ಐಪಿಎಲ್ ಫೈನಲ್ನ ನಂತರ ವಿಜೇತರು ಮತ್ತು ರನ್ನರ್ಸ್ಅಪ್ಗಳು ಮಾತ್ರವಲ್ಲದೆ ಇತರ ಆಟಗಾರರು ಮತ್ತು ತಂಡಗಳಿಗೂ ಹಣದ ಸುರಿಮಳೆಯಾಗುತ್ತದೆ.
ಅಂಜನಾದ್ರಿ ಹನುಮ ಮಂದಿರ ಅಭಿವೃದ್ದಿಗೆ ಹಣ ನೀಡಿಕೆ ವಿಚಾರ.. CM ವಿರುದ್ಧ ನಟ ಚೇತನ್ ಆಕ್ರೋಶ!
ಕ್ವಾಲಿಫೈಯರ್ 1 ರಲ್ಲಿ ಹೈದರಾಬಾದ್ ಅನ್ನು ಸೋಲಿಸಿದ ನಂತರ ಕೋಲ್ಕತ್ತಾ ನೈಟ್ ರೈಡರ್ಸ್ ಫೈನಲ್ ತಲುಪಿದೆ. ಆದ್ದರಿಂದ ರಾಜಸ್ಥಾನ ಅಥವಾ ಹೈದರಾಬಾದ್ ತಂಡ ಕ್ವಾಲಿಫೈಯರ್ 2 ಪಂದ್ಯವನ್ನು ಗೆಲ್ಲುವ ಮೂಲಕ ಫೈನಲ್ ಪ್ರವೇಶಿಸಲಿದೆ.
ವಿಜೇತ ತಂಡವು ಐಪಿಎಲ್ 2024 ರಲ್ಲಿ 20 ಕೋಟಿ ರೂ ಬಹುಮಾನದ ಮೊತ್ತವನ್ನು ಪಡೆಯಲಿದೆ. ಹಾಗೆಯೇ ರನ್ನರ್ ಅಪ್ ತಂಡ 13 ಕೋಟಿ ರೂಪಾಯಿ ಬಹುಮಾನ ಪಡೆಯಲಿದೆ. ಐಪಿಎಲ್ 2023ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಐಪಿಎಲ್ ಪ್ರಶಸ್ತಿಯನ್ನು ಗೆದ್ದುಕೊಂಡಿತು. ಮೊದಲ ಸೀಸನ್ಗೆ ಹೋಲಿಸಿದರೆ, ಐಪಿಎಲ್ನ ವಿಜೇತ ತಂಡಗಳು ಪಡೆಯುವ ಬಹುಮಾನದ ಮೊತ್ತವು ಗಮನಾರ್ಹವಾಗಿ ಹೆಚ್ಚಾಗಿದೆ. ಐಪಿಎಲ್ 2024ರ ಒಟ್ಟು ಬಹುಮಾನದ ಮೊತ್ತ ಬರೋಬ್ಬರಿ 46.5 ಕೋಟಿ ಆಗಿದೆ. ವಿಜೇತರು ಮತ್ತು ರನ್ನರ್ ಅಪ್ ಮಾತ್ರವಲ್ಲದೆ, ಪ್ಲೇ ಆಫ್ಗೆ ಅರ್ಹತೆ ಪಡೆದ ತಂಡಗಳಿಗೂ ಬಹುಮಾನ ನೀಡಲಾಗುವುದು. ಹೌದು, ಅಂದರೆ ಈ ವರ್ಷ ಕೋಲ್ಕತ್ತಾ ನೈಟ್ ರೈಡರ್ಸ್, ಸನ್ರೈರ್ಸ್ ಹೈದರಾಬಾದ್, ರಾಜಸ್ಥಾನ್ ರಾಯಲ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳಿಗೆ ಐಪಿಎಲ್ ಬಹುಮಾನದ ಮೊತ್ತ ದೊರಕಲಿದೆ
ಅದರಂತೆ ಚಾಂಪಿಯನ್ ತಂಡಕ್ಕೆ ಟ್ರೋಫಿ ಜೊತೆಗೆ 20 ಕೋಟಿ ಮೊತ್ತ ಸಿಗಲಿದೆ. ಬಳಿಕ ರನ್ನರ್ಅಫ್ಗೆ 13 ಕೋಟಿ ಹಣ ಸಿಗಲಿದೆ. ಅದೇ ರೀತಿ ಈ ಬಾರಿಯ ಐಪಿಎಲ್ ಟೂರ್ನಿಯ ಲ್ಲಿ ಮೂರನೇ ಸ್ಥಾನದಲ್ಲಿರುವ ತಂಡಕ್ಕೆ 7 ಕೋಟಿ ರೂ ಹಾಗೂ ನಾಲ್ಕನೇ ಶ್ರೇಯಾಂಕದ ಆರ್ಸಿಬಿ ತಂಡಕ್ಕೆ 6.5 ಕೋಟಿ ರೂ ಸಿಗಲಿದೆ.
ಈಗಾಗಲೇ ಕೋಲ್ಕತ್ತಾ ಫೈನಲ್ ಪ್ರವೇಶಿಸಿದರೆ, ಹೈದರಾಬಾದ್ ಮತ್ತು ರಾಜಸ್ಥಾನ್ ತಂಡಗಳು ಫೈನಲ್ಗಾಗಿ ಸೆಣಸಾಡುತ್ತಿದೆ. ಹೀಗಾಗಿ ಈ ಮೂರು ತಂಡಗಳ ಬಹುಮಾನದ ಮೊತ್ತದ ಬಗ್ಗೆ ಯಾವುದೇ ಸ್ಪಷ್ಟತೆ ಇಲ್ಲವಾಗಿದೆ. ಆದರೆ ಆರ್ಸಿಬಿ ತಂಡ ಈಗಾಗಲೇ 4ನೇ ಸ್ಥಾನದಲ್ಲಿದೆ. ಹೀಗಾಗಿ ಆರ್ಸಿಬಿ ತಂಡಕ್ಕೆ ಬರೋಬ್ಬರಿ 6.5 ಕೋಟಿ ಐಪಿಎಲ್ ಬಹುಮಾನದ ಮೊತ್ತ ಸಿಗಲಿದೆ.
ಐಪಿಎಲ್ 2024ರಲ್ಲಿ ವಿಜೇತ ತಂಡಗಳೊಂದಿಗೆ ಹೆಚ್ಚು ರನ್ ಗಳಿಸಿದ ಆಟಗಾರನಿಗೆ ಆರೆಂಜ್ ಕ್ಯಾಪ್ ನೀಡಲಾಗುತ್ತದೆ. ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ಗೆ ಪರ್ಪಲ್ ಕ್ಯಾಪ್ ನೀಡಲಾಗುತ್ತದೆ. ಆರೆಂಜ್ ಮತ್ತು ಪರ್ಪಲ್ ಕ್ಯಾಪ್ ಗೆದ್ದ ಆಟಗಾರರಿಗೆ 15 ಲಕ್ಷ ರೂಪಾಯಿ ಬಹುಮಾನ ಸಿಗಲಿದೆ.