ಟೀಮ್ ಇಂಡಿಯಾ ಮುಖ್ಯ ಕೋಚ್ ಸ್ಥಾನಕ್ಕೆ ಇನ್ನೊಂದು ಹೆಸರು ಎಂಟ್ರಿ ಆಗಿದೆ.
Prahlad Joshi: ಪ್ರಜ್ವಲ್ ದೇಶ ಬಿಡುವಂತೆ ಮಾಡಿದ್ದು ಕಾಂಗ್ರೆಸ್ ಸರ್ಕಾರ – ಪ್ರಹ್ಲಾದ್ ಜೋಶಿ
ಟೀಮ್ ಇಂಡಿಯಾ ಕೋಚ್ ಸ್ಥಾನಕ್ಕೆ ಬಿಸಿಸಿಐ ಈಗಾಗಲೇ ಅರ್ಜಿಯನ್ನು ಆಹ್ವಾನಿಸಿದೆ. ಈ ಹಿನ್ನೆಲೆಯಲ್ಲಿ ಹಲವು ಆಟಗಾರರು ಈ ಸ್ಥಾನದ ಮೇಲೆ ಕಣ್ಣು ನೆಟ್ಟಿದ್ದಾರೆ. ಟೀಮ್ ಇಂಡಿಯಾದ ಕೋಚ್ ಸ್ಥಾನದ ಮೇಲೆ ದೇಶ ಹಾಗೂ ವಿದೇಶಿ ಆಟಗಾರರು ಕಣ್ಣು ನೆಟ್ಟಿದ್ದಾರೆ. ಈ ವೇಳೆ ಹೆಡ್ ಕೋಚ್ ಸ್ಥಾನಕ್ಕೆ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಕೋಚ್ ಸ್ಟೀಫನ್ ಫ್ಲೆಮಿಂಗ್ ಈ ರೇಸ್ನಲ್ಲಿದ್ದರು. ಆದರೆ ಸ್ಟೀಫನ್ ಅದನ್ನು ನಿರಾಕರಿಸಿದರು. ಆಸ್ಟ್ರೇಲಿಯಾ ಆಟಗಾರರಿಗೆ ಸಂಬಂಧಿಸಿದಂತೆ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಈಗಾಗಲೇ ಟೀಂ ಇಂಡಿಯಾದ ಕೋಚ್ ಆಗಲು ಯಾವುದೇ ಆಸ್ಟ್ರೇಲಿಯಾದವರ ಅರ್ಜಿ ಬಂದಿಲ್ಲ ಎಂದು ಸ್ಪಷ್ಟಪಡಿಸಿದ್ದರು.
ಈಗ ಕೋಚ್ ಸ್ಥಾನಕ್ಕೆ ಹಲವು ಹೆಸರುಗಳು ಕೇಳಿ ಬಂದಿವೆ. ಲಖ್ನೋ ಸೂಪರ್ ಜೇಂಟ್ಸ್ ತಂಡದ ಕೋಚ್ ಜಸ್ಟಿನ್ ಲ್ಯಾಂಗರ್ ಸಹ ತಾವು ಸಹ ಟೀಮ್ ಇಂಡಿಯಾದ ಕೋಚ್ ಆಗಲು ಆಸಕ್ತಿ ಹೊಂದಿರುವುದಾಗಿ ತಿಳಿಸಿದ್ದರು. ಟೀಮ್ ಇಂಡಿಯಾ ಕೋಚ್ ಸ್ಥಾನಕ್ಕೆ ದೇಶ ಹಾಗೂ ವಿದೇಶಿ ಕೋಚ್ಗಳಿಗೂ ಅವಕಾಶ ಇದೆ ಎಂದು ಬಿಸಿಸಿಐ ತಿಳಿಸಿದೆ. ಈಗ ಈ ಲೀಸ್ಟ್ಗೆ ಹೊಸ ಎಂಟ್ರಿ ಆಗಿದೆ. ಇದೀಗ ಟೀಂ ಇಂಡಿಯಾದ ಮುಖ್ಯ ಕೋಚ್ ಆಗುವ ರೇಸ್ನಲ್ಲಿ ಮಾಜಿ ಅನುಭವಿ ಗೌತಮ್ ಗಂಭೀರ್ ಹೆಸರು ಕೇಳಿ ಬಂದಿದೆ. ಈ ಋತುವಿನಲ್ಲಿ ಗಂಭೀರ್ ಕೆಕೆಆರ್ಗೆ ಮೆಂಟರ್ ಆಗಿ ಕೆಲಸ ಮಾಡಿದ ರೀತಿಯನ್ನು ನೋಡಿದರೆ, ಅವರನ್ನು ಈಗ ಮುಖ್ಯ ಕೋಚ್ ಆಗಲು ಪ್ರಬಲ ಸ್ಪರ್ಧಿ ಎಂದು ಪರಿಗಣಿಸಲಾಗಿದೆ.