ಪಂಜಾಬ್ ಕಿಂಗ್ಸ್ ತಂಡದ ಫಾಸ್ಟ್ ಬೌಲರ್ ಕಗಿಸೊ ರಬಾಡ 17ನೇ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಿಂದ ಹಿಂದೆ ಸರಿದಿದ್ದಾರೆ. ಐಪಿಎಲ್ 2024 ಟೂರ್ನಿಯ ಅಂಕಪಟ್ಟಿಯಲ್ಲಿ ಕೇವಲ 8 ಅಂಕಗಳೊಂದಿಗೆ ಕೊನೇ ಸ್ಥಾನದಲ್ಲಿರುವ ಪಂಜಾಬ್ ಕಿಂಗ್ಸ್ ತಂಡ ಲೀಗ್ ಹಂತದಲ್ಲಿ ಇನ್ನು 2 ಪಂದ್ಯಗಳನ್ನು ಆಡುವುದು ಬಾಕಿಯಿದೆ. ಅಂತಿಮ ಎರಡೂ ಪಂದ್ಯ ಗೆದ್ದು ಕೊನೇ ಸ್ಥಾನ ತಪ್ಪಿಸಿಕೊಂಡು ಮಾನ ಉಳಿಸಿಕೊಳ್ಳುವ ಕಡೆಗೆ ಎದುರು ನೋಡುತ್ತಿರುವ ಪಂಜಾಬ್ ತಂಡಕ್ಕೆ ಈಗ ದೊಡ್ಡ ಆಘಾತ ಎದುರಾಗಿದೆ. ತಂಡದ ಪ್ರಮುಖ ಸ್ಟ್ರೈಕ್ ಬೌಲರ್ ಸೇವೆ ಇಲ್ಲದೆ ಆಡುವ ಪರಿಸ್ಥಿತಿ ಎದುರಾಗಿದೆ.
ಪ್ಲೇ ಆಫ್ಸ್ ರೇಸ್ನಿಂದ ಹೊರಬಿದ್ದಿರುವ ಪಂಜಾಬ್ ಕಿಂಗ್ಸ್ ತಂಡ ತನ್ನ ಕೊನೇ ಎರಡು ಪಂದ್ಯಗಳಲ್ಲಿ ಕ್ರಮವಾಗಿ ರಾಜಸ್ಥಾನ್ ರಾಯಲ್ಸ್ (ಮೇ 15) ಮತ್ತು ಸನ್ರೈಸರ್ಸ್ ಹೈದರಾಬಾದ್ (ಮೇ 19) ಎದುರು ಪೈಪೋಟಿ ನಡೆಸಲಿದೆ. ರಾಜಸ್ಥಾನ್ ರಾಯಲ್ಸ್ ತಂಡ ಈಗಾಗಗಲೇ ಅಂತಿಮ ನಾಲ್ಕರ ಘಟ್ಟ ತಲುಪಾಗಿದೆ. ಮತ್ತೊಂದೆಡೆ ಪ್ಲೇ-ಆಫ್ಸ್ ಟಿಕೆಟ್ ಎದುರು ನೋಡುತ್ತಿರುವ ಸನ್ರೈಸರ್ಸ್ ಹೈದರಾಬಾದ್ ತಂಡದ ಹಾದಿಗೆ ಮುಳ್ಳಾಗುವ ಅವಕಾಶ ಪಂಜಾಬ್ ಕೈಲಿದೆ. ಪಂಜಾಬ್ ಗೆದ್ದರೆ ಮುಂದಿನ ಹಂತಕ್ಕೆ ಎಸ್ಆರ್ಎಚ್ ತೇರ್ಗಡೆಯಾಗುವುದಿಲ್ಲ.
BMTC Recruitment: ದ್ವಿತೀಯ PUC ಪಾಸಾದವರಿಗೆ BMTCಯಲ್ಲಿ ಬಂಪರ್ ಉದ್ಯೋಗ..! ಈಗಲೇ ಅರ್ಜಿ ಸಲ್ಲಿಸಿ
ಇನ್ನು ದಕ್ಷಿಣ ಆಫ್ರಿಕಾ ಕ್ರಿಕೆಟ್ ಮಂಡಳಿ ಮೂಲಗಳು ನೀಡಿರುವ ಮಾಹಿತಿ ಪ್ರಕಾರ ಅನುಭವಿ ಬಲಗೈ ವೇಗದ ಬೌಲರ್ ಕಗಿಸೊ ರಬಾಡ ಕಾಲಿನ ಮೂಳೆಯಲ್ಲಿನ ಸೋಂಕಿನ ಸಮಸ್ಯೆ ಎದುರಿಸಿದ್ದಾರೆ. 2024ರ ಸಾಲಿನ ಐಸಿಸಿ ಟಿ20 ಕ್ರಿಕೆಟ್ ವಿಶ್ವಕಪ್ ಟೂರ್ನಿ ಜೂನ್ 1ರಂದು ವೆಸ್ಟ್ ಇಂಡೀಸ್ ಮತ್ತು ಅಮೆರಿಕದ ಜಂಟಿ ಆತಿಥ್ಯದಲ್ಲಿ ಶುರುವಾಗಲಿದ್ದು, ಮಹತ್ವದ ಟೂರ್ನಿಗೂ ಮುನ್ನ ಫಿಟ್ನೆಸ್ ಕಂಡುಕೊಳ್ಳುವ ಲೆಕ್ಕಾಚಾರದಲ್ಲಿ ಕಗಿಸೊ ರಬಾಡ ತಾಯ್ನಾಡಿಗೆ ಹಿಂದಿರುಗಿದ್ದಾರೆ.
“ಪ್ರೊಟೀಯಾಸ್ (ದಕ್ಷಿಣ ಆಫ್ರಿಕಾ) ತಂಡದ ಫಾಸ್ಟ್ ಬೌಲರ್ ಕಗಿಸೊ ರಬಾಡ ತಾಯ್ನಾಡಿಗೆ ಮರಳಿದ್ದಾರೆ. ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಕಡೆ ಎರಡು ಪಂದ್ಯಗಳಲ್ಲಿ ಅವರು ಆಡುತ್ತಿಲ್ಲ. ಅವರ ಕಾಲಿನ ಮೂಳೆಯಲ್ಲಿ ಸೋಂಕು ಕಾಣಿಸಿಕೊಂಡಿದ್ದು, ಅದರ ಚಿಕಿತ್ಸೆ ಸಲುವಾಗಿ ತವರಿಗೆ ಹಿಂದಿರುಗಿದ್ದಾರೆ,” ಎಂದು ಕ್ರಿಕೆಟ್ ಸೌತ್ ಆಫ್ರಿಕಾ ತನ್ನ ಹೇಳಿಕೆಯಲ್ಲಿ ತಿಳಿಸಿದೆ.