ನವದೆಹಲಿ:- ನಾನು ಅಪ್ರಾಮಾಣಿಕನಾಗಿದ್ದರೆ ನನ್ನನ್ನು ಗಲ್ಲಿಗೇರಿಸಿ ಎಂದು ಪ್ರಧಾನಿ ಮೋದಿ ಅವರು ವಿಪಕ್ಷಕ್ಕೆ ತಿರುಗೇಟು ನೀಡಿದ್ದಾರೆ.
Breaking: ನೇಣು ಬಿಗಿದ ಸ್ಥಿತಿಯಲ್ಲಿ ಟೆಕ್ಕಿ ಪತ್ನಿಯ ಮೃತದೇಹ ಪತ್ತೆ..!
ತಮ್ಮ ಸರ್ಕಾರವು ಕೆಲವು ಆಯ್ದ ಕೈಗಾರಿಕೋದ್ಯಮಿಗಳ ಪರವಾಗಿದೆ ಎಂಬ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಅವರ ಆರೋಪಕ್ಕೆ ಪ್ರತಿಕ್ರಿಯಿಸಿದ ಮೋದಿ ಅವರು, ʼʼದೇಶದ ಸಂಪತ್ತಿನ ಸೃಷ್ಟಿಕರ್ತರ ಪರವಾಗಿ ನಾನು ದೃಢವಾಗಿ ನಿಲ್ಲುತ್ತೇನೆ ಮತ್ತು ಯಾರಿಗಾದರೂ ಅಪ್ರಾಮಾಣಿಕ ರೀತಿಯಲ್ಲಿ ಲಾಭ ಮಾಡಿಕೊಟ್ಟರೆ ಶಿಕ್ಷೆಯನ್ನು ಎದುರಿಸಲು ಸಿದ್ಧʼʼ ಎಂದು ತಿಳಿಸಿದ್ದಾರೆ
ಜವಾಹರಲಾಲ್ ನೆಹರೂ ಕೂಡ ಸಂಸತ್ತಿನಲ್ಲಿ ʼಬಿರ್ಲಾ-ಟಾಟಾ ಕಿ ಸರ್ಕಾರ್ʼನಂತಹ ನಿಂದನೆಗಳನ್ನು ಎದುರಿಸುತ್ತಿದ್ದರು. ಈ ಕುಟುಂಬದ (ನೆಹರೂ) ಸಮಸ್ಯೆಯೆಂದರೆ ಈಗಲೂ ನಾನು ಅದೇ ನಿಂದನೆಗಳನ್ನು ಎದುರಿಸಬೇಕೆಂದು ಬಯಸುತ್ತದೆʼʼ ಎಂದು ಆರೋಪಿಸಿದ್ದಾರೆ. ʼʼದೇಶದ ಸಂಪತ್ತಿನ ಸೃಷ್ಟಿಕರ್ತರನ್ನು ಗೌರವಿಸಬೇಕು ಎಂದು ಹೇಳಲು ನನಗೆ ನಾಚಿಕೆಯಾಗುವುದಿಲ್ಲ. ಆಗಸ್ಟ್ 15ರ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮದ ಅತಿಥಿಗಳ ಪಟ್ಟಿ ತಯಾರಿಸುವಾಗ ನಾನು ಕ್ರೀಡಾಪಟುಗಳು ಮತ್ತು ಸಾಧಕರ ಹೆಸರನ್ನು ಸೇರಿಸುತ್ತೇನೆ. ದೇಶವು ತನ್ನ ಸಾಧಕರನ್ನು ಪೂಜಿಸದಿದ್ದರೆ ಮತ್ತು ಗೌರವಿಸದಿದ್ದರೆ, ವಿಜ್ಞಾನಿ ಮತ್ತು ಪಿಎಚ್ಡಿ ಮಾಡುವ ಜನರನ್ನು ನಾವು ಹೇಗೆ ಹೊಂದಲು ಸಾಧ್ಯ? ಎಲ್ಲ ವರ್ಗದ ಸಾಧಕರನ್ನು ಗೌರವಿಸಬೇಕು ಎಂಬುದು ನನ್ನ ಅಭಿಮತ” ಎಂದು ಅವರು ಹೇಳಿದ್ದಾರೆ.
ನಾನು ಅಪ್ರಾಮಾಣಿಕನಾಗಿದ್ದರೆ ನನ್ನನ್ನು ಗಲ್ಲಿಗೇರಿಸಿ. ನಾನು ತಪ್ಪು ರೀತಿಯಲ್ಲಿ ಯಾರಿಗಾದರೂ ಪ್ರಯೋಜನ ಉಂಟು ಮಾಡಿದ್ದರೆ ನನ್ನನ್ನು ಗಲ್ಲಿಗೇರಿಸಬೇಕು. ಆದರೆ ನನ್ನ ದೇಶದ ಸಂಪತ್ತಿನ ಸೃಷ್ಟಿಕರ್ತರನ್ನು ನಾನು ಗೌರವಿಸುತ್ತೇನೆ” ಎಂದು ಮೋದಿ ಹೇಳಿದ್ದಾರೆ. ಆ ಮೂಲಕ ಅದಾನಿ-ಅಂಬಾನಿಯಂತಹ ಶ್ರೀಮಂತ ಉದ್ಯಮಿಗಳಿಗೆ ನೆರವು ನೀಡಿದ್ದಾರೆ ಎನ್ನುವ ವಿಪಕ್ಷಗಳ ಆರೋಪಕ್ಕೆ ಸೂಕ್ಷ್ಮವಾಗಿ ತಿರುಗೇಟು ನೀಡಿದ್ದಾರೆ