ಬೆಂಗಳೂರು:– ಆಘಾತ ಮಹಿತಿಯೊಂದು ಹೊರ ಬಿದ್ದಿದ್ದು, ದುಶ್ಚಟಗಳಿಗೆ ಅಪ್ರಾಪ್ತರೆ ಹೆಚ್ಚು ಟಾರ್ಗೆಟ್ ಎಂದು ಹೇಳಲಾಗುತ್ತಿದೆ.
ಯುವ ಜನತೆಯಲ್ಲಿ ಮಾನಸಿಕ ಒತ್ತಡ ಹೆಚ್ಚಳ.. ಸೋಶಿಯಲ್ ಮೀಡಿಯಾ ಕಾರಣ ಎಂದ ತಜ್ಞರು!
ಹೀಗಾಗಿ ಆನ್ಲೈನ್ ಹೋಮ್ ಡೆಲಿವರಿ ಆ್ಯಪ್ಗಳ ವಿರುದ್ಧ ಕ್ರಮಕ್ಕೆ ಸೈಬರ್ ಕ್ರೈಂ ಇಲಾಖೆಗೆ ಆರೋಗ್ಯ ಇಲಾಖೆ ಆಯುಕ್ತ ರಂದೀಪ್ ಪತ್ರ ಬರೆದಿದ್ದಾರೆ. ಬ್ಲಿಂಕಿಟ್, ಝೊಮಾಟೋ, ಸ್ವಿಗ್ಗಿ, ಜೆಪ್ಟೋ, ಬಿಗ್ ಬ್ಯಾಸ್ಕೆಟ್ ಸೇರಿ ಹಲವು ಹೋಮ್ ಡೆಲಿವರಿ ಆ್ಯಪ್ಗಳಿಂದ COTPA-2003 ಕಾಯ್ದೆ ನಿಯಮ ಉಲ್ಲಂಘನೆ ಆರೋಪ ಕೇಳಿಬಂದಿದೆ. ಇದರಿಂದ ಅನೇಕ ದೂರುಗಳು ಕೂಡ ದಾಖಲಾದ ಹಿನ್ನೆಲೆ ಇ-ವಾಣಿಜ್ಯ ವೆಬ್ಸೈಟ್ ಮೇಲೆ ಕಾನೂನು ಕ್ರಮಕ್ಕೆ ಮನವಿ ಮಾಡಲಾಗಿದೆ.
ರಾಜ್ಯದಲ್ಲಿ ಇ-ವಾಣಿಜ್ಯ ವೆಬ್ ಸೈಟ್ ಮೂಲಕ ಆರೋಗ್ಯ ಎಚ್ಚರಿಕೆ ಸಂದೇಶಗಳಿಲ್ಲದೆ ತಂಬಾಕು ಉತ್ಪನ್ನಗಳನ್ನು ವ್ಯಾಪಾರ ನಡೆಸುವುದರ ಮೂಲಕ ಸಾರ್ವಜನಿಕರಲ್ಲಿ ಅದರಲ್ಲೂ ಮುಖ್ಯವಾಗಿ ಯುವಕರನ್ನು ದುಶ್ಚಟಕ್ಕೆ ಒಳಗಾಗುವಂತೆ ಮಾಡುತ್ತಿರುವುದರ ಬಗ್ಗೆ ದೂರು ಸ್ವೀಕೃತವಾಗಿದೆ. The Cigarettes and Other Tobacco Products Act (COTPA) 2003 ಕಾಯ್ದೆ ಉಲ್ಲಂಘನೆ ಆಗಿದೆ. ಬ್ಲಿಂಕಿಟ್, ಝೊಮಾಟೋ, ಸ್ವಿಗ್ಗಿ, ಜೆಪ್ಟೋ, ಬಿಗ್ ಬ್ಯಾಸ್ಕೆಟ್ ಸೇರಿ ಹಲವು ಆ್ಯಪ್ಗಳು ಆರೋಗ್ಯ ಎಚ್ಚರಿಕೆ ಸಂದೇಶಗಳಿಲ್ಲದೆ ಮಾರಾಟವಾಗುತ್ತಿದ್ದು ಇದರಿಂದ ಅಪ್ರಾಪ್ತ ಮಕ್ಕಳು ವಿಷಕಾರಿ ಕ್ಯಾನ್ಸರ್ ಕಾರಕ ತಂಬಾಕು ಉತ್ಪನ್ನಗಳನ್ನು ಸೇವಿಸಲು ಉತ್ತೇಜಿಸಿದಂತಾಗುವುದಲ್ಲದೆ ಸುಲಭ ಲಭ್ಯತೆಗೆ ದಾರಿ ಮಾಡಿ ಕೊಟ್ಟಂತಾಗುತ್ತದೆ.
ಆದ್ದರಿಂದ ಇಂತಹ ಕಾನೂನು ಬಾಹಿರ ರೀತ್ಯಾ ಆನ್ ಲೈನ್ ವೆಬ್ ಸೈಟ್ಗಳ ಮೇಲೆ ತುರ್ತಾಗಿ ಕಾನೂನು ಕ್ರಮ ಕೈಗೊಳ್ಳಲು ಕೋರಿದೆ