ್ತಿದೆ.. ಡ್ರಗ್, ಸೆಕ್ಸ್ ಅಷ್ಟೇ ಅಲ್ಲಾ, ಪಾರ್ಟಿ ಮಂದಿ ಬೇರೆ ಕೆಲಸದಲ್ಲೂ ತೊಡಗಿದ್ದರು ಎಂಬುದು ಬಟಬಯಲಾಗಿದೆ. ಹಾಗಾದ್ರೆ ರೇವ್ ಪಾರ್ಟಿಯ ಮತ್ತಷ್ಟು ಅಪ್ಡೇಟ್ ಇಲ್ಲಿದೆ ನೋಡಿ..
ಬೆಂಗಳೂರಿನಲ್ಲೊಂದು ಕನ್ನಡ ಪಬ್.. ಇಲ್ಲಿ ಕನ್ನಡ ಹಾಡುಗಳಿಗಷ್ಟೇ ಅವಕಾಶ!!
ಯೆಸ್ ರೇವ್ ಪಾರ್ಟಿ ಸಂಬಂಧ ಸಿಸಿಬಿ ನಡೆಸುತ್ತಿರುವ ತನಿಖೆಯಲ್ಲಿ ಕೆಲ ಸ್ಪೋಟಕ ಅಂಶಗಳು ಬಯಲಾಗುತ್ತಿವೆ. ಈ ಮೊದಲು ಡ್ರಗ್ ಜೊತೆ ಕಾಲ್ ಬಾಯ್ಸ್, ಸೆಕ್ಸ್ ಪಾರ್ಟಿ ನಡೆದಿದ್ದು ಬಯಲಾಗಿತ್ತು. ಆದರೆ ಈಗ ಮತ್ತಷ್ಟು ಸ್ಪೋಟಕ ಅಂಶಗಳು ತನಿಖೆ ವೇಳೆ ತಿಳಿದು ಬಂದಿವೆ. ಎರಡು ದಿನ ನಡೆದ ಪಾರ್ಟಿಯಲ್ಲಿ ಡ್ರಗ್ ಮತ್ತಲ್ಲಿದ್ದ ಪಾರ್ಟಿ ಮಂದಿ ಲೆಕ್ಕವಿಲ್ಲದ್ದಷ್ಟು ಹಣ ಕಟ್ಟಿ ಅಂದರ್ ಬಾಹರ್ ಆಡಿದ್ದಾರೆ. ಪಾರ್ಟಿಯಲ್ಲಿದ್ದ ಕೆಲವರಿಗೆ ತಾವು ಏನೂ ಮಾಡುತ್ತಿದ್ದೇವೆ ಎಂಬುದರ ಬಗ್ಗೆ ಅರಿವು ಸಹ ಇರಲಿಲ್ಲವಂತೆ. ಸದ್ಯ ಈ ಆಯಮದಲ್ಲೂ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.
ಇನ್ನೂ ಪಾರ್ಟಿಯಲ್ಲಿ ಭಾಗಿಯಾದ ಬಹುತೇಕ ಮಂದಿ ಆಂಧ್ರಪ್ರದೇಶದವರು. ಹೀಗಾಗಿ ಪಾರ್ಟಿಯಲ್ಲಿ ಆಂಧ್ರಪ್ರದೇಶದ ಲೋಕಸಭಾ, ವಿಧಾನಸಭಾ ಚುನಾವಣೆಯಲ್ಲಿ ಯಾವ ಅಭ್ಯರ್ಥಿ ಗೆಲ್ಲುತ್ತಾರೆ, ಯಾವ ಅಭ್ಯರ್ಥಿ ಸೋಲುತ್ತಾರೆ ಎಂದು ಲಕ್ಷ-ಲಕ್ಷ ಬೆಟ್ಟಿಂಗ್ ಕಟ್ಟಿದ್ದಾರೆ. ಅಷ್ಟು ಮಾತ್ರವಲ್ಲದೇ ಸದ್ಯ ನಡೆಯುತ್ತಿರುವ ಐಪಿಎಲ್ ಕ್ರಿಕೆಟ್ ಪಂದ್ಯಗಳ ಮೇಲೆ ಪಾರ್ಟಿ ಮಂದಿ ಜೂಜಾಡಿದ್ದು ಸಹ ಬೆಳಕಿಗೆ ಬಂದಿದೆ.
ಸದ್ಯ ಪೊಲೀಸರು ಮೆಡಿಕಲ್ ಟೆಸ್ಟಲ್ಲಿ ಪಾಸಿಟಿವ್ ಬಂದವರಿಗೆ ನೋಟಿಸ್ ನೀಡಿ ವಿಚಾರಣೆಗೆ ಕರೆಯುತ್ತಿದ್ದಾರೆ. ನೋಟಿಸ್ ಪಡೆದವರು ವಿಚಾರಣೆಗೆ ಹಾಜರಾಗುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ. ಇನ್ನೂ ಸಿಸಿಬಿ ತನಿಖೆ ವೇಳೆ ಮತ್ತಷ್ಟು ಸ್ಪೋಟಕ ಅಂಶಗಳು ಬೆಳಕಿಗೆ ಬರುವ ಸಾಧ್ಯತೆ ಇದೆ.