ಬೆಂಗಳೂರು: ಚನ್ನಗಿರಿ ಲಾಕ್ ಅಪ್ ಡೆತ್ ಆರೋಪ ಪ್ರಕರಣ ವಿಚಾರಕ್ಕೆ ಸಂಬಂಧಿಸಿದಂತೆ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಪ್ರತಿಕ್ರಿಯೇ ನೀಡಿದ್ದಾರೆ. ಆರೋಪಿ ಆದಿಲ್ ವಿರುದ್ಧ ಚನ್ನಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಹೀಗಾಗಿ ಪೊಲೀಸರು ಆತನನ್ನು ಠಾಣೆಗೆ ಕರೆತಂದಿದ್ದರು. ಠಾಣೆಗೆ ಕರೆತಂದು 7 ನಿಮಿಷದೊಳಗೆ ಆರೋಗ್ಯದಲ್ಲಿ ಏರುಪೇರು ಆಗಿ ಆದಿಲ್ ಮೃತಪಟ್ಟಿದ್ದಾನೆ.ಪೋಸ್ಟ್ ಮಾರ್ಟಂನಲ್ಲಿ ಯಾಕೆ ಸಾವನ್ನಪ್ಪಿದ್ರು ಅಂತ ಗೊತ್ತಾಗುತ್ತೆ ಎಂದು ಹೇಳಿದರು.
ಉಡುಪಿಯಲ್ಲಿ ಎರಡು ಗುಂಪುಗಳ ನಡುವೆ ನಡೆದ ಗ್ಯಾಂಗ್ವಾರ್ ಪ್ರಕರಣದ ವಿಚಾರವಾಗಿ ಮಾತನಾಡಿ, ಈ ಘರ್ಷಣೆ ಹೇಳಿ ಕೇಳಿ ಆಗಲ್ಲ, ಇದ್ದಕ್ಕಿದ್ದಂತೆ ಮಾಡಿಕೊಳ್ಳುತ್ತಾರೆ. ಅಂತಹ ಸಂದರ್ಭದಲ್ಲಿ ನಾವು ಅವರನ್ನು ನಿಯಂತ್ರಿಸುತ್ತೇವೆ. ಠಾಣೆಗೆ ಬಂದು ತಲೆ ಕತ್ತರಿಸುತ್ತೇವೆ ಅಂದರೆ ಬಿಡಲು ಆಗುತ್ತಾ? ಡಿಜೆ ಹಳ್ಳಿ ಮತ್ತು ಕೆಜೆ ಹಳ್ಳಿ ರೀತಿ ಮಾಡುತ್ತೇವೆ ಅಂದಿದ್ದಾರೆ.
500 Note Update: ನಿಮ್ಮ ಬಳಿ 500 ರೂಪಾಯಿ ನೋಟು ಇದ್ಯಾ..? ಕ್ಷಣಮಾತ್ರದಲ್ಲಿ ನೀವು ಆಗ್ಬೋದು ಮಿಲಿಯನೇರ್
ಅದು ನನ್ನ ಕಿವಿಗೆ ಬಿತ್ತು. ಕಾನೂನಿನಲ್ಲಿ ಏನು ಕ್ರಮ ಇದೆ ಮುಲಾಜಿಲ್ಲದೆ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಹೇಳಿದರು. ಬೆಳಗಾವಿ ಗಲ್ಲಿ ಕ್ರಿಕೆಟ್ ವಿಚಾರವಾಗಿ ನಡೆದ ಗಲಾಟೆಗೆ ಸಂಬಂಧಿಸಿದಂತೆ ಮಾತನಾಡಿದ ಅವರು, ಗಲ್ಲಿಯಲ್ಲಿ ಸಣ್ಣದಾಗಿ ಆದ ಗಲಾಟೆ ದೊಡ್ಡದಾಗಿ ಬೆಳೆಯುತ್ತೆ. ಅದನ್ನ ನಿಯಂತ್ರಿಸುವು ನಮ್ಮ ಪೊಲೀಸರ ಕೆಲಸ. ಮೊದಲೇ ಗಲಾಟೆ ಮಾಡಿಕೊಳ್ಳುತ್ತಾರೆ ಅಂತ ಗೊತ್ತಾದರೆ ಅದು ಬೇರೆ ವಿಚಾರ. ಆ ರೀತಿ ಅನೇಕ ಸಂದರ್ಭಗಳಲ್ಲಿ ಆಗುವುದಿಲ್ಲ ಎಂದು ಹೇಳಿದರು.