ಬೆಂಗಳೂರು:- ಫೋನ್ ಕದ್ದಾಲಿಕೆ ಮಾಡುವ ಮುಟ್ಟಾಳ್ ಸರ್ಕಾರ ನಮ್ಮದಲ್ಲ ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೇಳಿದ್ದಾರೆ.
ಮೊಬೈಲ್ನಲ್ಲಿ ಅಶ್ಲೀಲ ಚಿತ್ರ ನೋಡಿ ಅಕ್ಕನ ಮೇಲೆ ತಮ್ಮ ಅತ್ಯಾಚಾರ.. ಗರ್ಭಿಣಿಯಾದ ಬಾಲಕಿ…!
ರೇವಣ್ಣ-ಕುಮಾರಸ್ವಾಮಿ ಫೋನ್ ಕದ್ದಾಲಿಕೆ ಸರ್ಕಾರ ಮಾಡುತ್ತಿದೆ ಎಂಬ ಆರೋಪದ ಬಗ್ಗೆ ನಗರದಲ್ಲಿ ಡಿಸಿಎಂ ಡಿ.ಕೆ. ಶಿವಕುಮಾರ್ ಪ್ರತಿಕ್ರಿಯಿಸಿದ್ದಾರೆ.
ಇನ್ನು ಸಿಡಿ ಶಿವು ಎಂಬ ಎಚ್ಡಿಕೆ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿ, ನನಗೂ ಅದಕ್ಕೂ ಯಾವುದೇ ತರಹದ ಸಂಬಂಧವಿಲ್ಲ. ಅದಕ್ಕೆ ಉತ್ತರ ಕೊಡುವ ಸಂದರ್ಭ ಇಲ್ಲ. ನನ್ನ ಹೆಸರು ಹೇಳಲಿಲ್ಲ ಅಂದ್ರೆ ಎಂದರೆ ಅವರಿಗೆ ನಿದ್ದೆ ಬರುವುದಿಲ್ಲ. ಮಾಧ್ಯಮಗಳು ಎಥಿಕ್ಸ್ ಬಿಟ್ಟು ಅನೇಕ ವಿಚಾರಗಳು ಚರ್ಚೆ ಮಾಡುತ್ತೀದ್ದೀರಿ, ಉಪ್ಪು ತಿಂದವರು ನೀರು ಕುಡಿಯಬೇಕು ಎಂದು ಅವರು ಹೇಳಿದ್ದಾರೆ. ಕಾನೂನು ಇದೆ, ಕಾನೂನು ಪ್ರಕಾರ ನಡೆಯುತ್ತದೆ. ಅವರು ಏನು ಬೇಕಾದರೂ ಹೇಳಲಿ ಎಂದು ಕಿಡಿಕಾರಿದ್ದಾರೆ
ದೇವರಾಜೇಗೌಡ- ಶಿವರಾಮೇಗೌಡ ಆಡಿಯೊ ಲೀಕ್ ವಿಚಾರಕ್ಕೆ ಸ್ಪಂದಿಸಿ, ನಮಗೆ ಸಂಬಂಧವಿಲ್ಲ, ನೀವು ಉಂಟು ಅವರುಂಟು. ನೀವು ಮಾತನಾಡಬಹುದು, ನಾನು ಯಾರ ಬಳಿಯೂ ಮಾತನಾಡಿಲ್ಲ. ನಾನು ಯಾರಿಗೂ ಜಿಪಿಎ ಕೊಟ್ಟಿಲ್ಲ. ನಾನು ರಾಜಕಾರಣಿ, ನೂರಾರು ಜನ ಬಿಜೆಪಿ, ದಳ, ಸಾರ್ವಜನಿಕರು, ಅಧಿಕಾರಿಗಳು ಭೇಟಿ ಮಾಡಲು ಬರುತ್ತಾರೆ. ಏನೇನು ಮಾಹಿತಿ ಕೊಡಬೇಕು ಎಂದು ಬರುತ್ತಾರೆ. ಅವರು ಬಿಜೆಪಿಯವರು (ದೇವರಾಜೇಗೌಡ) ಭೇಟಿ ಮಾಡಲು ಸಮಯ ಕೇಳಿದ್ದರು. ನಾನು ಸಮಯ ಕೊಡಲಿಲ್ಲ, ಬಂದರೂ ಒಂದು ನಿಮಿಷ ಯಾರದೋ ಹತ್ತಿರ ಮಾತನಾಡಿದ್ರು, ನಾನು ಒಂದು ನಿಮಿಷವೂ ಮಾತನಾಡಿಲ್ಲ. ನನಗೂ ರಾಜಕೀಯ, ವ್ಯವಹಾರಿಕ ಪ್ರಜ್ಞೆ ಇದೆ. ಅದನ್ನು ಇನ್ನೊಂದು ಸಾರಿ ಆ ಸುದ್ದಿನ ನನ್ನ ಬಳಿ ಕೇಳಬೇಡಿ ಎಂದು ಹೇಳಿದರು