ಬೆಂಗಳೂರು:- ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಮೇ 19 ರಿಂದ ಎರಡು ದಿನ ಭಾರೀ ಮಳೆ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.
ಲಾಲ್ ಬಾಗ್ ಮಾವಿನ ಮೇಳಕ್ಕೆ ಫಿಕ್ಸ್ ಆಯ್ತು ಡೇಟ್.. ಮೇ. 24 ರಿಂದ ಆರಂಭ!
ಕರಾವಳಿ ಜಿಲ್ಲೆಗಳಾದ ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ, ಉತ್ತರ ಒಳನಾಡಿನ ಬೆಳಗಾವಿ, ಧಾರವಾಡ, ಗದಗ, ಹಾವೇರಿ, ಕಲಬುರಗಿ, ಕೊಪ್ಪಳ, ವಿಜಯಪುರ, ಯಾದಗಿರಿ, ದಕ್ಷಿಣ ಒಳನಾಡಿನ ದಾವಣಗೆರೆ, ಹಾಸನ, ಕೊಡಗು, ಶಿವಮೊಗ್ಗ ಸೇರಿದಂತೆ ಹಲವೆಡೆ ಮಳೆಯಾಗಲಿದೆ.
ಸಿದ್ದಾಪುರ, ಬೇವೂರು, ಹುಕ್ಕೇರಿ, ಹಿಡಕಲ್ ಡ್ಯಾಂ, ತರೀಕೆರೆ, ಕುಷ್ಟಗಿ, ರಬಕವಿ, ಲೋಂಡಾ, ಯಡ್ರಾಮಿ, ಚಿತ್ತಾಪುರ, ನೆಲೋಗಿ, ಬೀದರ್, ಬಿಳಗಿ, ಸಿಂದಗಿ, ಗೋಕಾಕ್, ಇಂಡಿ, ಚಿಂಚೋಳಿ, ಗಂಗಾವತಿ, ಬಾಳೆಹೊನ್ನೂರು, ಶಿವಮೊಗ್ಗ, ಬನವಾಸಿ, ಬೈಲಹೊಂಗಲ, ಮುರಗೋಡ, ಕಕ್ಕೇರಿ, ಮಸ್ಕಿ, ಶೋರಾಪುರ, ದೇವದುರ್ಗ, ಕೆಂಭಾವಿ, ಸಿಂಧನೂರು, ಕಲಘಟಗಿ, ಕೂಡಲಸಂಗಮ, ನರಗುಂದ, ಕಮ್ಮರಡಿ, ಕೊಪ್ಪ, ತಿಪಟೂರಿನಲ್ಲಿ ಮಳೆಯಾಗಿದೆ.
ಎಚ್ಎಎಲ್ನಲ್ಲಿ 32.0ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ,21.6 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ, ನಗರದಲ್ಲಿ 30.4 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 23.2 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ, ಕೆಐಎಎಲ್ನಲ್ಲಿ 32.3 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 23.0 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ, ಜಿಕೆವಿಕೆಯಲ್ಲಿ 33.4 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 20.2 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ ದಾಖಲಾಗಿದೆ.
ಇಂದು ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ಕೋಲಾರ, ಮಂಡ್ಯ, ಮೈಸೂರು, ರಾಮನಗರ, ತುಮಕೂರು,ವಿಜಯನಗರದ ಕೆಲವು ಸ್ಥಳಗಳಲ್ಲಿ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ.