ಐಪಿಎಲ್ 2024ರ ಆರೆಂಜ್ ಕ್ಯಾಪ್ ರೇಸ್ನಲ್ಲಿ ವಿರಾಟ್ ಕೊಹ್ಲಿ ಅವರು ಮುಂಚೂಣಿಯಲ್ಲಿದ್ದಾರೆ. ಆರೆಂಜ್ ಕ್ಯಾಪ್ ರೇಸ್ನಲ್ಲಿದ್ದ ಬಹುತೇಕ ಆಟಗಾರರು ಈಗಾಗಲೇ ಐಪಿಎಲ್ನಿಂದ ಹೊರಬಿದ್ದಿದ್ದಾರೆ. ಹೀಗಾಗಿ ಈ ಬಾರಿಯ ರನ್ ಸರದಾರನ ಪಟ್ಟ ಕಿಂಗ್ ಕೊಹ್ಲಿಗೆ ಒಲಿಯಲಿದೆ
ಇದಕ್ಕೂ ಮುನ್ನ ಆರೆಂಜ್ ಕ್ಯಾಪ್ ರೇಸ್ನಲ್ಲಿ ವಿರಾಟ್ ಕೊಹ್ಲಿ, ರಿಯಾನ್ ಪರಾಗ್ ಹಾಗೂ ಟ್ರಾವಿಸ್ ಹೆಡ್ ನಡುವೆ ನೇರ ಪೈಪೋಟಿ ಇತ್ತು. ಆದರೆ ಎಸ್ಆರ್ಹೆಚ್ ವಿರುದ್ಧದ 2ನೇ ಕ್ವಾಲಿಫೈಯರ್ ಪಂದ್ಯದಲ್ಲಿ ಸೋಲನುಭವಿಸಿ ರಾಜಸ್ಥಾನ್ ರಾಯಲ್ಸ್ ತಂಡ ಹೊರಬಿದ್ದಿದೆ.
ಇದರೊಂದಿಗೆ 15 ಇನಿಂಗ್ಸ್ಗಳಲ್ಲಿ 4 ಅರ್ಧಶತಕಗಳೊಂದಿಗೆ 573 ರನ್ ಬಾರಿಸಿ ಮಿಂಚಿದ್ದ ಯುವ ದಾಂಡಿಗ ರಿಯಾನ್ ಪರಾಗ್ ಆರೆಂಜ್ ಕ್ಯಾಪ್ ರೇಸ್ನಿಂದ ಹೊರಬಿದ್ದಿದ್ದಾರೆ. ಇನ್ನುಳಿದಿರುವುದು ಸನ್ರೈಸರ್ಸ್ ಹೈದರಾಬಾದ್ ತಂಡದ ಆರಂಭಿಕ ಆಟಗಾರ ಟ್ರಾವಿಸ್ ಹೆಡ್ ಮಾತ್ರ. 14 ಇನಿಂಗ್ಸ್ ಆಡಿರುವ ಹೆಡ್ ಒಟ್ಟು 567 ರನ್ ಕಲೆಹಾಕಿದ್ದಾರೆ. ಇನ್ನು ಫೈನಲ್ ಪಂದ್ಯದಲ್ಲಿ 175 ರನ್ ಬಾರಿಸಿದರೆ ಮಾತ್ರ ಆರೆಂಜ್ ಕ್ಯಾಪ್ ಅನ್ನು ಮುಡಿಗೇರಿಸಿಕೊಳ್ಳಬಹುದು. ಆದರೆ ಇದು ಕಷ್ಟಸಾಧ್ಯ ಎಂದೇ ಹೇಳಬಹುದು. ಹೀಗಾಗಿ 15 ಇನಿಂಗ್ಸ್ಗಳಲ್ಲಿ 1 ಶತಕ ಹಾಗೂ 5 ಅರ್ಧಶತಕಗಳೊಂದಿಗೆ 741 ರನ್ ಕಲೆಹಾಕಿರುವ ವಿರಾಟ್ ಕೊಹ್ಲಿಗೆ ಆರೆಂಜ್ ಕ್ಯಾಪ್ ಒಲಿಯುವುದು ಬಹುತೇಕ ಖಚಿತ