IPL ಸೀಸನ್ 17 ರಲ್ಲಿ ಆರಂಭಿಕ ಪಂದ್ಯದಲ್ಲಿ ಸತತ ಸೋಲು ಕಂಡಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ನಂತರದ ದಿನದಲ್ಲಿ ಸತತ ಏಳು ಗೆಲುವಿನೊಂದಿಗೆ ನಿರೀಕ್ಷೆ ಇಲ್ಲದೆ ಪ್ಲೇ ಆಫ್ ಪ್ರವೇಶಿಸಿದೆ.
Shivakumar: ಫೋನ್ ಕದ್ದಾಲಿಕೆ ಮಾಡುವ ಮುಟ್ಟಾಳ್ ಸರ್ಕಾರ ನಮ್ಮದಲ್ಲ- ಡಿಕೆಶಿ!
ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸಿಎಸ್ಕೆ ವಿರುದ್ಧ 27 ರನ್ಗಳ ಭರ್ಜರಿ ಗೆಲುವು ಸಾಧಿಸಿದ ಆರ್ಸಿಬಿ ಹೊಸ ಇತಿಹಾಸ ಬರೆಯಿತು. ಮೊದಲ 8 ಪಂದ್ಯಗಳಲ್ಲಿ ಕೇವಲ ಒಂದು ಪಂದ್ಯ ಗೆದ್ದಿದ್ದ ಆರ್ಸಿಬಿ ಬಳಿಕ ಸತತ ಆರು ಪಂದ್ಯಗಳನ್ನು ಗೆದ್ದು 14 ಅಂಕಗಳೊಂದಿಗೆ ಪ್ಲೇ ಆಫ್ಗೆ ಅರ್ಹತೆ ಪಡೆದುಕೊಂಡಿದೆ
ಆರ್ಸಿಬಿ ಈ ರೀತಿ ಮಾಡಿರುವುದು ಇದೇ ಮೊದಲನೇಲ್ಲ. ಆರ್ಸಿಬಿ ಇದುವರೆಗೆ ಮೂರು ಬಾರಿ ಫೈನಲ್ ಪ್ರವೇಶಿಸಿದೆ ಅಚ್ಚರಿಯ ಸಂಗತಿ ಎಂದರೆ ಆಗಲೂ ಕೂಡ ಸತತ ಐದು ಪಂದ್ಯಗಳನ್ನು ಗೆದ್ದಿತ್ತು. 2009ರಲ್ಲಿ ಆರ್ಸಿಬಿ ಟೂರ್ನಿಯಿಂದಲೇ ಹೊರಗುಳಿಯುವ ಹಂತದಲ್ಲಿತ್ತು ಆದರೆ ಅಲ್ಲಿಂದ ಸತತವಾಗಿ ಐದು ಪಂದ್ಯಗಳನ್ನು ಗೆದ್ದು ಫೈನಲ್ ತಲುಪಿತ್ತು. 2011ರ ಆವೃತ್ತಿಯಲ್ಲಿ ಕೂಡ ಮೊದಲ ನಾಲ್ಕು ಪಂದ್ಯಗಳನ್ನು ಒಂದು ಗೆದ್ದಿತ್ತು, ಆದರೆ ಬಳಿಕ ಸತತವಾಗಿ 7 ಪಂದ್ಯಗಳನ್ನು ಗೆಲ್ಲುವ ಮೂಲಕ ಅಂಕಪಟ್ಟಿಯಲ್ಲಿ ಮೊದಲ ಸ್ಥಾನದೊಂದಿಗೆ ಪ್ಲೇಆಫ್ ಪ್ರವೇಶ ಪಡೆದಿದ್ದಲ್ಲದೆ ಫೈನಲ್ ಕೂಡ ಪ್ರವೇಶಿಸಿತ್ತು. 2016ರ ಆವೃತ್ತಿಯಲ್ಲಿ ಕೂಡ ಮೊದಲ 6 ಪಂದ್ಯಗಳಲ್ಲಿ ಕೇವಲ 2 ಪಂದ್ಯ ಗೆದ್ದಿದ್ದ ಆರ್ಸಿಬಿ ಕೊನೆಯ 4 ಲೀಗ್ ಹಂತದ ಪಂದ್ಯಗಳನ್ನು ಸತತವಾಗಿ ಗೆದ್ದಿತ್ತು, ಬಳಿಕ ಪ್ಲೇ ಆಫ್ನಲ್ಲಿ ಕೂಡ ಸತತ ಎರಡು ಪಂದ್ಯಗಳನ್ನು ಗೆದ್ದು ಫೈನಲ್ಗೆ ಅರ್ಹತೆ ಪಡೆದುಕೊಂಡಿತ್ತು.
ಮೂರು ಬಾರಿ ಫೈನಲ್ ಪ್ರವೇಶಿಸಿದರೂ ಒಮ್ಮೆಯೂ ಕಪ್ ಗೆಲ್ಲದೇ ಇರುವುದು ಅಭಿಮಾನಿಗಳಿಗೆ ಭಾರಿ ನಿರಾಸೆ ಮೂಡಿಸಿದೆ. ಆದರೂ ಅಭಿಮಾನಿಗಳು ಆರ್ಸಿಬಿ ಪರವಾಗಿ ನಿಂತಿದ್ದಾರೆ. ಈ ಬಾರಿ ಬೂದಿಯಿಂದ ಎದ್ದು ಬಂದಿರುವ ಆರ್ಸಿಬಿ ಕಪ್ ಗೆಲ್ಲುವ ಭರವಸೆ ಕೊಟ್ಟಿದೆ. ಸತತ ಆರು ಪಂದ್ಯಗಳನ್ನು ಗೆದ್ದಿರುವ ಆರ್ಸಿಬಿ ತಂಡಕ್ಕೆ ಐತಿಹಾಸಿಕ ಸಾಧನೆ ಮಾಡಲು ಇನ್ನು ಮೂರು ಪಂದ್ಯ ಗೆಲ್ಲಬೇಕಿದೆ. ಗೆಲ್ಲಲಿ ಎನ್ನುವುದು ಕೋಟ್ಯಂತರ ಅಭಿಮಾನಿಗಳ ಹಾರೈಕೆಯೂ ಆಗಿದೆ. ಮೇ 22ರಂದು ಅಹಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಎಲಿಮಿನೇಟರ್ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ತಂಡವನ್ನು ಎದುರಿಸಲಿದ್ದು, ಆ ಪಂದ್ಯವನ್ನು ಗೆದ್ದರೆ, ಚೆನ್ನೈನಲ್ಲಿ ಕ್ವಾಲಿಫೈಯರ್ 2 ಪಂದ್ಯದಲ್ಲಿ ಆಡಲಿದೆ.