ಸನ್ರೈಸರ್ಸ್ ಹೈದರಾಬಾದ್ ತಂಡಕ್ಕೆ ಗುರುವಾರ ಗುಜರಾತ್ ಟೈಟಾನ್ಸ್ ಸವಾಲು ಎದುರಾಗಲಿದೆ.
IPL 2024: IPLನಲ್ಲಿಂದು SRH vs GT ಮುಖಾಮುಖಿ.! ಪ್ಲೇ ಆಫ್ʼಗೆ ಎಂಟ್ರಿ ತವಕದಲ್ಲಿ ಸನ್ʼರೈಸರ್ಸ್
ಸನ್ರೈಸರ್ಸ್ ಟೂರ್ನಿಯಲ್ಲಿ 12 ಪಂದ್ಯಗಳನ್ನಾಡಿದ್ದು, 7ರಲ್ಲಿ ಗೆದ್ದು 14 ಅಂಕ ಸಂಪಾದಿಸಿದೆ. ತಂಡದ ನೆಟ್ ರನ್ರೇಟ್(+0.406) ಕೂಡಾ ಉತ್ತಮವಾಗಿರುವುದರಿಂದ ಪ್ಲೇ-ಆಫ್ನ ಸನಿಹದಲ್ಲಿದೆ. ಇನ್ನೆರಡು ಪಂದ್ಯಗಳನ್ನೂ ಗೆದ್ದು ಅಗ್ರ-2ರಲ್ಲಿ ಸ್ಥಾನ ಗಿಟ್ಟಿಸಿಕೊಳ್ಳುವುದು ತಂಡದ ಮುಂದಿರುವ ಗುರಿ. ಎರಡೂ ಪಂದ್ಯಗಳಲ್ಲಿ ಸೋತರೆ ಪ್ಲೇ-ಆಫ್ ರೇಸ್ನಿಂದ ಹೊರಬೀಳುವ ಸಾಧ್ಯತೆಯೂ ಇದೆ. ಅತ್ತ ಗುಜರಾತ್ ಈಗಾಗಲೇ ಪ್ಲೇ-ಆಫ್ ಕನಸು ಭಗ್ನಗೊಳಿಸಿದೆ. 13ರಲ್ಲಿ ಕೇವಲ 5 ಪಂದ್ಯಗಳನ್ನಾಡಿದ್ದು, 11 ಅಂಕ ಸಂಪಾದಿಸಿದೆ. ತಂಡ ಈಗಾಗಲೇ ಅಧಿಕೃತವಾಗಿ ಹೊರಬಿದ್ದಿರುವುದರಿಂದ ಈ ಪಂದ್ಯವನ್ನು ಪ್ರತಿಷ್ಠೆಗಾಗಿ ಆಡಲಿದ್ದು, ಗೆಲುವಿನೊಂದಿಗೆ ಟೂರ್ನಿಗೆ ವಿದಾಯ ಹೇಳಲು ಕಾಯುತ್ತಿದೆ.
ಸನ್ರೈಸರ್ಸ್ ಹೈದರಾಬಾದ್ ತಂಡವು ಬ್ಯಾಟಿಂಗ್ನಲ್ಲಿ ಅಭಿಷೇಕ್ ಶರ್ಮಾ, ಟ್ರ್ಯಾವಿಸ್ ಹೆಡ್, ಹೆನ್ರಿಚ್ ಕ್ಲಾಸೇನ್ ಅವರನ್ನು ನೆಚ್ಚಿಕೊಂಡಿದೆ. ಇನ್ನು ಬೌಲಿಂಗ್ನಲ್ಲಿ ನಾಯಕ ಪ್ಯಾಟ್ ಕಮಿನ್ಸ್, ಭುವನೇಶ್ವರ್ ಕುಮಾರ್ ಹಾಗೂ ಟಿ ನಟರಾಜನ್ ಭರ್ಜರಿ ಫಾರ್ಮ್ನಲ್ಲಿದ್ದು, ಈ ಪಂದ್ಯ ಗೆದ್ದು ಪ್ಲೇ ಸ್ಥಾನ ಖಚಿತಪಡಿಸಿಕೊಳ್ಳಲು ಎದುರು ನೋಡುತ್ತಿದೆ. ಇನ್ನೊಂದೆಡೆ ಈಗಾಗಲೇ ಪ್ಲೇ ಆಫ್ ರೇಸ್ನಿಂದ ಹೊರಬಿದ್ದಿದ್ದರುವ ಶುಭ್ಮನ್ ಗಿಲ್ ನೇತೃತ್ವದ ಗುಜರಾತ್ ಟೈಟಾನ್ಸ್ ಪ್ರತಿಷ್ಠೆಗಾಗಿ ಈ ಪಂದ್ಯವನ್ನಾಡುತ್ತಿದೆ. ತವರಿನಲ್ಲಿ ಅಮೋಘ ಪ್ರದರ್ಶನ ತೋರುತ್ತಿರುವ ಆರೆಂಜ್ ಆರ್ಮಿ ಮೇಲೆ ಗೆಲುವು ಸಾಧಿಸಬೇಕಿದ್ದರೆ ಗುಜರಾತ್ ತಂಡವು ಸಂಘಟಿತ ಪ್ರದರ್ಶನ ತೋರಬೇಕಿದೆ.