ವಿರಾಟ್ ಕೊಹ್ಲಿ ಅವರ ದಾಖಲೆ ಮೇಲೆ ಪಾಕ್ ನಾಯಕ ಬಾಬರ್ ಆಝಂ ಕಣ್ಣಿಟ್ಟಿದ್ದಾರೆ. ಮುಂಬರುವ ಟಿ20 ವಿಶ್ವಕಪ್ 2024 ರ ಸಿದ್ಧತೆಗಳನ್ನು ಗಮನದಲ್ಲಿಟ್ಟುಕೊಂಡು, ಪಾಕಿಸ್ತಾನ ಕ್ರಿಕೆಟ್ ತಂಡವು 4 ಪಂದ್ಯಗಳ ಟಿ20 ಸರಣಿಯನ್ನು ಆಡಲು ಇಂಗ್ಲೆಂಡ್ ಪ್ರವಾಸ ಕೈಗೊಂಡಿದೆ. ಈ ಸರಣಿಯ ಎರಡನೇ ಪಂದ್ಯದಲ್ಲಿ, ಪಾಕಿಸ್ತಾನಿ ತಂಡದ ನಾಯಕ ಬಾಬರ್ ಆಝಂ 26 ಎಸೆತಗಳಲ್ಲಿ 32 ರನ್ ಕಲೆಹಾಕಿದರು. ಈ ಮೂಲಕ ಟಿ20 ಮಾದರಿಯಲ್ಲಿ ಅಪರೂಪದ ದಾಖಲೆ ಕೂಡ ಸೃಷ್ಟಿಸಿದರು.
LPG ಬಳಕೆದಾರರೇ ಗಮನಿಸಿ: ಇನ್ನೂ 5 ದಿನದಲ್ಲಿ ಈ ಕೆಲಸ ಮಾಡದಿದ್ರೆ ಸಿಲಿಂಡರ್ ಸಬ್ಸಿಡಿ 300 ರೂ ಸಿಗಲ್ವಂತೆ!?
32 ರನ್ಗಳ ಈ ಇನ್ನಿಂಗ್ಸ್ ಆಧಾರದ ಮೇಲೆ ಬಾಬರ್, ಅಂತಾರಾಷ್ಟ್ರೀಯ ಟಿ20 ಪಂದ್ಯಗಳಲ್ಲಿ ಅತಿ ಹೆಚ್ಚು ರನ್(3987 ರನ್) ಬಾರಿಸಿದ ಬ್ಯಾಟರ್ಗಳ ಪಟ್ಟಿಯಲ್ಲಿ ಇದೀಗ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ (3974 ರನ್) ಅವರನ್ನು ಹಿಂದಿಕ್ಕಿದ್ದಾರೆ. ಅಲ್ಲದೆ ಈ ಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೇರಿದ್ದಾರೆ. ಉಳಿದಂತೆ ಈ ಪಟ್ಟಿಯಲ್ಲಿ ಮೊದಲ ಸ್ಥಾನವನ್ನು ಟೀಂ ಇಂಡಿಯಾದ ಸ್ಟಾರ್ ಬ್ಯಾಟ್ಸ್ಮನ್ ವಿರಾಟ್ ಕೊಹ್ಲಿ (4037 ರನ್) ಆಕ್ರಮಿಸಿಕೊಂಡಿದ್ದಾರೆ. ಆದರೆ ಈ ದಾಖಲೆಯನ್ನೂ ಬಾಬರ್ ಆಝಂ ಮುರಿಯುವ ಸಮೀಪದಲ್ಲಿದ್ದಾರೆ.
ಟಿ20 ವಿಶ್ವಕಪ್ಗೂ ಮೊದಲು, ಪಾಕಿಸ್ತಾನ ತಂಡವು ಇಂಗ್ಲೆಂಡ್ ವಿರುದ್ಧದ ಈ ಟಿ20 ಸರಣಿಯಲ್ಲಿ ಇನ್ನೂ 2 ಪಂದ್ಯಗಳನ್ನು ಆಡಬೇಕಾಗಿದೆ. ಇದರಲ್ಲಿ ಬಾಬರ್ ಆಝಂ ವಿರಾಟ್ ಕೊಹ್ಲಿಯ ದಾಖಲೆಯನ್ನು ಮುರಿಯಲು ಉತ್ತಮ ಅವಕಾಶವನ್ನು ಹೊಂದಿದ್ದಾರೆ.