ಪ್ರತಿ ಋತುವಿನಲ್ಲಿ ನೊಣಗಳು ಕಾಣಿಸಿಕೊಳ್ಳುತ್ತವೆ. ಆದ್ರೆ ಬೇಸಿಗೆ ಮತ್ತು ಮಳೆಗಾಲದಲ್ಲಿ ಅವುಗಳ ಸಂಖ್ಯೆ ಹೆಚ್ಚು. ನೊಣಗಳ ಸಂತಾನೋತ್ಪತ್ತಿ ಸಾಮರ್ಥ್ಯ ಹೆಚ್ಚು. ಒಮ್ಮೆ ಮೊಟ್ಟೆ ಇಟ್ಟರೆ ಅನೇಕ ನೊಣಗಳು ಜನ್ಮತಳೆಯುತ್ತವೆ. ನೊಣ ಮನೆ ತುಂಬ ಇದ್ರೂ ಅನೇಕರು ಇದನ್ನು ನಿರ್ಲಕ್ಷ್ಯ ಮಾಡ್ತಾರೆ. ಒಂದು ಎರಡು ನೊಣ ಮನೆ ಸೇರಿದಾಗ್ಲೇ ಅದನ್ನು ತೊಲಗಿಸಬೇಕು.
ಇಲ್ಲ ಅಂದ್ರೆ ನೊಣಗಳ ಸಂಖ್ಯೆ ದಿನೇ ದಿನೇ ಹೆಚ್ಚಾಗಿ ನಂತ್ರ ಅದ್ರ ನಿಯಂತ್ರಣ ಕಷ್ಟವಾಗುತ್ತದೆ. ನೊಣ ನಿಯಂತ್ರಣಕ್ಕೆ ಮಾರುಕಟ್ಟೆಯಲ್ಲಿ ಅನೇಕ ಸ್ಪ್ರೇ ಲಭ್ಯವಿದೆ. ಆದ್ರೆ ಎಲ್ಲವೂ ನೊಣ ಓಡಿಸುವ ಸಂಪೂರ್ಣ ಸಾಮರ್ಥ್ಯ ಹೊಂದಿಲ್ಲ. ಈ ಸ್ಪ್ರೇ ಅಪಾಯಕಾರಿಯಾಗಿದ್ದು, ಎಲ್ಲ ಕಡೆ ಅದ್ರ ಸ್ಪ್ರೇ ಸಾಧ್ಯವಿಲ್ಲ. ಮನೆಯಲ್ಲಿರುವ ವಸ್ತುಗಳನ್ನೇ ಸ್ಪ್ರೇತರ ಬಳಸಿ ನೀವು ನೊಣ ಓಡಿಸಬಹುದು.
- ನೊಣಗಳ ಕಾಟದಿಂದ ತಪ್ಪಿಸಿಕೊಳ್ಳಲು ನೀವು ವಿನೆಗರ್ ಮತ್ತು ಡಿಶ್ ಸೋಪ್ ಬಳಸಿ. ಒಂದು ಆಳವಿಲ್ಲ ಬೌಲ್ ಗೆ ಆಪಲ್ ಸೈಡರ್ ವಿನೆಗರ್ ಮತ್ತು ಒಂದು ಚಮಚ ಸಕ್ಕರೆ ಹಾಕಿ. ಇದಕ್ಕೆ ಸ್ವಲ್ಪ ಡಿಶ್ ಸೋಪ್ ಸೇರಿಸಿ.
- ನೊಣದ ಕಾಟ ಅಡುಗೆ ಮನೆಯಲ್ಲಿ ಹೆಚ್ಚಾಗಿದೆ ಎಂದಾದ್ರೆ ಅಡುಗೆ ಮನೆ ಕಟ್ಟೆ ಮೇಲೆಲ್ಲ ಉಪ್ಪು ಬೆರೆಸಿದ ಅರಿಶಿನ ಉದುರಿಸಿ.
- ನೊಣಗಳನ್ನು ಓಡಿಸಲು ನೀವು ಕಾಳುಮೆಣಸಿನ ಸ್ಪ್ರೇ ಬಳಸಿ. ಒಂದು ಕಪ್ ನೀರು ಕುದಿಸಿ ಅದಕ್ಕೆ ಉಪ್ಪು ಹಾಗೂ ಕಾಳುಮೆಣಸಿನ ಪುಡಿಯನ್ನು ಹಾಕಿ ಕುದಿಸಿ, ಅದು ತಣ್ಣಗಾದ ಮೇಲೆ ಸ್ಪ್ರೇ ಬಾಟಲ್ ಗೆ ಹಾಕಿ ಬಳಸಿ. ಇದು ನೊಣವನ್ನು ಓಡಿಸುತ್ತದೆ.
- ಮೊದಲು ಸೇಬು ಹಣ್ಣನ್ನು ಅರ್ಧ ಕತ್ತರಿಸಿ. ಅದಕ್ಕೆ ಲವಂಗವನ್ನು ಚುಚ್ಚಿ, ನೊಣ ಬರುವ ಜಾಗದಲ್ಲಿ ಇಡಿ. ಹೀಗೆ ಪ್ರತಿ ದಿನ ಮಾಡ್ತಾ ಬಂದ್ರೆ ನೊಣ ನಿಯಂತ್ರಣಕ್ಕೆ ಬರುತ್ತದೆ.
- ಒಂದು ಚಮಚ ಕೆಂಪು ಮೆಣಸಿನ ಪುಡಿಯನ್ನು ನೀರಿನಲ್ಲಿ ಬೆರೆಸಿ ಬಾಗಿಲು ಮತ್ತು ಕಿಟಕಿಗಳ ಬಳಿ ಚಿಮುಕಿಸುವುದರಿಂದ ಮನೆಯೊಳಗೆ ನೊಣಗಳು ಬರೋದಿಲ್ಲ.
- ಉಪ್ಪು ಮತ್ತು ನಿಂಬೆ ಹಣ್ಣಿನ ರಸ ನೊಣ ಓಡಿಸಲು ಸಹಾಯ ಮಾಡುತ್ತದೆ. ಒಂದು ಕಪ್ ನೀರಿಗೆ ನಿಂಬೆ ರಸ ಮತ್ತು ಎರಡು ಚಮಚ ಉಪ್ಪನ್ನು ಬೆರೆಸಿ ಮಿಶ್ರಣವನ್ನು ಚೆನ್ನಾಗಿ ತಯಾರಿಸಿ. ಈಗ ಅದನ್ನು ಸ್ಪ್ರೇ ಬಾಟಲಿಯಲ್ಲಿ ತುಂಬಿಸಿ ನೊಣದ ಮೇಲೆ ಸ್ಪ್ರೇ ಮಾಡಿ.
- ನೊಣಗಳನ್ನು ಹಿಮ್ಮೆಟ್ಟಿಸಲು, ಒಂದು ಲೋಟ ಹಾಲನ್ನು ಸ್ವಲ್ಪ ಕಾಳುಮೆಣಸು ಮತ್ತು ಸಕ್ಕರೆಯೊಂದಿಗೆ ಸ್ವಲ್ಪ ಕುದಿಸಿ, ನಂತರ ಮಿಶ್ರಣವನ್ನು ಅಡುಗೆಮನೆಯ ಮೂಲೆಗೂ ಹಾಕಿ. ಈ ಮಿಶ್ರಣ ಹಾಲು ಇದ್ದರೆ ಅಡುಗೆ ಮನೆಗೆ ನೊಣ ಬರುವುದಿಲ್ಲ.
- ನೊಣಗಳನ್ನು ಹಿಮ್ಮೆಟ್ಟಿಸಲು ನೀವು ಪೇಪರ್ ಟವೆಲ್ ಬಳಸಬಹುದು. ಯಾವುದೇ ದ್ರವವನ್ನು ಮಡಕೆ ಅಥವಾ ಹೂದಾನಿಗಳಲ್ಲಿ ಇರಿಸಿ, ಅದರ ಬಾಯಿಯ ಮೇಲೆ ಕಾಗದದ ಟವಲ್ ಅನ್ನು ಹಾಕಿದರೆ ನೊಣಗಳ ಬಾಧೆ ಕಡಿಮೆಯಾಗುತ್ತದೆ. ಇದು ವಾಸ್ತವವಾಗಿ ನೊಣಕ್ಕೆ ಬಲೆಯಾಗಿದೆ.