ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ನಾಳೆ(ಶನಿವಾರ) ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಆಡಲಿದೆ. ಗೆದ್ದರೆ ಪ್ಲೇ ಆಫ್ ಟಿಕೆಟ್ ಅಧಿಕೃತಗೊಳ್ಳಲಿದೆ. ಆದರೆ, ಆರ್ಸಿಬಿ ಪಾಲಿಗೆ ಮಳೆ ವಿಲನ್ ಆಗುವ ಎಲ್ಲ ಸಾಧ್ಯತೆ ಅಧಿಕವಾಗಿ ಗೋಚರಿಸಿದೆ.
ಹವಾಮಾನ ಇಲಾಖೆ ಶನಿವಾರ ಶೇ.89 ರಷ್ಟು ಮಳೆ(Rain forecast for Bengaluru) ಇದೆ ಎಂದು, ಒಂದು ವಾರಗಳ ಹಿಂದೆಯೇ ಎಚ್ಚರಿಕೆ ನೀಡಿತ್ತು. ಶುಕ್ರವಾರ ಬೆಳಗ್ಗಿನಿಂದಲೇ ಬೆಂಗಳೂರಿನಲ್ಲಿ ಭಾರೀ ಮಳೆಯೂ ಆಗಿದೆ. ಹೀಗಾಗಿ ಶನಿವಾರವೂ ಮಳೆ ಇರುವುದು ಖಚಿತಗೊಂಡಿದೆ. ಒಂದೊಮ್ಮೆ ಮಳೆ ಬಂದು ಪಂದ್ಯ ರದ್ದಾದರೆ ಆರ್ಸಿಬಿ ಪ್ಲೇ ಆಫ್ನಿಂದ ಹೊರಬೀಳಲಿದೆ. 15 ಅಂಕ ಪಡೆಯುವ ಚೆನ್ನೈ ಪ್ಲೇ ಆಫ್ಗೆ ಎಂಟ್ರಿ ಕೊಡಲಿದೆ. ಈಗಾಗಲೇ ಮೂರು ತಂಡಗಳಾದ ಕೆಕೆಆರ್, ಸನ್ರೈಸರ್ಸ್ ಹೈದರಾಬಾದ್ ಮತ್ತು ರಾಜಸ್ಥಾನ್ ಪ್ಲೇ ಆಫ್ ತಲುಪಿದೆ. ಒಂದು ಸ್ಥಾನ ನಾಳೆ ನಿರ್ಧಾರವಾಗಲಿದೆ. ಒಂದೊಮ್ಮೆ ಆರ್ಸಿಬಿ ತಂಡ ಚೆನ್ನೈ ವಿರುದ್ಧ ಗೆದ್ದರೂ ಕೂಡ ಪ್ಲೇ ಆಫ್ ಟಿಕೆಟ್ ಖಚಿತವಾಗುವುದಿಲ್ಲ. ರನ್ರೇಟ್ ಲೆಕ್ಕಾಚಾರದಲ್ಲಿ ಚೆನ್ನೈಯನ್ನು ಆರ್ಸಿಬಿ ಕನಿಷ್ಠ 18 ರನ್ನುಗಳಿಂದ ಮಣಿಸಬೇಕಿದೆ. ಚೇಸಿಂಗ್ ಲೆಕ್ಕಾಚಾರ ಬೇರೆಯೇ ಇದೆ. ಕನಿಷ್ಠ 11 ಎಸೆತ ಬಾಕಿ ಇರುವಾಗಲೇ ಗುರಿ ಮುಟ್ಟಬೇಕು. ಸಣ್ಣ ಅಂತರದ ಗೆಲುವು ಕಂಡರೆ ಕಷ್ಟ.
ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಅತ್ಯಾಧುನಿಕ ಸಬ್ ಏರ್ ಸಿಸ್ಟಂ ಹೊಂದಿರುವ ಕಾರಣ. ಮಳೆ ಬಂದರೂ ಶೀಘ್ರವಾಗಿ ಮೈದಾನದಲ್ಲಿನ ನೀರನ್ನು ಹೀರಿಕೊಳ್ಳುತ್ತದೆ. ಹೀಗಾಗಿ ಎಷ್ಟೇ ಮಳೆಯಾದರೂ ಕೆಲವೇ ನಿಮಿಷಗಳಲ್ಲಿ ಮೈದಾನವನ್ನು ಸಜ್ಜುಗೊಳಿಸಬಹುದು. ಈ ಕಾರಣದಿಂದಾಗಿ ಬೆಂಗಳೂರಿನಲ್ಲಿ ಮಳೆ ಬಂದರೂ ಸೀಮಿತ ಓವರ್ಗಳ ಪಂದ್ಯವನ್ನು ನಿರೀಕ್ಷಿಸಬಹುದು