ಮುಂಬೈ ಇಂಡಿಯನ್ಸ್ ವಿರುದ್ಧ ಲಕ್ನೋ ತಂಡ 18 ರನ್ ಗಳ ಜಯ ಸಾಧಿಸಿದೆ.
ನಾನು ಜೈಲಿಂದ ಹೊರ ಬಂದ ಬಳಿಕ ಸರ್ಕಾರ ಪತನ – ಸ್ಪೋಟಕ ಹೇಳಿಕೆ ನೀಡಿದ ದೇವರಾಜೇಗೌಡ!
ನಿಕೋಲಸ್ ಪೂರಣ್ ಅವರ ಬ್ಯಾಟಿಂಗ್ ಅಬ್ಬರ ಹಾಗೂ ನಾಯಕ ಕೆ.ಎಲ್. ರಾಹುಲ್ ಅವರ ಜವಾಬ್ದಾರಿಯುತ ಆಟದ ನೆರವಿನಿಂದ ಮುಂಬೈ ವಿರುದ್ಧದ ಅಂತಿಮ ಲೀಗ್ ಪಂದ್ಯದಲ್ಲಿ ಲಕ್ನೋ 6 ವಿಕೆಟಿಗೆ 214 ರನ್ ಪೇರಿಸಿತು. ಗುರಿ ಬೆನ್ನಟ್ಟಿದ ಮುಂಬೈ ರೋಹಿತ್ ಶರ್ಮ ಮತ್ತು ನಮನ್ ಧೀರ್ ಹೋರಾಡಿದರೂ 6 ವಿಕೆಟ್ ನಷ್ಟಕ್ಕೆ 196 ರನ್ ಗಳಿಸಿ 18 ರನ್ ಗಳ ಸೋಲು ಅನುಭವಿಸಿತು
ಪಂದ್ಯದಲ್ಲಿ ರೋಹಿತ್ ಶರ್ಮ38 ಎಸೆತಗಳಲ್ಲಿ 68 ರನ್ ಗಳಿಸಿ ಜವಾಬ್ದಾರಿಯುತ ಆಟವಾಡಿ ಔಟಾದರು. ರವಿ ಬಿಷ್ಣೋಯ್ ಎಸೆದ ಚೆಂಡನ್ನು ಮೊಹ್ಸಿನ್ ಖಾನ್ ಕೈಗೆ ನೀಡಿ ರೋಹಿತ್ ಗೆ ನಿರ್ಗಮಿಸಿದರು. ಇದು ಮುಂಬೈ ಇಂಡಿಯನ್ಸ್ ಪರ ರೋಹಿತ್ ಆಡಿರುವ ಕೊನೆಯ ಪಂದ್ಯ ಎಂದು ಹೇಳಲಾಗುತ್ತಿದೆ. ರೋಹಿತ್ ಔಟಾಗಿ ಪೆವಿಲಿಯನ್ ಕಡೆ ಹೆಜ್ಜೆ ಹಾಕುತ್ತಿದ್ದಂತೆ ಎಲ್ಲರೂ ಎದ್ದು ನಿಂತು ಚಪ್ಪಾಳೆ ತಟ್ಟಿ ಗೌರವ ತೋರಿದರು.ವಾಂಖೆಡೆಯಲ್ಲಿ ಮುಂಬೈ ತಂಡದ ಅಭಿಮಾನಿಗಳು ಪುಳಕಿತರಾದರು.
ನಮನ್ ಧೀರ್ ಕೊನೆಯಲ್ಲಿ ಹೋರಾಡಿದರು.28 ಎಸೆತಗಳಲ್ಲಿ 62 ರನ್ ಗಳಿಸಿದರು. ಬ್ರೆವಿಸ್ 23 ರನ್ ಗಳಿಸಿದ್ದು ಬಿಟ್ಟರೆ ಉಳಿದವರು ಗಟ್ಟಿ ಆಟವಾಡಲು ವಿಫಲರಾದರು.
ಮುಂಬೈ ತಂಡ 14 ಪಂದ್ಯಗಳಲ್ಲಿ 10 ನೇ ಸೋಲು ಅನುಭವಿಸಿ ಅತ್ಯಂತ ನಿರಾಶಾದಾಯಕವಾಗಿ ಈ ಬಾರಿಯ ಐಪಿಎಲ್ ಅಭಿಯಾನ ಅಂತ್ಯಗೊಳಿಸಿತು. ಅಂಕಪಟ್ಟಿಯಲ್ಲಿ ಕೊನೆಯ ಸಥನದಲ್ಲಿಯೇ ಉಳಿಯಿತು. 14 ಪಂದ್ಯಗಳಲ್ಲಿ 7 ಸೋತಿರುವ ಲಕ್ನೋಗೆ ಪ್ಲೇ ಆಫ್ ಸಾಧ್ಯತೆ ರನ್ ರೇಟ್ ಆಧಾರದ ಮೇಲೆ ಕಷ್ಟ. ಶನಿವಾರ ನಡೆಯಲಿರುವ ಚೆನ್ನೈ ಮತ್ತು ಆರ್ ಸಿಬಿ ನಡುವಿನ ಪಂದ್ಯ ನಿರ್ಣಾಯಕ ರೋಚಕ ಪಂದ್ಯವಾಗಿದೆ.