2024ರ ಇಂಡಿಯನ್ ಪ್ರೀಮಿಯರ್ ಲೀಗ್ ಹಂತದ ಪಂದ್ಯಗಳು ಮುಕ್ತಾಯಗೊಂಡಿವೆ. ಈಗಾಗಲೇ ಕೆಕೆಆರ್, ಸನ್ರೈಸರ್ಸ್ ಹೈದರಾಬಾದ್, ರಾಜಸ್ಥಾನ್ ರಾಯಲ್ಸ್, ರಾಯಲ್ ಚಾಲೆಂಜರ್ಸ್ ಬೆಂಗಳೂರು ಪ್ಲೇ ಆಫ್ಗೆ ಎಂಟ್ರಿ ನೀಡಿವೆ.
ಇನ್ನು, ಕ್ವಾಲಿಫೈಯರ್-1ರಲ್ಲಿ ಟೇಬಲ್ ಟಾಪರ್ ಕೋಲ್ಕತ್ತಾ ನೈಟ್ ರೈಡರ್ಸ್ ಸನ್ ರೈಸರ್ಸ್ ಹೈದರಾಬಾದ್ ತಂಡವನ್ನು ಎದುರಿಸಲಿದೆ. ನಂತರ ಎಲಿಮಿನೇಟರ್ ಪಂದ್ಯದಲ್ಲಿ ರಾಜಸ್ಥಾನ್ ಮತ್ತು ಆರ್ಸಿಬಿ ಮುಖಾಮುಖಿ ಆಗಲಿವೆ.
ಎಲಿಮಿನೇಟರ್ ಪಂದ್ಯದಲ್ಲಿ ಆರ್ಸಿಬಿಯನ್ನು ಎದುರಿಸಲು ಮುಂದಾಗಿರೋ ರಾಜಸ್ಥಾನ್ ರಾಯಲ್ಸ್ಗೆ ಬಿಗ್ ಶಾಕ್ ಇದೆ. ಈ ಪಂದ್ಯದಿಂದ ಸ್ಟಾರ್ ಪ್ಲೇಯರ್ ಜೋಸ್ ಬಟ್ಲರ್ ಅಲಭ್ಯರಾಗಿದ್ದು, ಇವರ ಅನುಪಸ್ಥಿತಿ ಎದ್ದು ಕಾಡಲಿದೆ. ಕಾರಣ ಕಳೆದ ಪಂದ್ಯದಲ್ಲೂ ಆರ್ಸಿಬಿ ವಿರುದ್ಧ ರಾಜಸ್ಥಾನ್ ಗೆಲ್ಲಲು ಜೋಸ್ ಬಟ್ಲರ್ ಕಾರಣ.
ಏಪ್ರಿಲ್ 6ನೇ ತಾರೀಕು ಜೈಪುರ ಇಂಟರ್ ನ್ಯಾಷನಲ್ ಸ್ಟೇಡಿಯಮ್ನಲ್ಲಿ ನಡೆದಿದ್ದ ಪಂದ್ಯದಲ್ಲಿ ಆರ್ಸಿಬಿ ವಿರುದ್ಧ ರಾಜಸ್ಥಾನ್ ಗೆದ್ದು ಬೀಗಿತ್ತು. ಈ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ನಿಗದಿತ 20 ಓವರ್ಗಳಲ್ಲಿ 3 ವಿಕೆಟ್ ನಷ್ಟಕ್ಕೆ 183 ರನ್ ಕಲೆಹಾಕಿತು. ಕೊಹ್ಲಿ ಅಜೇಯ 113 ರನ್ ಬಾರಿಸಿದರು. ಈ ಗುರಿ ಬೆನ್ನಟ್ಟಿದ ರಾಜಸ್ಥಾನ್ ರಾಯಲ್ಸ್ ತಂಡ ಮೊದಲ ಓವರ್ನಲ್ಲೇ ಯಶಸ್ವಿ ಜೈಸ್ವಾಲ್ ವಿಕೆಟ್ ಕಳೆದುಕೊಂಡಿತು. ಆರಂಭದಲ್ಲೇ ರಾಜಸ್ಥಾನ್ ವಿಕೆಟ್ ಕಳೆದುಕೊಂಡ ಕಾರಣ ಪಂದ್ಯ ಆರ್ಸಿಬಿ ಪರ ವಾಲುತ್ತೆ ಎಂದು ಎಲ್ಲರೂ ನಿರೀಕ್ಷಿಸಿದ್ದರು
ಬಳಿಕ ಫಾರ್ಮ್ಗೆ ಜೋಸ್ ಬಟ್ಲರ್ ಆರ್ಸಿಬಿ ವೇಗಿಗಳ ಬೆವರಿಳಿಸಿದರು. ಆರ್ಸಿಬಿ ವಿರುದ್ಧ ಸಿಡಿಲಬ್ಬರದ ಬ್ಯಾಟಿಂಗ್ ಮಾಡಿದರು. ಆರಂಭಿಕರಾಗಿ ಕಣಕ್ಕಿಳಿದು ಕೊನೆಯವರೆಗೂ ಅಜೇಯರಾಗಿ ಉಳಿದ ಬಟ್ಲರ್ 20ನೇ ಓವರ್ನ ಮೊದಲ ಎಸೆತದಲ್ಲಿ ಸಿಕ್ಸರ್ ಬಾರಿಸುವ ಮೂಲಕ ಶತಕ ಕೂಡ ಪೂರ್ಣಗೊಳಿಸಿದರು