ಬಾಗಲಕೋಟೆ:- ಸರ್ಕಾರಿ ಐಬಿಯಲ್ಲಿ ಎಣ್ಣೆ ಪಾರ್ಟಿ ಮಾಡಿದ್ದ ಐವರು ಜಿಪಂ ಎಂಜಿನಿಯರ್ಗಳನ್ನು ಸಸ್ಪೆಂಡ್ ಮಾಡಲಾಗಿದೆ.
ಜಿಲ್ಲಾಧಿಕಾರಿ ಜಾನಕಿ ಕೆ.ಎಂ. ಆದೇಶ ಹೊರಡಿಸಿದ್ದಾರೆ. ನೀತಿಸಂಹಿತೆ ಇದ್ದರೂ ಸರ್ಕಾರಿ ಐಬಿಯಲ್ಲೇ ಎಣ್ಣೆ ಪಾರ್ಟಿ ಮಾಡಿದ್ದ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗಿದೆ.
ಜಿಪಂ ಜಮಖಂಡಿ ವಿಭಾಗದ ಎಇಇ ಎಮ್.ಎಸ್ ನಾಯಕ, ಸಹಾಯಕ ಎಂಜಿನಿಯರ್ಗಳಾದ ರಾಮಪ್ಪ ರಾಠೋಡ್, ಜಗದೀಶ್ ನಾಡಗೌಡ, ಗಜಾನನ ಪಾಟಿಲ್, ಎಸ್.ಆರ್.ಜಂಬಗಿ ಅಮಾನತುಗೊಂಡವರು ಎನ್ನಲಾಗಿದೆ. ಜಮಖಂಡಿಯ ಸರ್ಕಾರಿ ಐಬಿ ರಮಾ ನಿವಾಸದಲ್ಲಿ ಇತ್ತೀಚೆಗೆ ಜಮಖಂಡಿ ವಿಭಾಗದ ಜಿಪಂ ಎಂಜಿನಿಯರ್ಗಳು ಗುತ್ತಿಗೆದಾರರೊಂದಿಗೆ ಸೇರಿ ಹಾಡಹಗಲೇ ಎಣ್ಣೆ ಪಾರ್ಟಿ ಮಾಡಿದ್ದರು. ಇದರ ವಿಡಿಯೊ ವೈರಲ್ ಆಗಿತ್ತು. ಹೀಗಾಗಿ ಅಧಿಕಾರಿಗಳ ವಿರುದ್ಧ ಜಿಲ್ಲಾಧಿಕಾರಿ ಕ್ರಮ ಕೈಗೊಂಡಿದ್ದಾರೆ.