ಯುನೈಟೆಡ್ ಸ್ಟೇಟ್ಸ್ ಆಫ್ ಅಮೇರಿಕಾ ಮತ್ತು ಜಗತ್ತಿನ ಇತರ ಭಾಗಗಳಲ್ಲಿ ಪ್ರತಿ ವರ್ಷ, ಮೇ 24 ಅನ್ನು ವಿಶ್ವ ಸಹೋದರರ ದಿನವಾಗಿ ಆಚರಿಸಲಾಗುತ್ತದೆ. ಅಮ್ಮಂದಿರ ದಿನ, ತಂದೆಯ ದಿನ ಮತ್ತು ಒಡಹುಟ್ಟಿದವರ ದಿನವನ್ನು ಆಚರಿಸುವಂತೆ, ಈ ದಿನವನ್ನು ಆಚರಿಸಲಾಗುತ್ತದೆ. ಇಂದು ಸಹೋದರರ ಮೇಲಿನ ಪ್ರೀತಿ, ವಾತ್ಸಲ್ಯ ಮತ್ತು ಮಮಕಾರವನ್ನು ಪ್ರಚುರಪಡಿಸುತ್ತದೆ.
ಹಾಗೆಂದು ಇವತ್ತಿನ ದಿನ ಮಾತ್ರ ಸಹೋದರ ನೆನಪಾಗುತ್ತಾನೆ ಎಂದು ಅರ್ಥವಲ್ಲ. ಬೆನ್ನ ಹಿಂದೆ ಬೆಂಬಲವಾಗಿ ನಿಂತು, ಎಂದೂ ತಂಗಿ/ಅಕ್ಕನೊಡನೆ ತುಂಟಾಟ, ಕಪಿಚೇಷ್ಟೆ ಮಾಡುವ ಪ್ರತಿಯೊಂದು ಕ್ಷಣವನ್ನು ಇಂದು ನೆನೆದು ಸಹೋದರನಿಗೆ ನೀನಿಲ್ಲದ ಜೀವನ ನಿಜಕ್ಕೂ ಮನರಂಜನೆಯಿಲ್ಲದ ಬದುಕು ಎಂದು ಮುಗುಳು ನಗೆ ಬೀರುವ ಸಮಯವಿದು.
Aadhar Card ಬಳಕೆದಾರರಿಗೆ ಎಚ್ಚರಿಕೆ ನೀಡಿದ UIDAI.! ʻಆಧಾರ್ʼ ದುರ್ಬಳಕೆ ಮಾಡಿದ್ರೆ ಕಾದಿದೆ ಕಠಿಣ ಶಿಕ್ಷೆ
ತಂದೆ- ತಾಯಿಯಲ್ಲಿ ಹೇಳದ ಕೆಲವೊಂದಿಷ್ಟು ವಿಷಯಗಳಿಗೆ ಸಹೋದರನೇ ನಿಜವಾದ ಕೇಳುಗ. ಹಿರಿಯರಲ್ಲಿ ಅಂತರಾಳದಲ್ಲಾಗುವ ಬದಲಾವಣೆಗಳನ್ನು ಹೇಳಲು ಸಾಧ್ಯವಿಲ್ಲ. ಮುಜುಗರ ಇದಕ್ಕೆಲ್ಲಾ ಬೇಲಿ ಹಾಕುತ್ತದೆ. ಆದರೆ ಸಹೋದರನ ಪ್ರಪಂಚದಲ್ಲಿ ಇಂತಹ ವಿಷಯಗಳಿಗೆ ಸದಾ ಬಾಗಿಲು ತೆರೆದಿರುತ್ತದೆ. ಹೀಗಾಗಿ ವಿಶ್ವ ಸಹೋದರರ ದಿನ 2024 ರ ಸಂಭ್ರಮದ ಜೊತೆಗೆ ಸಹೋದರರ ದಿನದ ಇತಿಹಾಸ, ಮಹತ್ವ ಮತ್ತು ಆಚರಣೆಯ ಬಗ್ಗೆ ನಿಮಗೆ ಎಷ್ಟು ಗೊತ್ತು ಎನ್ನುವುದು ಕೂಡ ಮುಖ್ಯ.
ವಿಶ್ವ ಸಹೋದರರ ದಿನದ ಇತಿಹಾಸ 2005 ರಿಂದ, ಪ್ರತಿ ವರ್ಷ ಮೇ 24 ರಂದು ಸಹೋದರರ ದಿನವನ್ನು ಆಚರಿಸಲಾಗುತ್ತದೆ. ಈ ದಿನದಂದು ರಜೆ ಇರುವ ಬಗ್ಗೆ ನಿಖರವಾದ ವಿವರಗಳು ತಿಳಿದಿಲ್ಲವಾದರೂ, ಅಲಬಾಮಾ ಮೂಲದ ಕಲಾವಿದ, ಶಿಲ್ಪಿ ಮತ್ತು ಲೇಖಕರಾಗಿರುವ ಸಿ. ಡೇನಿಯಲ್ ರೋಡ್ಸ್ ಸಹೋದರ ದಿನ ಎನ್ನುವ ಪರಿಕಲ್ಪನೆಯನ್ನು ಜಾರಿಗೆ ತಂದರು. ಪ್ರತಿ ವರ್ಷ ಏಪ್ರಿಲ್ 10 ರಂದು ಆಚರಿಸಲಾಗುವ ವಿಶ್ವ ಒಡಹುಟ್ಟಿದವರ ದಿನವನ್ನು ಮತ್ತು ಸಹೋದರರ ದಿನವನ್ನು ಒಂದೇ ಎಂದು ಅರ್ಥೈಸಿಕೊಳ್ಳಬಾರದು. ಈ ದಿನ ಒಡಹುಟ್ಟಿದವರನ್ನು ನೆನೆಯಲಾಗುತ್ತದೆ. ಆದರೆ ವಿಶ್ವ ಸಹೋದರರ ದಿನದಂದು ಅಣ್ಣ ಅಥವಾ ತಮ್ಮಂದಿರ ಜೊತೆಗೆ ಸಂಭ್ರಮಿಸಲಾಗುತ್ತದೆ.
ವಿಶ್ವ ಸಹೋದರರ ದಿನಾಚರಣೆಯನ್ನು ಹೆಚ್ಚಾಗಿ ಯುಎಸ್ನಲ್ಲಿ ಆಚರಿಸಲಾಗುತ್ತದೆ. ಆದರೆ ಜಗತ್ತಿನಾದ್ಯಂತದ ಅನೇಕ ದೇಶಗಳು ಈ ದಿನವನ್ನು ಆಚರಿಸಲು ಮುಂದಾಗಿದೆ. ಅದರಂತೆ ರಷ್ಯಾ, ಆಸ್ಟ್ರೇಲಿಯಾ, ಫ್ರಾನ್ಸ್ ಮತ್ತು ಜರ್ಮನಿ ಸೇರಿದಂತೆ ಹಲವು ದೇಶಗಳು ಈ ದಿನವನ್ನು ಮೇ 24 ರಂದು ಆಚರಿಸುತ್ತವೆ. ಆದಾಗ್ಯೂ, ಕೆಲವು ಪ್ರದೇಶಗಳಲ್ಲಿ, ವಿಶ್ವ ಸಹೋದರರ ದಿನವನ್ನು ಅನಧಿಕೃತ ರಜಾದಿನವೆಂದು ಆಚರಿಸಲಾಗುತ್ತದೆ.
ವಿಶ್ವ ಸಹೋದರರ ದಿನದ ಮಹತ್ವ ಒಬ್ಬರಿರಲಿ ಅಥವಾ ಇಬ್ಬರು ಸಹೋದರರಿರಲಿ ಅಥವಾ ಸಹೋದರರು ಇಲ್ಲದಿರಲಿ ಎಲ್ಲರಲ್ಲೂ ಸಹೋದರತ್ವ ಕಾಣಬೇಕು ಮತ್ತು ಪ್ರೀತಿಯ ಸಹಬಾಳ್ವೆ ಬಹಳ ಮುಖ್ಯ ಎಂಬುವುದು ಈ ದಿನದ ಮಹತ್ವ. ಪುರುಷರಲ್ಲಿ ಸಹೋದರತ್ವದ ಪ್ರಜ್ಞೆ ಅತ್ಯಂತ ಪ್ರಬಲವಾಗಿರುತ್ತದೆ.
ಇದು ರಕ್ತ ಸಂಬಂಧವಾಗಿರಲಿ ಅಥವಾ ಇಲ್ಲದಿರಲಿ, ಪುರುಷರು ತಮ್ಮ ಬ್ರದರ್ಸ್ ಅಥವಾ ಇತ್ತೀಚೆಗೆ ಹುಟ್ಟಿಕೊಂಡಿರುವ ಟ್ರೇಂಡ್ ಬ್ರೋ ಗೆ ಹೆಚ್ಚು ಮಹತ್ವ ನೀಡುತ್ತಾರೆ. ಈ ವಿಷಯವು ಅಮೇರಿಕನ್ ಸಿಟ್ಕಾಮ್ ಬ್ರದರ್ಸ್, ಡಿಸ್ನಿಯ ದಿ ಸೂಟ್ ಲೈಫ್ ಆಫ್ ಜ್ಯಾಕ್ ಮತ್ತು ಕೋಡಿ ಮತ್ತು ಎಚ್ಬಿಒನ ಬ್ಯಾಂಡ್ ಆಫ್ ಬ್ರದರ್ಸ್ನಂತಹ ಕೆಲವು ಚಲನಚಿತ್ರಗಳು, ಕಾದಂಬರಿಗಳು, ನಾಟಕಗಳು ಮತ್ತು ದೂರದರ್ಶನ ಕಾರ್ಯಕ್ರಮಗಳನ್ನು ಪ್ರೇರೇಪಿಸಿದೆ.
ಸಹೋದರತ್ವದ ಭಾವನೆಯನ್ನು ವಿಶ್ವದಾದ್ಯಂತ ಪಸರಿಸಲು ಮತ್ತು ಸಹೋದರನ ತ್ಯಾಗವನ್ನು ಶ್ಲಾಘಿಸಲು ಈ ದಿನವನ್ನು ಆದರ್ಶವಾಗಿ ಪರಿಗಣಿಸಲಾಗುತ್ತದೆ. ಸಾಮಾನ್ಯವಾಗಿ, ಇತ್ತೀಚೆಗೆ ಕುಟುಂಬದವರೆಲ್ಲಾ ಸೇರಿ ಸಿಹಿ ಹಂಚಿ ಈ ದಿನವನ್ನು ಸಂಭ್ರಮಿಸುತ್ತಾರೆ. ಹಾಗೇಯೇ ಪ್ರೀತಿಯ ಸಹೋದರನಿಗೆ ಇಷ್ಟವಾಗುವ ತಿನಿಸು, ಉಡುಗೊರೆ ನೀಡಿ ಖುಷಿಪಡಿಸಲು ಈ ದಿನ ಪ್ರಯತ್ನಿಸಬಹುದು. ಜತೆಗೆ ಸಾಕಷ್ಟು ಸಮಯವನ್ನು ಸಹೋದರನೊಂದಿಗೆ ಕಳೆಯಲು ಕೂಡ ನೀವು ಇಂದು ಪ್ರಯತ್ನಿಸಬಹುದಾಗಿದೆ.