ಗದಗ: ನರೇಗಾ ಯೋಜನೆ ಅಡಿ ಬದು ನಿರ್ಮಾಣ ಕಾರ್ಯಕ್ಕೆ ತೆರಳಿದ್ದ ಮಹಿಳೆಯರು ಕಬಡ್ಡಿ ಆಟ ಆಡಿ ಗಮನ ಸೆಳೆದಿದ್ದಾರೆ. ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಹಿರೇವಡ್ಡಟ್ಟಿ ಗ್ರಾಮ ಪಂಚಾಯತ ವತಿಯಿಂದ ಉದ್ಯೋಗಖಾತ್ರಿ ಯೋಜನೆಯಡಿ ಕೆಲಸಕ್ಕೆ,
ತೆರಳಿದ ಸಂದರ್ಭದ ಬಿಡುವಿನ ಸಮಯದಲ್ಲಿ ಕಬ್ಬಡ್ಡಿ ಆಟ ಏರ್ಪಡಿಸಲಾಗಿತ್ತು. ಕೂಲಿ ಕೆಲಸ ಮಾಡಿ ಸುಸ್ತಾಗಿದ್ದ ಕಾರ್ಮಿಕರ ಮನರಂಜನೆಗಾಗಿ ಗ್ರಾಮ ಪಂಚಾಯತ ಸಿಬ್ಬಂದಿ ಕಬ್ಬಡ್ಡಿ ಆಟ ಆಯೋಜನೆ ಮಾಡಿದ್ರು.
ಮಹಿಳೆಯರಿಗೆ ನಾವೂ ಏನು ಕಮ್ಮಿ ಇಲ್ಲ ಎನ್ನುವಂತೆ ಅಜ್ಜಿ ಕೂಡಾ ಕಬ್ಬಡ್ಡಿ ಆಟ ಆಡಿ ಎಲ್ಲರ ಗಮನ ಸೆಳೆದ್ರು. ಹೆಚ್ಚಿನ ಜನ ಉದ್ಯೋಗಖಾತ್ರಿ ಯೋಜನೆಯಡಿ ಕೆಲಸಕ್ಕೆ ಬರಬೇಕು ಎನ್ನುವ ಉದ್ದೇಶದಿಂದ ಕಬ್ಬಡ್ಡಿ ಆಟ ಆಡಿಸಲಾಗಿದೆ.