ಬೆಂಗಳೂರು:– ಪ್ರಜ್ವಲ್ ಎಲ್ಲಿರಬಹುದೆಂದು ಸಿಡಿ ಶಿವುಗೆ ಬಹಳ ಚೆನ್ನಾಗಿಯೇ ಗೊತ್ತಿದೆ ಎಂದು ಡಿಕೆ ಶಿವಕುಮಾರ್ ವಿರುದ್ಧ ಜೆಡಿಎಸ್ ಕಿಡಿಕಾರಿದೆ.
Bigg Breaking: ಗ್ರಹಲಕ್ಷ್ಮಿ ಯೋಜನೆ ಅಪ್ಡೇಟ್…ಇನ್ನುಮುಂದೆ ಮಹಿಳೆಯರಿಗೆ ಬರಲ್ಲ 2000!… ಯಾಕೆ ಗೊತ್ತಾ!?
ಈ ಕುರಿತಾಗಿ ಟ್ವೀಟ್ ಮಾಡಿರುವ ಜೆಡಿಎಸ್, ಪ್ರಜ್ವಲ್ ಎಲ್ಲಿರಬಹುದು ಎನ್ನುವ ವಿಷಯ ನಿಮ್ಮ CDಶಿವುಗೆ ಬಹಳ ಚೆನ್ನಾಗಿಯೇ ಗೊತ್ತಿದೆ. ಅವರನ್ನೇ ಕೇಳಿದರೆ ಉತ್ತಮವಲ್ಲವೇ? ಸಖ್ಯ ಮತ್ತು ಸೌಖ್ಯದ ಬಗ್ಗೆ ಅವರಿಗಿಂತ ಬಲ್ಲವರು ಉಂಟೇ ಕಪಟ ಕಾಂಗಿಗಳೇ ಎಂದು ಪ್ರಶ್ನಿಸಿದೆ
ಎಸ್ಐಟಿ ಅಧಿಕಾರಿಗಳು CDಶಿವುನ ಹಿಡಿದು ಡ್ರಿಲ್ ಮಾಡಿದರೆ ಸತ್ಯ ತಾನಾಗಿಯೇ ಆಚೆ ಬರುತ್ತದೆ. ಡಿಕೆ ಶಿವಕುಮಾರ್ ತನಿಖಾ ತಂಡಕ್ಕೆ ಗೊತ್ತಿಲ್ಲವೆಂದರೆ ಅದು ಶತಮಾನದ ಜೋಕಷ್ಟೇ ಅಲ್ಲ, CDಶಿವು ಪೂರ್ವಾಶ್ರಮಕ್ಕೆ ಮಾಡಿದ ಘೋರ ಅಪಚಾರ! ಈ ಶತಮಾನ ಕಂಡು ಕೇಳರಿಯದ ಸೋಜಿಗ!!
ಪೆನ್ ಡ್ರೈವ್ ಫ್ಯಾಕ್ಟರಿ ಒರಿಜಿನಲ್ ಓನರ್, CD ಸಂಚುಕೋರ CDಶಿವು ಕಣ್ಸನ್ನೆಯಂತೆ ಅವರ ಚೇಲಾಗಳು ನಡೆಸಿದ ಪೆನ್ ಡ್ರೈವ್ ಸಮಾರಾಧನೆ ಯಾರಿಗೆ ಗೊತ್ತಿಲ್ಲ ಹೇಳಿ? ಎಫ್ಐಆರ್ ಆದ ಮೇಲೆ ಕಾಲ್ಕಿತ್ತ ಪೆನ್ ಡ್ರೈವ್ ಪಿಶಾಚಿಗಳು; ಕೋರ್ಟ್ ಜಾಮೀನು ನಿರಾಕರಿಸಿದ ಮೇಲೆಯೂ ಎಸ್ಐಟಿಗೆ ಚಳ್ಳೆಹಣ್ಣು ತಿನ್ನಿಸುತ್ತಾ CD ಶಿವು ಆಸ್ಥಾನದಲ್ಲಿ ಓಲಾಡುತ್ತಿರುವುದು ಯಾರಿಗೆ ಗೊತ್ತಿಲ್ಲ, ಹೇಳಿ?
ಅಸಲಿ ಎಸ್ಐಟಿ, ಸಿಡಿ ಶಿವು ನೇತೃತ್ವದ ಎಸ್ಐಟಿ ತಂಟೆಗೇ ಹೋಗುತ್ತಿಲ್ಲ. ವಿಧಾನಸೌಧದ ಗಾಡ್ ಫಾದರ್ಗಳ ಕಚೇರಿಗಳಲ್ಲಿಯೇ ಪೆನ್ ಡ್ರೈವ್ ಪಿಶಾಚಿಗಳು ಕಳ್ಳರಂತೆ ಆವಿತಿದ್ದರೂ ಕೂಗಳತೆ ದೂರಲ್ಲಿರುವ ಎಸ್ಐಟಿಗೆ ಸೊಳ್ಳೆ ಕಚ್ಚಿದ ಹಾಗೆಯೂ ಆಗುತ್ತಿಲ್ಲ. ಅವರು ಎಲ್ಲಿದ್ದಾರೆ? ಇವರು ಎಲ್ಲಿದ್ದಾರೆ? ಎನ್ನುವುದನ್ನು ನಿಮ್ಮ ಸಿಡಿ ಶಿವುಗೇ ಕೇಳ್ರಪ್ಪಾ! ಎಂದು ಕಿಡಿಕಾರಿದ್ದಾರೆ.