ಮಾರಕ ರೋಗಗಳ ಸಾಲಿಗೆ ಸೇರಿರುವ ಏಡ್ಸ್ ಹೆಸರು ಕೇಳಿದ ಕೂಡಲೇ ಎಲ್ಲರು ನಡುಗುತ್ತಾರೆ. ಈ ರೋಗಕ್ಕೆ 1988ರಲ್ಲಿ ಮೊದಲ ಬಾರಿ ಲಸಿಕೆಯನ್ನು ಕಂಡುಹಿಡಿಯಲಾಗಿತ್ತು. ಅಂದಿನಿಂದ ಪ್ರತಿವರ್ಷ ಪ್ರಪಂಚದಾದ್ಯಂತ ಮೇ 18ರಂದು ವಿಶ್ವ ಏಡ್ಸ್ ಲಸಿಕಾ ದಿನವನ್ನಾಗಿ ಆಚರಿಸಲಾಗುತ್ತದೆ. ಇದರ ಬಗ್ಗೆ ಮಾಹಿತಿ ಇಲ್ಲಿದೆ.
ಗಂಡು ಮಕ್ಕಳೇ ಇನ್ಮೇಲೆ ನೀವು ನೈಲ್ ಪಾಲಿಶ್ ಹಚ್ಚಿ.. ಈ ಲಾಭ ಪಡೆಯಿರಿ..!
ಮೇ 18, 1988 ರಂದು, ಮೊದಲ ವಿಶ್ವ ಏಡ್ಸ್ ಲಸಿಕೆ ದಿನವನ್ನು ಆಚರಿಸಲಾಯಿತು. ವಿಶ್ವ ಏಡ್ಸ್ ಲಸಿಕೆ ದಿನದ ಪರಿಕಲ್ಪನೆಯನ್ನು 1987ರಲ್ಲಿ ಅಂದಿನ ಅಮೆರಿಕಾ ಅಧ್ಯಕ್ಷ ಬಿಲ್ ಕ್ಲಿಂಟನ್ ತಮ್ಮ ಭಾಷಣದಲ್ಲಿ ಪ್ರಸ್ತಾಪನೆ ಮಾಡಿದರು. ಮೋರ್ಗಾನ್ ಸ್ಟೇಟ್ ಯೂನಿವರ್ಸಿಟಿಯಲ್ಲಿ ಇವರ ಭಾಷಣದಿಂದ ಸ್ಫೂರ್ತಿಗೊಂಡು ಲಸಿಕೆ ಕಂಡು ಹಿಡಿಯುವ ಕೆಲಸಕ್ಕೆ ಕೈ ಹಾಕಿದರು. ಈ ಮಹಾ ಮಾರಿಯನ್ನು ತೊಡೆದು ಹಾಕಲು ಲಸಿಕೆಯನ್ನು ತಯಾರಿಸಲು ವಿಜ್ಞಾನ ಮತ್ತು ತಂತ್ರಜ್ಞಾನವನ್ನು ಬಳಸುವುದರ ಪ್ರಾಮುಖ್ಯತೆಯ ಕುರಿತು ಭಾಷಣದಲ್ಲಿ ವಿವರಿಸಿದ್ದರು.
ಎಚ್ಐವಿ ಸೋಂಕನ್ನು ತಡೆಗಟ್ಟುವ ಕ್ರಮಗಳ ಬಗ್ಗೆ ಎಲ್ಲ ಜನರಲ್ಲಿ ಅರಿವು ಮೂಡಿಸುವುದು, ಏಡ್ಸ್ ನಿರ್ಮೂಲನೆಯ ಕುರಿತು ಜಾಗೃತಿ ಮೂಡಿಸುವ ಉದ್ದೇಶವನ್ನು ಹೊಂದಿದೆ. ಈ ದಿನದಂದು ಹೆಚ್ ಐವಿ / ಏಡ್ಸ್ ಲಸಿಕೆ ಬಗ್ಗೆ ಜಾಗೃತಿ ಮೂಡಿಸಲು ಪ್ರಪಂಚದಾದ್ಯಂತದ ಹಲವಾರು ಎನ್ ಜಿ ಒಗಳು ಹಾಗೂ ಸರ್ಕಾರಗಳು ವಿಭಿನ್ನ ಕಾರ್ಯಕ್ರಮಗಳನ್ನು ಆಯೋಜಿಸುತ್ತವೆ.