ಇಂದು ಬೆಂಗಳೂರಿನಲ್ಲಿ ಆರ್ಸಿಬಿ-ಸಿಎಸ್ಕೆ ಹೈವೋಲ್ಟೋಜ್ ಪಂದ್ಯ ನಡೆಯಲಿದೆ.
IPL 2024: ಕಿಂಗ್ ಕೊಹ್ಲಿಗೆ 18ರ ನಂಟು.. CSK ಗೆ ನಡುಕ ಹುಟ್ಟಿಸಿದ್ದು ಇದೇ ಕಾರಣ!
ಆರ್ಸಿಬಿ ಪರ ಆರೆಂಜ್ ಕ್ಯಾಪ್ ಹೊಂದಿರುವ ವಿರಾಟ್ ಕೊಹ್ಲಿ ಉತ್ತಮ ಫಾರ್ಮ್ನಲ್ಲಿದ್ದಾರೆ ಮತ್ತು ಕಳೆದ ಐದು ಪಂದ್ಯಗಳಲ್ಲಿ ಮೂರರಲ್ಲಿ ಅರ್ಧಶತಕ ಗಳಿಸಿದ್ದಾರೆ. ಮಧ್ಯಮ ಕ್ರಮಾಂಕದಲ್ಲಿ ರಜತ್ ಪಾಟಿದಾರ್ ಮತ್ತು ಕ್ಯಾಮೆರಾನ್ ಗ್ರೀನ್ ಉತ್ತಮವಾಗಿ ಆಡುತ್ತಿದ್ದಾರೆ. ಇಂದಿನ ಪ್ರಮುಖ ಪಂದ್ಯದಲ್ಲಿ ನಾಯಕ ಫಾಫ್ ಡುಪ್ಲೆಸಿಸ್ ಕಡೆಯಿಂದ ಒಂದೊಳ್ಳೆ ಇನ್ನಿಂಗ್ಸ್ ಬರಬೇಕಿದೆ. ಈ ಋತುವಿನಲ್ಲಿ ಚೆನ್ನೈ ಪರ ಅತಿ ಹೆಚ್ಚು ರನ್ ಗಳಿಸಿದವರು ನಾಯಕ ರುತುರಾಜ್ ಗಾಯಕ್ವಾಡ್. ಓಪನರ್ ರಚಿನ್ ರವೀಂದ್ರ ಕೂಡ ಉಪಯುಕ್ತ ಇನ್ನಿಂಗ್ಸ್ ಆಡಿದ್ದಾರೆ. ಕಳೆದ ನಾಲ್ಕು ಇನ್ನಿಂಗ್ಸ್ಗಳಲ್ಲಿ ವಿಫಲವಾಗಿರುವ ಶಿವಂ ದುಬೆ ಕೂಡ ಉತ್ತಮ ಪ್ರದರ್ಶನ ನೀಡುವ ನಿರೀಕ್ಷೆಯಿದೆ.
ಈ ಋತುವಿನಲ್ಲಿ ಆರ್ಸಿಬಿ ಬೌಲರ್ಗಳ ಪೈಕಿ ಯಶ್ ದಯಾಲ್ ಅತಿ ಹೆಚ್ಚು ವಿಕೆಟ್ ಪಡೆದಿದ್ದಾರೆ. ಲಾಕಿ ಫರ್ಗುಸನ್, ಮೊಹಮ್ಮದ್ ಸಿರಾಜ್ ಮತ್ತು ಸ್ವಪ್ನಿಲ್ ಸಿಂಗ್ ಅವರಿಗೆ ಕಠಿಣ ಸವಾಲು ಎದುರಾಗಿದೆ. ಸಿಎಸ್ಕೆ ಬೌಲಿಂಗ್ನಲ್ಲಿ ವೇಗಿಗಳಾದ ಸಿಮರ್ಜೀತ್ ಸಿಂಗ್ ಮತ್ತು ತುಷಾರ್ ದೇಶಪಾಂಡೆ ಉತ್ತಮ ಪ್ರದರ್ಶನ ನೀಡಿದ್ದಾರೆ. ರವೀಂದ್ರ ಜಡೇಜಾ ಸ್ಪಿನ್ ಜಾದು ಎದುರಾಳಿಗೆ ಕಂಟಕವಾಗಿ ಪರಿಣಮಿಸಿದೆ.
ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಲೀಗ್ನ ಮೊದಲ 4 ಪಂದ್ಯಗಳಲ್ಲಿ ರನ್ ಮಳೆ ಸುರಿದಿವೆ. ಇಲ್ಲಿ ಹೈದರಾಬಾದ್ 287 ರನ್ ಗಳಿಸಿತ್ತು. ಆದರೆ ಕಳೆದ ಎರಡು ಪಂದ್ಯಗಳಿಂದ ಬೌಲರ್ಗಳಿಗೆ ಪಿಚ್ ಸಹಾಯಕವಾಗಿದೆ. ಇದರಿಂದ ಆರ್ಸಿಬಿಗೂ ಲಾಭವಾಗಿದೆ. ಈಗ ಚೆನ್ನೈ ವಿರುದ್ಧದ ಪಂದ್ಯದಲ್ಲೂ ಬೌಲರ್ಗಳಿಗೆ ಪಿಚ್ ಸಹಕಾರಿಯಾಗಲಿದೆ. ಚೆನ್ನೈ ತಂಡದ ಬ್ಯಾಟಿಂಗ್ ಕ್ರಮಾಂಕ ಬಲಿಷ್ಠವಾಗಿದ್ದು, ವಿಕೆಟ್ ಪಡೆದರೆ ಬೆಂಗಳೂರು ತಂಡಕ್ಕೆ ಲಾಭವಾಗಬಹುದು.
ಆದರೆ, ಭಾರತೀಯ ಹವಾಮಾನ ಇಲಾಖೆಯ ಪ್ರಕಾರ ಬೆಂಗಳೂರು ನಗರದಲ್ಲಿ ಕಳೆದ ಎರಡು ವಾರಗಳಿಂದ ನಿರಂತರವಾಗಿ ಮಳೆಯಾಗುತ್ತಿದೆ. IMD ಹೊರತುಪಡಿಸಿ, Accuweather.com ಪಂದ್ಯದ ಸಮಯದಲ್ಲಿ ಭಾರೀ ಮಳೆ ಮತ್ತು ಚಂಡಮಾರುತದ ಸಾಧ್ಯತೆಯನ್ನು ವ್ಯಕ್ತಪಡಿಸಿದೆ. ರಾತ್ರಿ 7.30ಕ್ಕೆ ಪಂದ್ಯ ಆರಂಭವಾಗುವ ವೇಳೆ ತಾಪಮಾನ 23 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಆಕಾಶದಲ್ಲಿ ಶೇ. 100ರಷ್ಟು ಮೋಡ ಕವಿದ ವಾತಾವರಣವಿರುತ್ತದೆ.
ಆದರೆ, ಚಿನ್ನಸ್ವಾಮಿಯ ಒಳಚರಂಡಿ ವ್ಯವಸ್ಥೆ ತುಂಬಾ ಚೆನ್ನಾಗಿದೆ ಎಂಬುದನ್ನೂ ಇಲ್ಲಿ ಗಮನಿಸಬೇಕು, ಇದರಿಂದಾಗಿ ಮಳೆ ನಿಂತ 30 ನಿಮಿಷಗಳಲ್ಲಿ ಆಟ ಪ್ರಾರಂಭವಾಗಬಹುದು. ಒಂದು ವೇಳೆ ಪಂದ್ಯ ವಾಶ್ಔಟ್ ಆದಲ್ಲಿ ಬೆಂಗಳೂರು ತಂಡದ ಪ್ಲೇಆಫ್ ಹಂತಕ್ಕೆ ಪ್ರವೇಶಿಸುವ ಅವಕಾಶವೂ ಕಳೆದುಕೊಳ್ಳಲಿದೆ. ಆರ್ಸಿಬಿ ಮೊದಲು ಬ್ಯಾಟಿಂಗ್ ಮಾಡಿ 200 ರನ್ ಗಳಿಸಿದರೆ, ಕನಿಷ್ಠ 18 ರನ್ಗಳಿಂದ ಗೆಲ್ಲಬೇಕು, ಆದರೆ ಗುರಿಯನ್ನು ಬೆನ್ನಟ್ಟುವಾಗ, ಅವರು ಇನ್ನೂ 11 ಎಸೆತಗಳು ಬಾಕಿ ಇರುವಂತೆಯೇ ಪಂದ್ಯವನ್ನು ಗೆಲ್ಲಬೇಕಾಗುತ್ತದೆ. ಈ ವಾರ ಎರಡು ಪಂದ್ಯಗಳು ಈಗಾಗಲೇ ಮಳೆಯಿಂದಾಗಿ ರದ್ದಾಗಿವೆ.