ಬೆಂಗಳೂರು: ಪೆನ್ ಡ್ರೈವ್ ತೋರಿಸಿದ್ದು ಯಾರು? ಪೆನ್ ಡ್ರೈವ್ ಪಿತಾಮಹನೇ ಕುಮಾರಸ್ವಾಮಿ. ಅವರ ಪೆನ್ ಡ್ರೈವ್ ನಲ್ಲಿದ್ದು ಅದೇ. ಪೆನ್ಡ್ರೈವ್ ಪಿತಾಮಹನೇ ಕುಮಾರಸ್ವಾಮಿ ಎಂದು ಎಚ್ಡಿಕೆ ವಿರುದ್ಧ ಕೆ.ಎನ್.ರಾಜಣ್ಣ ವಾಗ್ದಾಳಿ ನಡೆಸಿದರು. ಬೆಂಗಳೂರಿನಲ್ಲಿ ಮಾತನಾಡಿದ ಅವರು, ಹಾಸನ ಪೆನ್ಡ್ರೈವ್ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಜ್ವಲ್ ವಿರುದ್ಧ ಕ್ರಮ ಕೈಗೊಳ್ತಾರೆ.
ಅವರ ಚಲನವಲನ ಎಲ್ಲರಿಗೆ ಗೊತ್ತಿದೆ. ಪಾಸ್ ಪೋರ್ಟ್ ರದ್ಧು ಏಕಾಏಕಿ ಆಗಲ್ಲ. ಅವಕಾಶ ಮಾಡಿಕೊಡಬೇಕು. ಕಾನೂನಿನ ಲೋಪವಾಗದಂತೆ ನೋಡಿಕೊಳ್ತಿದ್ದಾರೆ. ಅವರೆಲ್ಲಿದ್ದಾರೆ ಎಲ್ಲರಿಗೂ ಗೊತ್ತಿರುತ್ತದೆ. ಕೇಂದ್ರಕ್ಕೂ ಗೊತ್ತು,ರಾಜ್ಯಕ್ಕೂ ಗೊತ್ತು. ಎಸ್ ಐಟಿ ಯವರಿಗೂ ಗೊತ್ತಿರುತ್ತೆ. ಆದರೆ, ಕಾನೂನಿನ ಪ್ರಕಾರವೇ ಮಾಡಬೇಕು ಎಂದರು.
ಪುರುಷರೇ ಎಚ್ಚರ! ಈ ಕಾರಣಗಳಿಂದಾಗಿಯೇ ನಿಮ್ಮ ಮೂತ್ರದಲ್ಲಿ ರಕ್ತ ಬರುತ್ತದೆಯಂತೆ..!
ಪರಿಷತ್ ಚುನಾವಣೆ ವಿಚಾರವಾಗಿ ಮಾತನಾಡಿ, ಹೌದು ಬಹಳಷ್ಟು ಆಕಾಂಕ್ಷಿಗಳು ಇದ್ದಾರೆ. ಅವರ ಪಟ್ಟಿ ಬಹಳ ಉದ್ದವಿದೆ. ನಾಮಿನೇಷನ್ ಮಾಡುವಾಗ ಸಂಪ್ರದಾಯವಿರುತ್ತೆ. ಯಾರು ವಿದ್ವತ್ ಹೊಂದಿತ್ತಾರೆ ಅವರಿಗೆ ಕೊಡಬೇಕು. ಪರಿಗಣನೆ ಮಾಡುವಾಗ ಇದನ್ನು ಗಮನಿಸಬೇಕು ಎಂಬುವುದು ನನ್ನ ವಾದವಾಗಿದೆ. ಅವಕಾಶ ವಂಚಿತರಿಗೆ ಅವಕಾಶ ಕೊಡಬೇಕು.
ನಮ್ಮ ಬಳಿ ಯಾವ ಬೇಡಿಕೆ ಇಲ್ಲ. ತಳ ಸಮುದಾಯಗಳಿಗೆ ಅವಕಾಶ ಕೊಡಬೇಕು ಎಂದರು. ಲೋಕಸಭೆ ಚುನಾವಣೆ ವಿಚಾರವಾಗಿ ಮಾತನಾಡಿ, 28 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಒಲವಿದೆ. ಹಾಸನನನ್ನ ಉಸ್ತುವಾರಿ ಜಿಲ್ಲೆ. ತುಮಕೂರು ನನ್ನ ತವರು ಜಿಲ್ಲೆ. ಹಾಸನದಲ್ಲಿ ಒಂದೇ ಕುಟುಂಬವಿತ್ತು. 25 ವರ್ಷಗಳಿಂದ ಅವರೇ ಇದ್ರು.ಈ ಬಾರಿ ನಮ್ಮ ಅಭ್ಯರ್ಥಿಗೆ ಅವಕಾಶವಿದೆ. ಪೆನ್ ಡ್ರೈವ್ ಪ್ರಕರಣ ಇದಕ್ಕೆ ಪರಿಣಾಮ ಬೀರಲ್ಲ ಎಂದರು.