ಬೆಂಗಳೂರು:- ಶಿವರಾಮೇಗೌಡ ಮನೆ ಮೇಲೆ ಮೊಟ್ಟೆ ಎಸೆಯಲಾಗಿದ್ದು, ಪೊಲೀಸರಿಂದ ಬಿಗಿಭದ್ರತೆ ಒದಗಿಸಲಾಗಿದೆ.
ಪೆನ್ ಡ್ರೈವ್ ವಿಚಾರ ಮಾತನಾಡುವಾಗ ಮಾಜಿ ಸಂಸದರು ಜೆಡಿಎಸ್ ವರಿಷ್ಠರ ಬಗ್ಗೆ ಅವಹೇಳನಕಾರಿ ಮಾತನಾಡಿದ್ದರು. ಈ ಹಿನ್ನೆಲೆಯಲ್ಲಿ ಮೊಟ್ಟೆ ದಾಳಿಗೆ ಯತ್ನಿಸಲಾಗಿದೆ ಎಂದು ತಿಳಿದುಬಂದಿದೆ.
ತಡರಾತ್ರಿ ಕಾರಿನಲ್ಲಿ ಬಂದ ಐದಾರು ಮಂದಿಯಿಂದ ಈ ಯತ್ನ ನಡೆದಿದೆ. ಪೊಲೀಸರು ಕಂಡು ಮನೆ ಮುಂದೆ ಮೊಟ್ಟೆ ಎಸೆದು ಪರಾರಿಯಾಗಿದ್ದಾರೆ. ಈ ನಡುವೆ ಪೊಲೀಸರ ಕಣ್ತಪ್ಪಿಸಿ ಅದಾಗಲೇ ಐದಾರು ಮೊಟ್ಟೆ ಎಸೆದಿದ್ದಾರೆ. ಸದ್ಯ ಮೊಟ್ಟೆ ಎಸೆಯಲು ಯತ್ನಿಸಿ ಪರಾರಿಯಾದವರಿಗಾಗಿ ಚನ್ನಮ್ಮನ ಕೆರೆ ಅಚ್ಚುಕಟ್ಟು ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ. ಸಿಸಿಟಿವಿ ದೃಶ್ಯ ಆಧರಿಸಿ ಮೊಟ್ಟೆ ಎಸೆಯಲು ಯತ್ನಿಸಿದವರಿಗೆ ಬಲೆ ಬೀಸಲಾಗಿದೆ.