ಮನೆಯಲ್ಲೇ ಮಾವಿನ ಲಸ್ಸಿ ಮಾಡುವ ಸುಲಭ ವಿಧಾನವನ್ನು ಇಲ್ಲಿ ತಿಳಿದುಕೊಳ್ಳಿ. ಬಿಸಿಲಿನ ಬೇಗೆಯಿಂದ ಪಾರಾಗಲು ನಿಮಗೆ ಸಹಾಯ ಮಾಡುವ ಜ್ಯೂಸ್ಗಳಲ್ಲಿ ರುಚಿಕರವಾದ ಮ್ಯಾಂಗೋ ಲಸ್ಸಿ ಕೂಡಾ ಒಂದು. ನೀವು ಮಧುಮೇಹಿಗಳಾಗಿದ್ದಲ್ಲಿ ನೀವು ಸಕ್ಕರೆಯನ್ನು ಬಳಕೆ ಮಾಡದೆ ಕೂಡಾ ಲಸ್ಸಿಯನ್ನು ತಯಾರಿಸಬಹುದಾಗಿದೆ.
ಪ್ಲೇ ಆಫ್ ಫೈಟ್..! ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಪವರ್ಫುಲ್ ತಂಡ CSK ಅಥವಾ RCB ಯಾವುದು….!?
ಈ ಲಸ್ಸಿಯನ್ನು ಮಾಡಲು, ಮಾವಿನಕಾಯಿಯನ್ನು ಸಣ್ಣ ತುಂಡುಗಳಾಗಿ ಕತ್ತರಿಸಿ, ನಂತರ ಅದನ್ನು ಮಿಕ್ಸರ್ ಜಾರ್ನಲ್ಲಿ ಸೇರಿಸಿ ಮತ್ತು ಅದಕ್ಕೆ ಮೊಸರು, ಹಾಲು ಮತ್ತು ಐಸ್ ಕ್ಯೂಬ್ಗಳನ್ನು ಸೇರಿಸಿ . ಈಗ ಇದನ್ನು ಒಂದು ಗ್ಲಾಸಿಗೆ ಜಾಕಿ ಫ್ರಿಡ್ಜ್ನಲ್ಲಿ ಇರಿಸಿ. ಬಳಿಕ ಸ್ಪಲ್ಪ ಹೊತ್ತಿನ ನಂತರ ಕುಡಿಯಿರಿ. ಇಲ್ಲದಿದ್ದರೆ ಹಾಗೆಯೂ ಕುಡಿಯಬಹುದು. ಮಾವಿನ ಹಣ್ಣಿನ ಲಸ್ಸಿ ಜೀವಸತ್ವಗಳು ಮತ್ತು ಇತರ ಅನೇಕ ಪೋಷಕಾಂಶಗಳಲ್ಲಿ ಸಮೃದ್ಧವಾಗಿದೆ, ಇದರಲ್ಲಿಮೊಸರನ್ನು ಬಳಸಲಾಗುವುದರಿಂದ ಹೊಟ್ಟೆಗೆ ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ. ಆದರೆ ನೀವು ದಿನನಿತ್ಯ ಮಾವು ಲಸ್ಸಿಯನ್ನು ಕುಡಿಯುತ್ತಿದ್ದರೆ, ಅದು ಹೊಟ್ಟೆಗೆ ಸಂಬಂಧಿಸಿದ ಅನೇಕ ಸಮಸ್ಯೆಗಳನ್ನು ಉಂಟುಮಾಡಬಹುದು. ಆದ್ದರಿಂದ ನಿಯಮಿತವಾಗಿ ಕುಡಿಯಿರಿ.