IPL ನ ಮೆಗಾ ಫೈನಲ್ ಚೆನ್ನೈನ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ಸನ್ ರೈಸರ್ಸ್ ಹೈದರಾಬಾದ್ ತಂಡಗಳ ನಡುವೆ ಆರಂಭವಾಗಿದೆ.
ದಪ್ಪ ಇದ್ದೀನಿ ಅಂತ ಚಿಂತೆ ಮಾಡ್ತಿದ್ದೀರಾ!?.. ಟೆನ್ಷನ್ ಬಿಡಿ ಇದನ್ನು ಟ್ರೈ ಮಾಡಿ… !
ಇಲ್ಲಿಯವರೆಗೆ ಎರಡೂ ತಂಡಗಳ ಪಯಣ ಅತ್ಯುತ್ತಮವಾಗಿತ್ತು. ಹೀಗಾಗಿ ಉಭಯ ತಂಡಗಳ ನಡುವೆ ಬಿಗ್ ಫೈಟ್ ನಿರೀಕ್ಷೆಯಿದೆ. ಈಗಾಗಗಲೇ ಟಾಸ್ ಆಗಿದ್ದು, ಟಾಸ್ ಗೆದ್ದ ಹೈದರಾಬಾದ್ ತಂಡದ ನಾಯಕ ಪ್ಯಾಟ್ ಕಮಿನ್ಸ್ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿದ್ದಾರೆ
ಆದ್ರೆ ಇದೇ ಇವರಿಗೆ ಈಗ ಮುಳುವಾಯ್ತಾ ಎಂಬ ಪ್ರಶ್ನೆ ಮೂಡಿದೆ. ಯಾಕೆ ಅಂತೀರಾ? ಮುಂದೆ ನೋಡಿ. ಹೌದು ಕ್ವಾಲಿಫೈಯರ್ 2 ಪಂದ್ಯದಲ್ಲಿ ಇದೇ ಗ್ರೌಂಡ್ನಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ಎಸ್ಆರ್ಹೆಚ್ ಪಂದ್ಯ ಗೆದ್ದಿತ್ತು. ಇದನ್ನು ಮನದಲ್ಲಿಟ್ಟುಕೊಂಡು ಪ್ಯಾಟ್ ಕಮಿನ್ಸ್ ಇಂದು ಕೂಡ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ್ರು. ಆದ್ರೆ ಬ್ಯಾಟಿಂಗ್ ಆರಂಭಿಸಿದ ಎಸ್ಆರ್ಹೆಚ್ಗೆ ಆರಂಭಿಕ ಆಘಾತ ಎದುರಾಯ್ತು.
ಪವರ್ ಪ್ಲೇ ಮುಗಿಯುವಷ್ಟರಲ್ಲೇ ಪ್ರಮುಖ ಮೂರು ವಿಕೆಟ್ಗಳನ್ನು ಎಸ್ಆರ್ಹೆಚ್ ಕಳೆದುಕೊಂಡಿದೆ. ದೈತ್ಯ ಬ್ಯಾಟ್ಸ್ಮನ್ ಟ್ರಾವಿಸ್ ಹೆಡ್ ಡಕೌಟ್ ಆಗಿದ್ದಾರೆ