ಕುಕ್ಕರ್ನಲ್ಲಿ ಅಡುಗೆ ಮಾಡುವ ಮುನ್ನ ನೀವು ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆ ಕ್ರಮ ಯಾವುದು ಎಂಬುವುದರ ಬಗ್ಗೆ ಕೆಲವೊಂದಷ್ಟು ಸಲಹೆಯನ್ನು ನೀಡಲಾಗಿದೆ
ಈಗಂತೂ ಪ್ರತಿಯೊಬ್ಬರ ಮನೆಯಲ್ಲೂ ಪ್ರೆಶರ್ ಕುಕ್ಕರ್ ಬಳಕೆ ಸರ್ವೇ ಸಾಮಾನ್ಯವಾಗಿ ಬಿಟ್ಟಿದೆ. ಆದರೆ ಕುಕ್ಕರ್ ಬಳಸಿ ಅಡುಗೆ ತಯಾರಿಸುವ ಅನೇಕ ಮಂದಿಗೆ ಅದನ್ನು ಹೇಗೆ ಬಳಸಬೇಕು ಎಂಬ ಅರಿವಿಲ್ಲ. ಇದರಿಂದ ಎಷ್ಟೋ ಬಾರಿ ಕುಕ್ಕರ್ ಬ್ಲಾಸ್ಟ್ ಆಗಿರುವ ಘಟನೆಗಳು ನಮ್ಮ ಕಣ್ಣ ಮುಂದಿದೆ. ಹಾಗಾಗಿ ಕುಕ್ಕರ್ನಲ್ಲಿ ಅಡುಗೆ ಮಾಡುವ ಮುನ್ನ ನೀವು ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆ ಕ್ರಮ ಯಾವುದು ಎಂಬುವುದರ ಬಗ್ಗೆ ಕೆಲವೊಂದಷ್ಟು ಸಲಹೆಯನ್ನು ನೀಡಲಾಗಿದೆ
ಸ್ಕ್ರೂ ಟೈಟ್: ನಾವು ಯಾವುದೇ ರೀತಿಯ ಆಹಾರ ಬೇಯಿಸಲು ಮುಂದಾಗುವ ಮುನ್ನ ಮೊದಲು ಕುಕ್ಕರ್ ಸರಿಯಾಗಿದೆಯೇ ಎಂದು ಪರಿಶೀಲಿಸುವುದು ಬಹಳ ಮುಖ್ಯ. ಹಾಗಾಗಿ ಮೊದಲು ಕುಕ್ಕರ್ ಹ್ಯಾಂಡಲ್ ಅಂದರೆ ಕುಕ್ಕರ್ ಹಿಡಿದುಕೊಳ್ಳಲು ಇರು ಹ್ಯಾಂಡಲ್ ಹಾಗೂ ಅದರ ಸ್ಕ್ರೂ ಲೂಸ್ ಆಗಿದ್ಯಾ ಎಂಬುವುದನ್ನು ಪರೀಕ್ಷಿಸಿ. ಇದರಿಂದ ಮುಂದಾಗುವ ಅನಾಹುತವನ್ನು ತಪ್ಪಿಸಬಹುದು. ಒಂದು ವೇಳೆ ಸ್ಕ್ರೂ ಲೂಸ್ ಇದ್ದರೆ ಟೈಟ್ ಮಾಡಿ. ಇಲ್ಲದಿದ್ದರೆ ಬಿಸಿಯಾದ ಕುಕ್ಕರ್ ನಿಮ್ಮ ಕಾಲು ಅಥವಾ ಕೈಗಳ ಮೇಲೆ ಬಿದ್ದು ಹಾನಿಯುಂಟಾಗಬಹುದು.
ರಬ್ಬರ್ ಪರಿಶೀಲಿಸಿ: ಕುಕ್ಕರ್ನಲ್ಲಿ ಅಡುಗೆ ಮಾಡುವ ಮುನ್ನ ಕುಕ್ಕರ್ ಮುಚ್ಚಳದ ಸುತ್ತ ಸಿಗಿಸುವ ರಬ್ಬರ್ ನತ್ತ ಗಮನ ಇರಬೇಕು. ಒಂದು ವೇಳೆ ಕುಕ್ಕರ್ ರಬ್ಬರ್ ಲೂಸ್ ಇದ್ದರೆ ಅಥವಾ ಟೈಟ್ ಇದ್ದರೆ ಅದನ್ನು ಕೂಡಲೇ ಬದಲಾಯಿಸಬೇಕು. ಕೆಲವೊಮ್ಮ ರಬ್ಬರ್ ಕಿತ್ತು ಹೋಗಿರುತ್ತದೆ, ಮತ್ತೊಂದಷ್ಟು ತೂತು ಆಗಿರುತ್ತದೆ. ಅಂತಹ ಕುಕ್ಕರ್ ರಬ್ಬರ್ ಅನ್ನು ಎಂದಿಗೂ ಬಳಸಬಾರದು. ಇದಲ್ಲಿದ್ದರೆ ಕುಕ್ಕರ್ ಸಿಡಿಯುವ ಅಪಾಯವಿರುತ್ತದೆ.
ಕುಕ್ಕರ್ಗೆ ಬಳಸೋ ನೀರಿನ ಪ್ರಮಾಣ: ಕುಕ್ಕರ್ ನಲ್ಲಿ ಅಡುಗೆ ಮಾಡುವಾಗ ನಾವು ಎಷ್ಟು ಪ್ರಮಾಣದ ನೀರನ್ನು ಬಳಸುತ್ತೇವೆ ಎಂಬುವುದು ತುಂಬಾ ಮುಖ್ಯ. ಹಾಗಾಗಿ ಯಾವ ಪ್ರಮಾಣದಲ್ಲಿ ನೀರಿನ ಬಳಕೆ ಮಾಡಬೇಕು ಎಂಬುವುದನ್ನು ಗಮನದಲ್ಲಿಟ್ಟುಕೊಂಡು ಕುಕ್ಕರ್ನಲ್ಲಿ ಆಹಾರ ಬೇಯಿಸಬೇಕು.
ಗ್ಯಾಸ್ಕೆಟ್ ರಿಂಗ್: ಕುಕ್ಕರ್ನಲ್ಲಿ ನಾವು ಮಾಡೋ ಅಡುಗೆ ಬೇಗ ತಯಾರಾಗಬೇಕೆಂದರೆ ಮೊದಲು ಗ್ಯಾಸ್ಕೆಟ್ ರಿಂಗ್ ಸರಿಯಾಗಿ ಫಿಟ್ ಮಾಡಿದ್ದೀವಾ ಎಂಬುವುದನ್ನು ಪರಿಶೀಲಿಸಿ. ಒಂದು ವೇಳೆ ಈ ಗ್ಯಾಸ್ಕೆಟ್ ರಿಂಗ್ ಲೂಸ್ ಇದ್ದರೆ ಕುಕ್ಕರ್ ಬ್ಲಾಸ್ಟ್ ಅಥವಾ ಸಿಡಿಯುವ ಸಾಧ್ಯತೆ ಇರುತ್ತದೆ. ಹಾಗಾಗಿ ಮೊದಲೇ ಮುನ್ನೆಚ್ಚರಿಕೆ ವಹಿಸುವುದು ಉತ್ತಮ
ಕುಕ್ಕರ್ನಲ್ಲಿ ಬೇಯಿಸುವ ಆಹಾರ ಪ್ರಮಾಣ: ಕುಕ್ಕರ್ನಲ್ಲಿ ಅಡುಗೆ ಮಾಡುವ ಮುನ್ನ ನಾವು ಬಳಸುವ ಕುಕ್ಕರ್ ಎಷ್ಟು ಗಾತ್ರದ್ದು, ಇದರಲ್ಲಿ ಎಷ್ಟು ಪ್ರಮಾಣದ ಪದಾರ್ಥಗಳನ್ನು ತುಂಬಬೇಕು ಎಂಬುವುದರ ಬಗ್ಗೆ ಅರಿವಿರಬೇಕು. ಕೆಲವರು ಕುಕ್ಕರ್ ತುಂಬಾ ತರಕಾರಿ, ಕಾಳು, ಸೊಪ್ಪು ಹೀಗೆ ನಾನಾ ಪದಾರ್ಥಗಳನ್ನು ತುಂಬುತ್ತಾರೆ. ಆದರೆ ಹೀಗೆ ಮಾಡುವುದು ತಪ್ಪು. ಇದರ ಬದಲು ಕುಕ್ಕರ್ನ ಮುಕ್ಕಾಲು ಭಾಗದಷ್ಟು ಮಾತ್ರ ಆಹಾರ ಮತ್ತು ನೀರನ್ನು ಹಾಕಿ. ಆಗ ಮಾತ್ರ ಆಹಾರ ಸರಿಯಾಗಿ ಕುಕ್ಕರ್ನಲ್ಲಿ ಬೇಯ್ಯುತ್ತದೆ. ಅದಕ್ಕೂ ಮೀರಿ ಆಹಾರ ಪದಾರ್ಥಗಳನ್ನು ತುಂಬಿದರೆ ನಿಮಗೆ ಅಪಾಯ.