ಹೈದರಾಬಾದ್ನಲ್ಲಿ ಸಿಕ್ಕಾಪಟ್ಟೆ ಮಳೆ ಇರುವ ಹಿನ್ನೆಲೆ SRH ಪಂದ್ಯದ ಟಾಸ್ ವಿಳಂಬ ಆಗಿದ್ದು, RCB ಅಭಿಮಾನಿಗಳಿಗೆ ಢಢವ-ಢವ ಶುರುವಾಗಿದೆ.
ಎರಡು ಗಂಟೆಗಳ ಹಿಂದೆ ಧಾರಾಕಾರ ಮಳೆಯಾಗಿತ್ತು. ಬಿರುಗಾಳಿಯೂ ಬೀಸಿತು. ಪಂದ್ಯದ ವೇಳೆ ಮಳೆಯಾಗುವ ಸಾಧ್ಯತೆಯೂ ಇದೆ. ಪಂದ್ಯದ ಮೇಲೆ ಪರಿಣಾಮ ಬೀರಿದರೆ ಸನ್ರೈಸರ್ಸ್ಗೆ ಹಿನ್ನಡೆಯುಂಟಾಗಲಿದೆ
ಇಂದು ಐಪಿಎಲ್ 2024ರ 66ನೇ ಪಂದ್ಯದಲ್ಲಿ ಸನ್ ರೈಸರ್ಸ್ ಹೈದರಾಬಾದ್ ತಂಡ ಗುಜರಾತ್ ಟೈಟಾನ್ಸ್ ತಂಡವನ್ನು ಎದುರಿಸುತ್ತಿದೆ. ಹೈದರಾಬಾದ್ನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಈ ಪಂದ್ಯ ನಡೆಯುತ್ತಿದೆ. ಸನ್ರೈಸರ್ಸ್ ತಂಡ ಪ್ಲೇಆಫ್ ತಲುಪಲು ಒಂದು ಗೆಲುವಿನ ಅಂತರದಲ್ಲಿದೆ. ಇಂದಿನ ಪಂದ್ಯದಲ್ಲಿ ಗೆದ್ದರೆ ತಂಡವು ಪ್ಲೇ ಆಫ್ಗೆ ಪ್ರವೇಶಿಸಲಿದೆ. ಅದೇ ಸಮಯದಲ್ಲಿ ಗುಜರಾತ್ ಟೈಟಾನ್ಸ್ ತಂಡ ಈಗಾಗಲೇ ಪ್ಲೇ ಆಫ್ ರೇಸ್ನಿಂದ ಹೊರಗುಳಿದಿದೆ.