ಬೆಂಗಳೂರು:- ಸಿಲಿಕಾನ್ ಸಿಟಿ ಜನರು ಬಹಳ ಕಾತುರದಿಂದ ಕಾಯುತ್ತಿದ್ದ ಲಾಲ್ಬಾಗ್ ಮಾವಿನ ಮೇಳ ಇಂದಿನಿಂದ ನಡೆಯಲಿದೆ.
ಇಂದಿನಿಂದ ಜೂನ್ 10 ರವರೆಗೆ ನಡೆಯಲಿದೆ. ತೋಟಗಾರಿಕೆ ಸಹಯೋಗದಲ್ಲಿ ರಾಜ್ಯ ಮಾವು ಅಭಿವೃದ್ಧಿ ಮತ್ತು ಮಾರುಕಟ್ಟೆ ನಿಗಮ ಆಯೋಜನೆ ಮಾಡಲಾಗಿದೆ. ಗ್ರಾಹಕರಿಗೆ ಹಣ್ಷು ಖರೀದಿಗೆ ಅನೂಕೂಲವಾಗುವಾಂತೆ 74 ಮಳಿಗೆ ತೆರೆಯಲಾಗಿದ್ದು, 9 ಮಳಿಗೆ ಹಲಸುಬೆಳೆಗಾರಾರಿಗೆ ,14 ಮಳಿಗೆ ಇತರೆ ಹಣ್ಣು ಉತ್ಪನ್ನಗಳಿಗೆ ಬೆಳ್ಳಗ್ಗೆ 7 ರಿಂದ ಸಂಜೆ 7 ಗಂಟೆಯವರೆಗೆ ನಡೆಯಲಿದೆ. ಇನ್ನು ರಿಯಾಯಿತಿ ದರ ತೋಟಗಾರಿಕೆ ಇಲಾಖೆ ಘೋಷಣೆ ಮಾಡಿಲ್ಲ. ಮಾಗಿದ ಅಥವಾ ಇಥಲೀನ್ ಉಪಚರಿಸಿ ಮಾಗಿಸಿದ ಹಣ್ಣು ಮಾರಾಟಕ್ಕೆ ಅವಕಾಶ ನೀಡಲಾಗಿದೆ.
ಬಾದಾಮಿ, ಮಲ್ಲಿಕಾ, ಅಮ್ರಪಾಲಿ,ದಶೇರಿ, ಬಂಗನಪಲ್ಲಿ, ರಸಪುರಿ,ಇಮಾಮ್ ಪಸಂದ್,ಸಕ್ಕರೆಗುತ್ತಿ, ಕಾಲಪಾಡ್, ಕೇಸರ್, ಮಲಗೋವ, ಸೇಂದೂರ, ತೋತಾಪುರಿ, ನೀಲಂ,ಭೌಗೋಳಿಕ ಸೂಚನೆ ನೀಡಲಾಗಿದೆ.
ಉತ್ತರ ಕನ್ನಡ ಜಿಲ್ಲೆ ಅಂಕೋಲಾ ತಾಲೂಕಿನ ಕರಿಇಶಾದ್ ಮಾವು ಮೇಳದಲ್ಲಿ ಲಭ್ಯವಾಗಲಿದೆ.